

ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ಘಟನೆ ನಡೆದರೂ ಅದರ ದೃಶ್ಯ ಅಥವಾ ಫೋಟೋಗಳು ಸಾಮಾಜಿಕ ಜಾಲತಾಣದ ಪ್ಲಾಟ್ಫಾರ್ಮ್ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತದೆ. ಪ್ರಪಂಚದಲ್ಲಿ ನಡೆಯುವ ವಿಚಿತ್ರ, ವಿಲಕ್ಷಣ, ಭಯಾನಕ ಮತ್ತು ಕೆಲವೊಂದು ಮನಸೂರೆಗೊಳಿಸುವಂತೆ ವಿಡಿಯೋಗಳು ನೆಟ್ಟಿಗರನ್ನು ಕ್ಷಣಮಾತ್ರದಲ್ಲಿ ತಲುಪುವ ಮೂಲಕ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಆರೈಕೆ, ಮುದ್ದು ಮಾಡುವ ಪರಿಯ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುವಲ್ಲಿ ಪ್ರಮುಖವಾಗಿದ್ದು, ಪ್ರಾಣಿಪ್ರಿಯರು ಇಂತಹ ದೃಶ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡುತ್ತಾರೆ. ಅದೇ ರೀತಿಯಲ್ಲಿ ಇಲ್ಲೊಂದು ವಿಡಿಯೋ ನೆಟ್ಟಿಗರಿಂದ ಅಧಿಕ ಲೈಕ್ಸ್, ಕಮೆಂಟ್ ಪಡೆದುಕೊಂಡಿದೆ. ಕೈನಲ್ಲಿ ನೀರಿನ ಬಾಟಲಿ ಹಿಡಿದು ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಬಳಿ ಬಂದ ಅಳಿಲು, ತನಗೆ ನೀರು ಬೇಕು ಎಂಬುದನ್ನು ಮುದ್ದು ಮುದ್ದಾಗಿ ಕೇಳಿದೆ.
ಇದನ್ನು ಗಮನಿಸಿದ ವ್ಯಕ್ತಿ, ನೀರಿನ ಬಾಟಲಿ ಕ್ಯಾಪ್ ತೆಗೆದು ನೀರುಣಿಸಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.