ಸಿನಿಮಾ

ದೆಹಲಿಯಲ್ಲಿ ಹಿಟ್​ ಆ್ಯಂಡ್​​​ ರನ್​ಗೆ ಮತ್ತೊಂದು ಬಲಿ; ಆರೋಪಿ ಬಂಧನ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚು ಸದ್ದು ಮಾಡುತ್ತಿದ್ದು ಈಗ ಮತ್ತೊಂದು ಘನಗೋರ ಘಟನೆಗೆ ಸಾಕ್ಷಿಯಾಗಿದೆ.

2023 ಜನವರಿ 1ರಂದು ನಡೆದಿದ್ದ ಹಿಟ್​ ಆ್ಯಂಡ್​ ರನ್​ ಪ್ರಕರಣವನ್ನು ನೆನಪಿಸುವಂತಹ ಮತ್ತೊಂದು ಪ್ರಕರಣ ವರದಿಯಾಗಿದ್ದು ಜನತೆ ಆಘಾತಕ್ಕೆ ಒಳಗಾಗಿದ್ದಾರೆ.

ಹಿಟ್​ ಅಂಡ್​ ರನ್​

ದೆಹಲಿಯ ಕಸ್ತೂರ್​ಬಾ ಮಾರ್ಗ್​ ಹಾಗೂ ಟಾಲ್ಸ್​ಟಾಯ್​ ಮಾರ್ಗ್​​ನಲ್ಲಿ ಅತಿವೇಗವಾಗಿ XUV ವಾಹನ ಒಂದನ್ನು ಚಾಲನೆ ಮಾಡಿಕೊಂಡು ಬಂದ ವ್ಯಕ್ತಿ ಓರ್ವ ಮತ್ತೊಬ್ಬರಿಗೆ ಗುದ್ದಿದ್ದ ರಭಸಕ್ಕೆ ಆತ ಪ್ರಾಣ ಬಿಟ್ಟು ಗಾಡಿಯ ಮೇಲ್ಛಾವಣಿ ಮೇಲೆ ಹಾರಿಹೋಗಿದ್ದಾರೆ.

victim

ಇದನ್ನೂ ಒದಿ: ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ಕ್ರಮ ಜರುಗಿಸುತ್ತೇವೆ, ಇದರಲ್ಲಿ ತಪ್ಪೇನಿದೆ: ಸಿದ್ದರಾಮಯ್ಯ

ಘಟನೆಯ ವಿಡಿಯೋ ಮಾಡಿರುವ ವ್ಯಕ್ತಿ ಮೊಹಮ್ಮದ್​ ಬಿಲಾಲ್​ ಕಪ್ಪು ಬಣ್ನದ ಕಾರಿನಲ್ಲಿ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದ ವ್ಯಕ್ತಿಯೂ ಒಬ್ಬರ ಪ್ರಾಣ ತೆಗೆದಿದ್ದಲ್ಲದೆ ಇನ್ನಿಬ್ಬರಿಗೆ ಗುದ್ದಿ ಗಾಯ ಮಾಡಿದ್ದಾನೆ ಆತನನ್ನು ಬಂಧಿಸಿ ಪೊಲೀಸರು ಕಠಿಣ ಕಾರಾಗೃಹ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಚಿನ್ನದ ವ್ಯಾಪಾರಿ ಬಲಿ

ಇನ್ನು ಘಟನೆಯಲ್ಲಿ ಗಾಯಗೊಂಡಿದ್ದ ಚಿನ್ನದ ವ್ಯಾಪಾರಿ ದೀಪಾಂಶು ವರ್ಮಾ(30) ಸ್ಥಳದಲ್ಲಿ ಸಾವಿಗೀಡಾಗಿದ್ದು ಇವರ ಸಹೋದರ ಸಂಬಂಧಿ ಮುಕುಲ್​(20) ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಕಾರಣವಾದ ಪ್ರಮುಖ ಆರೋಪಿ ಹರ್ನೀತ್​ ಸಿಂಗ್​ ಚಾವ್ಲಾನನ್ನು ಬಂಧಿಸಿದ್ದು ಕೊಲೆ ಪ್ರಕರಣದಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Latest Posts

ಲೈಫ್‌ಸ್ಟೈಲ್