More

    ಧೈರ್ಯವಿದ್ದರೆ ನನ್ನನ್ನು ಬಂಧಿಸಿ, ಜೈಲಿನಲ್ಲಿದ್ದೇ ಗೆದ್ದು ತೋರಿಸುತ್ತೇನೆ; ಬಿಜೆಪಿಗೆ ಮಮತಾ ಸವಾಲ್​

    ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನ ಸಭಾ ಚುನಾವಣೆ ನಡೆಯಲಿದೆ. ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷ ಮತ್ತು ಬಿಜೆಪಿ ಪಕ್ಷ ರಾಜ್ಯದಲ್ಲಿ ಭರ್ಜರಿ ಪ್ರಚಾರ ಆರಂಭಿಸಿಬಿಟ್ಟಿವೆ. ಬುಧವಾರ ಬಂಕುರದಲ್ಲಿ ಟಿಎಂಸಿಯ ಚುನಾವಣಾ ಪ್ರಚಾರ ಮೆರವಣಿಗೆ ನಡೆದಿದ್ದು, ಅದರಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಗೆ ಸವಾಲೊಂದನ್ನು ಹಾಕಿದ್ದಾರೆ.

    ಇದನ್ನೂ ಓದಿ: PHOTO GALLERY| ಟ್ರೆಡಿಷನಲ್​ ಲುಕ್​ನಲ್ಲಿ ಶರ್ಮಿಳಾ ಮಾಂಡ್ರೆ ಮಿಂಚಿಂಗ್​…

    ಬಿಜೆಪಿಯವರಿಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಲಿ. ನಾನು ಜೈಲಿನಲ್ಲಿದ್ದೇ ನನ್ನ ಪಕ್ಷವನ್ನು ಗೆಲ್ಲಿಸುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಬಿಜೆಪಿ ಈ ದೇಶಕ್ಕೆ ಒದಗಿರುವ ಅತ್ಯಂತ ದೊಡ್ಡ ಶಾಪ. ಅದು ಒಂದು ಪಕ್ಷವಲ್ಲ, ಬದಲಾಗಿ ಸುಳ್ಳಿನ ಕೊಂಪೆ ಎಂದು ಅವರು ಆರೋಪಿಸಿದ್ದಾರೆ.

    ನಮ್ಮಲ್ಲಿ ಕೆಲವರು ಈ ಬಾರಿ ಬಿಜೆಪಿ ರಾಜ್ಯದ ಆಡಳಿತಕ್ಕೆ ಬರುತ್ತದೆ ಎನ್ನುವ ಭ್ರಮೆಯಲ್ಲಿದ್ದಾರೆ. ಆದರೆ ಆ ರೀತಿ ಆಗಲು ಯಾವುದೇ ಸಾಧ್ಯತೆಗಳಿಲ್ಲ. ಟಿಎಂಸಿ ಪಕ್ಷ ಬಹುದೊಡ್ಡ ಅಂತರದೊಂದಿಗೆ ಆಡಳಿತಕ್ಕ ಬರಲಿದೆ. ಬಿಹಾರದಲ್ಲಿ ಏನಾಗಿದೆ ಎನ್ನುವುದನ್ನು ನೀವೇ ನೋಡಿದ್ದೀರಿ. ಲಾಲೂ ಪ್ರಸಾದ್​ ಯಾದವ್​ ಅವರು ಜೈಲಿನಲ್ಲಿದ್ದಾರೆ. ಆದರೂ ಅವರ ಪಕ್ಷ ಅತ್ಯಂತ ಪ್ರಬಲವಾದ ಸ್ಪರ್ಧೆ ನೀಡಿದೆ. ಅಲ್ಲಿ ಬಿಜೆಪಿ ಮೋಸದಿಂದ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ ಎಂದು ಅವರು ದೂರಿದರು.

    ಇದನ್ನೂ ಓದಿ: ಭವ್ಯ ಭಾರತ ನಿರ್ಮಾಣಕ್ಕೆ ಮುಂದಾಗಿ, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್ ಕರೆ, ರಾಷ್ಟ್ರೀಯ ಐಕ್ಯತಾ ಸಪ್ತಾಹ

    ಪಶ್ಚಿಮ ಬಂಗಾಳದಲ್ಲಿ 2021ರ ಏಪ್ರಿಲ್​-ಮೇ ವೇಳೆಯಲ್ಲಿ ವಿಧಾನಸಭೆಯ 294 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದು, ಚುನಾವಣೆಯಲ್ಲಿ 200 ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುವುದಾಗಿ ಹೇಳಿದ್ದರು. (ಏಜೆನ್ಸೀಸ್​)

    ಇನ್ನು ಮುಂದೆ ಸ್ಯಾನಿಟರಿ ಪ್ಯಾಡ್​ಗಳು ಉಚಿತ; ಹೆಣ್ಣು ಮಕ್ಕಳಿಗಾಗಿ ವಿಶೇಷ ಮಸೂದೆ ತಂದ ಮೊದಲ ದೇಶವಿದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts