More

    ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಪೈಪ್​​ನಿಂದ ಹಲ್ಲೆ; ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು

    ಉತ್ತರಪ್ರದೇಶ: ವ್ಯಕ್ತಿಯೊಬ್ಬ ಕಳ್ಳತನ ಮಾಡಲು ಬಂದಿದ್ದ ಎಂದು ಆರೋಪಿಸಿದ ಗ್ಯಾಂಗ್​​​, ಆತನನ್ನು ವಿವಸ್ತ್ರಗೊಳಿಸಿ ಪೈಪನಿಂದ ಮನಬಂದಂತೆ ಥಳಿಸಿರುವ ಘಟನೆ ಮಧ್ಯಪ್ರದೇಶದ ಸಾಗರ್ ನಗರದಲ್ಲಿ ಸಂಭವಿಸಿದ್ದು, ಸದ್ಯ ಆರೋಪಿಗಳ ವಿರುದ್ಧ ಮೋತಿನಗರ ಪೊಲೀಸರು ಎಫ್​​ಐಆರ್​​ ದಾಖಲಿಸಿದ್ದಾರೆ.

    ಇದನ್ನೂ ಓದಿ: ಭಾರತದ ಬಾಹ್ಯಾಕಾಶ ನವೋದ್ಯಮಗಳಿಗೆ ಸಿಗುತ್ತಿದೆ ಪ್ರಮುಖ ಮಾರುಕಟ್ಟೆ, ಜಾಗತಿಕ ಸಹಯೋಗ

    ಘಟನೆಯ ವಿವರ: ಕಳ್ಳತನ ಮಾಡಲು ಬಂದಿದ್ದ ಎಂದು ಆರೋಪಿಸಿದ ಗ್ಯಾಂಗ್​​, ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಆತನ ಮೇಲೆ ಪೈಪ್​​ನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಈ ಘಟನೆಯ ದೃಶ್ಯವನ್ನು ಸ್ಥಳೀಯರು ಚಿತ್ರಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಆಧರಿಸಿದ ಮೋತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

    ಇದನ್ನೂ ಓದಿ: VIDEO | ಟೊಮ್ಯಾಟೊ ಕಾಯಲು ಬೌನ್ಸರ್ ನೇಮಿಸಿದ ತರಕಾರಿ ವ್ಯಾಪಾರಿ!

    ವಿಡಿಯೋವನ್ನು ಯಾವಾಗ ಚಿತ್ರೀಕರಿಸಲಾಗಿದೆ, ಘಟನೆಗೆ ಕಾರಣವೇನು ಮತ್ತು ವಿಡಿಯೋದಲ್ಲಿ ಕಾಣುತ್ತಿರುವ ಆರೋಪಿಗಳು ಯಾರು ಎಂಬುದನ್ನು ಖಚಿತಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​​ ಅಧಿಕಾರಿಗಳು ಹೇಳಿದ್ದಾರೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts