More

    25 ವರ್ಷ ಹಿಂದೆ ಕೊಲೆ ಮಾಡಿದ್ದ ವ್ಯಕ್ತಿ ಈಗ ಸಿಕ್ಕಿಬಿದ್ದ; ಕೇಸ್ ಸಾಲ್ವ್​ ಆದ ಬಗೆಯೇ ರೋಚಕ

    ಡಿಕಾಟೂರ್​: 25 ವರ್ಷದ ಹಿಂದೆ ಜಾರ್ಜಿಯಾದ ಡಿಕಾಟೂರ್​ ಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣ ಇದೀಗ ಮುಕ್ತಾಯವಾಗಿದೆ. 25 ವರ್ಷಗಳ ಕಾಲ ಪತ್ತೆಯಾಗಿರದ ಅಪರಾಧಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಕರಣ ಬಗೆಹರಿದಿದ್ದರ ಹಿಂದಿನ ರೋಚಕ ಕಥೆ ಇಲ್ಲಿದೆ.

    ಇದನ್ನೂ ಓದಿ: ಶಾರ್ಟ್ಸ್​ ಮೇಲೆ ಗಣಪತಿ ಚಿತ್ರದ ಡಿಸೈನ್​; ಅಂತೂ ತಪ್ಪೊಪ್ಪಿಕೊಂಡ ಸಂಸ್ಥೆ

    ಕ್ರಿಸ್ಟೋಫರ್​ ಆಲ್ವಿನ್​ ಡೈಲಿ ಹೆಸರಿನ ವ್ಯಕ್ತಿ 26 ವರ್ಷವಿದ್ದಾಗ ಅಂದರೆ 1995ರ ಏಪ್ರಿಲ್​ನಲ್ಲಿ ಕೊಲೆಯಾಗಿದ್ದ. ಹೋಟೆಲ್​ನಲ್ಲಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಆತನನ್ನು ಯಾರೋ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದರು. ಈ ಪ್ರಕರಣದ ಬಗ್ಗೆ ಸಾಕಷ್ಟು ತನಿಖೆ ನಡೆಸಲಾಗಿತ್ತಾದರೂ ಅಪರಾಧಿ ಮಾತ್ರ ಸಿಕ್ಕಿಬಿದ್ದಿರಲಿಲ್ಲ. ಕಾಲ ಕ್ರಮೇಣ ಪ್ರಕರಣವೂ ಮೂಲೆ ಸೇರಿತ್ತು.

    ಪ್ರಕರಣ ನಡೆದು 25 ವರ್ಷದ ನಂತರ ಡಿಕಾಟೂರ್​ ಪ್ರದೇಶದ ಪೊಲೀಸ್​ ಅಧಿಕಾರಿಗೆ ಒಂದು ಕರೆ ಬಂದಿದೆ. ‘ನಾನು ಹಲವು ವರ್ಷದ ಹಿಂದೆ ಮಾಡಿದ್ದ ಕೊಲೆಗೆ ಇದೀಗ ತಪ್ಪೊಪ್ಪಿಕೊಳ್ಳಲು ಬಯಸುತ್ತೇನೆ’ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾನೆ. ಯಾವ ಕೊಲೆ, ಯಾವಾಗ ಮಾಡಿದ್ದು ಎಂದು ಕೇಳಿದ್ದಕ್ಕೆ ಆತನ ಬಳಿ ಉತ್ತರ ಕೊಡಲು ಸಾಧ್ಯವಾಗಿಲ್ಲ. ಇದೊಂದು ಸುಳ್ಳು ಕರೆಯಿರಬಹುದು ಎನ್ನುವ ಅನುಮಾನ ಬಂದ ಅಧಿಕಾರಿ, ಆತನಿಗೆ ಭೇಟಿ ಮಾಡಲು ಹೇಳಿದ್ದಾನೆ.

    ಇದನ್ನೂ ಓದಿ: ಜಗ್ಗೇಶ್​ ಹೀರೋ ಆಗುವುದಕ್ಕೆ ಪ್ರೇರೇಪಿಸಿದ್ದು ಯಾರು ಗೊತ್ತಾ?

    ಈ ರೀತಿ ಕರೆ ಮಾಡಿದ ವ್ಯಕ್ತಿಯನ್ನು ಭೇಟಿ ಆಗುವುದಕ್ಕೂ ಮೊದಲು ಹಲವು ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣಗಳ ಬಗ್ಗೆ ಅಧ್ಯಯನ ಮಾಡಿಕೊಂಡಿದ್ದಾನೆ. ಮೊದಲೇ ನಿಗದಿಸಿದ್ದ ದಿನದಂದು ಕೆಲ ಪೊಲೀಸ್​ ಅಧಿಕಾರಿಗಳು ಕರೆ ಮಾಡಿದ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ. ಆಗ ಆತ ತಾನು ಕೊಲೆ ಮಾಡಿದ್ದ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಇದೀಗ ಆ ಸ್ಥಳದಲ್ಲಿ ಸಾಕಷ್ಟು ಬದಲವಾಣೆಗಳಾಗಿದೆಯಾದರೂ ಆಗಿದ್ದ ಸ್ಥಿತಿಯನ್ನು ಸಂಪೂರ್ಣವಾಗಿ ನಿಖರವಾಗಿ ವಿವರಿಸಿದ್ದಾನೆ. ಎಲ್ಲ ರೀತಿಯ ತನಿಖೆ ನಡೆಸಿದ ನಂತರ ಆತನೇ ಕೊಲೆಗಾರನೆಂದು ಪೊಲೀಸರಿಗೆ ಮನವರಿಕೆಯಾಗಿದೆ. ಇದೀಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕರೆ ಮಾಡಿ, ತಪ್ಪೊಪ್ಪಿಕೊಂಡು, ಬಂಧನಕ್ಕೊಳಗಾದ ವ್ಯಕ್ತಿಯನ್ನು ಜಾನಿ ಡ್ವೈಟ್​ ವೈಟ್​ ಎಂದು ಗುರುತಿಸಲಾಗಿದೆ. (ಏಜೆನ್ಸೀಸ್​)

    ಧೈರ್ಯವಿದ್ದರೆ ನನ್ನನ್ನು ಬಂಧಿಸಿ, ಜೈಲಿನಲ್ಲಿದ್ದೇ ಗೆದ್ದು ತೋರಿಸುತ್ತೇನೆ; ಬಿಜೆಪಿಗೆ ಮಮತಾ ಸವಾಲ್​

    ಇನ್ನು ಮುಂದೆ ಸ್ಯಾನಿಟರಿ ಪ್ಯಾಡ್​ಗಳು ಉಚಿತ; ಹೆಣ್ಣು ಮಕ್ಕಳಿಗಾಗಿ ವಿಶೇಷ ಮಸೂದೆ ತಂದ ಮೊದಲ ದೇಶವಿದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts