ಲಖನೌ: ಬುಧವಾರ ನಡೆದ ಐಪಿಎಲ್ ಡಬಲ್ ಹೆಡರ್ನ ಮೊದಲ ಪಂದ್ಯ ಮಳೆಯ ಕಾಟದಿಂದ ರದ್ದುಗೊಂಡಿದೆ.
ಲಖನೌ ಸೂಪರ್ಜೈಂಟ್ಸ್ ಹಾಗೂ ಚೆನೈ ಸೂಪರ್ ಕಿಂಗ್ಸ್ ನಡುವೆ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದಕ್ಕೆ ಮಳೆ ಅಡಚಣೆ ಉಂಟು ಮಾಡಿದೆ.
ಕಡಿಮೆ ಮೊತ್ತ ಪೇರಿಸಿದ ಲಖನೌ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಮಂದಗತಿಯ ಪಿಚ್ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮ್ಯಾನ್ ಆಯುಷ್ ಬದೋನಿ(59 ರನ್, 33 ಎಸೆತ, 2 ಬೌಂಡರಿ, 4 ಸಿಕ್ಸರ್) ಅರ್ಧಶತಕದ ಫಲವಾಗಿ 19.2 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125ರನ್ ಗಳಿಸಿತ್ತು.
ಇದನ್ನೂ ಓದಿ: VIDEO| ಸೆಲ್ಫಿ ಕ್ಲಿಕ್ಕಿಸಲು ಮುಂದಾದ ಅಭಿಮಾನಿಯನ್ನು ನೂಕಿದ ಶಾರುಖ್; ವ್ಯಾಪಕ ಟೀಕೆ
ಚೆನ್ನೈ ಪರ ಮೊಯಿನ್ ಅಲಿ(4-0-13-2), ಮಹೀಶ್ ತೀಕ್ಷ್ನ(4-0-37-2), ರವೀಂದ್ರ ಜಡೇಜಾ(3-0-11-1), ಮತೀಶ ಪತೀರಾಣಾ(3.2-0-22-2), ದೀಪಕ್ ಚಹರ್(4-0-41-0), ತುಷಾರ್ ದೇಶಪಾಂಡೆ(1-0-1-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
ಮಳೆ ಅಡಚಣೆ
20 ಓವರ್ ಶುರುವಾಗುವ ವೇಳೆ ಮಳೆ ಬರಲು ಆರಂಭಿಸಿದ ಕಾರಣ ಪಂದ್ಯವನ್ನು ಮುಂದೂಡಬೇಕಾಯಿತು. ತುಂಬಾ ಹೊತ್ತು ಮಳೆ ಸುರಿದ ಕಾರಣ ಉಭಯ ತಂಡಗಳಿಗೆ ತಲಾ ಒಂದು ಅಂಕವನ್ನು ಹಂಚಲಾಗಿದೆ.
ಇದಕ್ಕೂ ಮುನ್ನ ಒದೆಯಾದ ಔಟ್ಫೀಲ್ಡ್ ಕಾರಣದಿಂದಾಗಿ ಪಂದ್ಯ 15 ನಿಮಿಷ ತಡವಾಗಿ ಪ್ರಾರಂಭವಾಯಿತು.