More

    ಭಾರತದ ಬಾಹ್ಯಾಕಾಶ ನವೋದ್ಯಮಗಳಿಗೆ ಸಿಗುತ್ತಿದೆ ಪ್ರಮುಖ ಮಾರುಕಟ್ಟೆ, ಜಾಗತಿಕ ಸಹಯೋಗ

    ನವದೆಹಲಿ: ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಮರು ಇಂಧನ ನೀಡುವ ಗುರಿಯಿಂದ ಹಿಡಿದು ಭೂಮಿಯ ಆರೋಗ್ಯ ಮೇಲ್ವಿಚಾರಣೆವರೆಗೆ ಬಾಹ್ಯಾಕಾಶ ಕ್ಷೇತ್ರದಲ್ಲಿನ ಭಾರತೀಯ ನವೋದ್ಯಮಗಳು ಜಾಗತಿಕ ವಾಣಿಜ್ಯ ಸಹಯೋಗದ ಅವಕಾಶಗಳು ತೆರೆದುಕೊಳ್ಳುತ್ತಿದ್ದಂತೆ ಅದನ್ನು ದೊಡ್ಡದಾಗಿಸುವ ಭರವಸೆಯೊಂದಿಗೆ ಪ್ರಮುಖ ಮಾರುಕಟ್ಟೆಗಳನ್ನು ಅನ್ವೇಷಿಸುತ್ತಿವೆ.

    ಆರ್ಟೆಮಿಸ್ ಒಪ್ಪಂದಗಳಿಗೆ ಭಾರತ ಸಹಿ ಹಾಕಿರುವುದು ಮತ್ತು ಬಾಹ್ಯಾಕಾಶ ಕ್ಷೇತ್ರದ ಮೇಲೆ, ವಿಶೇಷವಾಗಿ ರಫ್ತು ನಿಯಂತ್ರಣ ಮತ್ತು ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಿರುವುದು ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಯುಎಸ್ ಭೇಟಿ ಸಮಯದಲ್ಲಿ ಖಾಸಗಿ ಕಂಪನಿಗಳಿಗೆ ಬಾಗಿಲು ತೆರೆಯುತ್ತದೆ ಎಂದು ಉದ್ಯಮದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

    ಭಾರತವು 2020ರಲ್ಲಿ ತನ್ನ ಬಾಹ್ಯಾಕಾಶ ಕ್ಷೇತ್ರ ತೆರೆದಾಗಿನಿಂದ, ರಾಕೆಟ್​​-ಉಪಗ್ರಹಗಳನ್ನು ನಿರ್ಮಿಸುವುದು, ಗಗನಯಾತ್ರಿಗಳ ತರಬೇತಿ ಸೌಲಭ್ಯಗಳನ್ನು ಸ್ಥಾಪಿಸುವುದು ಮತ್ತು ಬಾಹ್ಯಾಕಾಶ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಅನ್ವೇಷಿಸುವುದು ಮುಂತಾದ ಕ್ಷೇತ್ರಗಳಲ್ಲಿ 150 ಕ್ಕೂ ಹೆಚ್ಚು ನವೋದ್ಯಮಗಳು ಬಂದಿವೆ.

    ಇದನ್ನೂ ಓದಿ: ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ

    “ಇದು ಉತ್ತಮ ಆರಂಭ, ಏಕೆಂದರೆ 10-15 ವರ್ಷಗಳ ಹಿಂದೆ ಯುಎಸ್ ಯಾವುದೇ ಬಾಹ್ಯಾಕಾಶ ಅಥವಾ ರಕ್ಷಣಾ ಸಂಬಂಧಿತ ತಂತ್ರಜ್ಞಾನ ಪೂರೈಸುವುದು ಕೇಳಿರಲಿಲ್ಲ. ಅದೊಂದು ನಿಷಿದ್ಧವಾಗಿತ್ತು. ಈಗ, ನಾವು ಸೂರ್ಯೋದಯ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಮಾತನಾಡುತ್ತಿದ್ದೇವೆ” ಎಂದು ಮನಸ್ತು ಬಾಹ್ಯಾಕಾಶ ಸಹ ಸಂಸ್ಥಾಪಕ ತುಷಾರ್ ಜಾಧವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಮುಂಬೈ ಮೂಲದ ಮನಸ್ತು ಸಂಸ್ಥೆ ಉಪಗ್ರಹಗಳಿಗಾಗಿ ಗ್ರೀನ್ ಪ್ರೊಪಲ್ಷನ್ ವ್ಯವಸ್ಥೆ ಅಭಿವೃದ್ಧಿಪಡಿಸುತ್ತಿದೆ ಮತ್ತು ಮುಂಬರುವ ವರ್ಷದಲ್ಲಿ ಪರೀಕ್ಷಾ ಹಾರಾಟದ ಸಮಯದಲ್ಲಿ ಅದರ ತಂತ್ರಜ್ಞಾನ ಮೌಲ್ಯೀಕರಿಸುವ ಭರವಸೆ ಹೊಂದಿದೆ. ಉಪಗ್ರಹಗಳಿಗೆ ಕಕ್ಷೆಯಲ್ಲಿ ಇಂಧನ ತುಂಬಿಸುವ ಸೇವೆ ಒದಗಿಸಲು ಇದು ಬಾಹ್ಯಾಕಾಶದಲ್ಲಿ ಇಂಧನ ನಿಲ್ದಾಣ ವಿನ್ಯಾಸಗೊಳಿಸುತ್ತಿದೆ, ಇಲ್ಲದಿದ್ದರೆ ಆನ್-ಬೋರ್ಡ್ ಇಂಧನ ಮುಗಿದ ನಂತರ ಅದನ್ನು ಕೈಬಿಡಬೇಕಾಗುತ್ತದೆ.

    ಇದನ್ನೂ ಓದಿ: ವೀರಶೈವ ಲಿಂಗಾಯತ ಸಮುದಾಯ ಒಬಿಸಿಗೆ ಸೇರಿಸಿ: ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡುವಂತೆ ಹಕ್ಕೊತ್ತಾಯ ಸಭೆ

    ಬಾಹ್ಯಾಕಾಶ ಕ್ಷೇತ್ರದ ಅನೇಕ ತಂತ್ರಜ್ಞಾನಗಳು ದ್ವಿ-ಬಳಕೆಯ ತಂತ್ರಜ್ಞಾನಗಳಾಗಿವೆ, ಆದರೆ ಈಗ ಇದಕ್ಕಾಗಿ ಪ್ರಕ್ರಿಯೆಗಳನ್ನು ಸರಾಗಗೊಳಿಸಲಾಗುವುದು ಎಂಬುದರ ಬಗ್ಗೆ ಇದು ಸೂಚನೆಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಘದ ನಿವೃತ್ತ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಎ.ಕೆ.ಭಟ್ ಹೇಳಿದರು.

    ಕಳೆದ ನವೆಂಬರ್​​ನಲ್ಲಿ ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಯಶಸ್ವಿಯಾಗಿ ವಿಕ್ರಮ್-ಎಸ್ ರಾಕೆಟ್ ಉಡಾಯಿಸುವ ಮೂಲಕ ಬಾಹ್ಯಾಕಾಶ ಇತಿಹಾಸದಲ್ಲಿ ತನ್ನ ಹೆಸರನ್ನು ಬರೆದಿದೆ. ಇಸ್ರೋದ ಮಾಜಿ ವಿಜ್ಞಾನಿಗಳು ಮತ್ತು ಇಂಜಿನಿಯರ್​ಗಳು ಸ್ಥಾಪಿಸಿದ ಈ ಕಂಪನಿ ಈಗ ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ವಿಕ್ರಮ್ ಸರಣಿಯ ರಾಕೆಟ್​​ಗ ಮೂರು ರೂಪಾಂತರಗಳನ್ನು ಅಭಿವೃದ್ಧಿಪಡಿಸುತ್ತಿದೆ.

    ಇಸ್ರೋ ಮಾಡಿದ್ದನ್ನು ಪುನರಾವರ್ತಿಸುವ ಕೆಲಸವನ್ನು ಖಾಸಗಿ ವಲಯ ಮಾಡುತ್ತಿಲ್ಲ. ಸ್ಕೈರೂಟ್ ಮತ್ತು ಅಗ್ನಿಕುಲ್ ಅಭಿವೃದ್ಧಿಪಡಿಸಿದ ಉಡಾವಣಾ ವಾಹನಗಳು ತಮ್ಮದೇ ಆದ ವಿಶಿಷ್ಟತೆ ಹೊಂದಿವೆ. ತಂತ್ರಜ್ಞಾನದ ದೃಷ್ಟಿಯಿಂದ ಉಪಗ್ರಹ ಅಪ್ಲಿಕೇಷನ್​ಗಳು ಬಹಳ ಪ್ರಮುಖ ಮತ್ತು ಅತ್ಯಾಧುನಿಕವಾಗಿವೆ ಎಂದು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅಧಿಕಾರ ಕೇಂದ್ರದ (ಐಎನ್-ಸ್ಪೇಸ್) ಅಧ್ಯಕ್ಷ ಪವನ್ ಗೋಯೆಂಕಾ ಹೇಳಿದ್ದಾರೆ.
    ಕಳೆದ ವರ್ಷ ಚೆನ್ನೈ ಮೂಲದ ಅಗ್ನಿಕುಲ್ ಕಾಸ್ಮೋಸ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ತನ್ನದೇ ಆದ ಉಡಾವಣಾ ಪ್ಯಾಡ್ ಉದ್ಘಾಟಿಸಿತ್ತು.

    ಇದನ್ನೂ ಓದಿ: ಒಂದು ವರ್ಷದ ಅಂತರ.. ಅದೇ ಜಾಗ.. ಒಂದೇ ಥರದಲ್ಲಿ ಸಂಬಂಧಿಕರಿಬ್ಬರ ಸಾವು!

    ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ದತ್ತಾಂಶದ ಬೇಡಿಕೆ ತುಂಬಾ ಕಡಿಮೆ ಇರುವುದರಿಂದ, ದೇಶೀಯ ಖಾಸಗಿ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಗಳನ್ನು ಅನ್ವೇಷಿಸುತ್ತಿವೆ. ಇಗ ಅಂಥ ಕಂಪನಿಗಳವರು ಕೆಲವರು ಯಶಸ್ಸನ್ನು ಕಾಣಲು ಪ್ರಾರಂಭಿಸಿದ್ದಾರೆ. ಸರ್ಕಾರಿ ಸಂಸ್ಥೆಗಳಿಂದ ಕೆಲವು ಆರ್ಡರ್​ಗಳು ಸಿಗುತ್ತಿರುವುದು ಕೂಡ ದೊಡ್ಡ ಸಂಗತಿ ಎಂದು ಗೋಯೆಂಕಾ ಹೇಳಿದರು. ಅಲ್ಲದೆ ಬೆಂಗಳೂರು ಮೂಲದ ಪಿಕ್ಸೆಲ್ ತನ್ನ ಉಪಗ್ರಹಗಳಿಂದ ಹೈಪರ್-ಸ್ಪೆಕ್ಟ್ರಲ್ ಚಿತ್ರಗಳನ್ನು ಪೂರೈಸಲು ಯುಎಸ್ ರಾಷ್ಟ್ರೀಯ ವಿಚಕ್ಷಣಾ ಕಚೇರಿಯಿಂದ ಪಡೆದ ಐದು ವರ್ಷಗಳ ಒಪ್ಪಂದವನ್ನೂ ಉಲ್ಲೇಖಿಸಿದರು. ಭಾರತದಲ್ಲಿನ ಬಾಹ್ಯಾಕಾಶ ಆರ್ಥಿಕತೆ ಬಹಳ ಕಿರಿದು. ಇದು 9.6 ಬಿಲಿಯನ್​ ಯುಸ್​ ಡಾಲರ್ ಆಗಿದ್ದು, 2020ರಲ್ಲಿ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯ ಸರಿಸುಮಾರು 2.1 ಪ್ರತಿಶತದಷ್ಟಿದೆ. ಇದು ದೇಶದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ. 0.4 ರಷ್ಟಿದೆ ಎಂದರು.

    ಬಾಹ್ಯಾಕಾಶ ತಂತ್ರಜ್ಞಾನವನ್ನು ಖಾಸಗಿ ವಲಯಕ್ಕೆ ತೆರೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಿಂದಿನ ನಿಷೇಧಗಳನ್ನು ಮುರಿದರು. ಹೀಗಾಗಿ ಮೂರು ವರ್ಷಗಳಲ್ಲಿ ನಾವು 150ಕ್ಕೂ ಹೆಚ್ಚು ನವೋದ್ಯಮಗಳನ್ನು ಹೊಂದಿದ್ದೇವೆ, ಅವುಗಳಲ್ಲಿ ಕೆಲವು ಈ ರೀತಿಯ ಮೊದಲನೆಯದು. ಇದನ್ನು ವಿಶ್ವ ಮಾನದಂಡಗಳಲ್ಲಿ ಅಂಗೀಕರಿಸಲಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

    ಯುಎಸ್ ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಸಮಾನ ಸಹಯೋಗಿ ಎಂದು ಪರಿಗಣಿಸುತ್ತದೆ, ಇದು 50 ವರ್ಷಗಳ ಹಿಂದೆ ಬಾಹ್ಯಾಕಾಶ ಕ್ಷೇತ್ರದಲ್ಲಿನ ವಿದ್ಯಮಾನಗಳಿಗಾಗಿ ಪ್ರತಿ ದೇಶವೂ ಯುಎಸ್ ಕಡೆಗೆ ನೋಡುತ್ತಿದ್ದಕ್ಕೆ ವ್ಯತಿರಿಕ್ತವಾಗಿದೆ ಎಂದು ಅವರು ಹೇಳಿದರು.

    ಯಥಾಸ್ಥಿತಿ ಕಾಪಾಡಿ, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ: ಮದ್ಯಪಾನಪ್ರಿಯರ ಸಂಘದಿಂದ ಸರ್ಕಾರಕ್ಕೆ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts