More

  ಭಾರತೀಯ ಷೇರು ಮಾರುಕಟ್ಟೆಯಿಂದ ರೂ. 28,242 ಕೋಟಿ ಹೂಡಿಕೆ ಹಿಂಪಡೆದ ವಿದೇಶಿ ಹೂಡಿಕೆದಾರರು

  ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶದ ಅನಿಶ್ಚಿತತೆ ಮತ್ತು ಚೀನಾದ ಮಾರುಕಟ್ಟೆಗಳ ಆಕರ್ಷಕ ಮೌಲ್ಯಮಾಪನಗಳಿಂದಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್​ಐಐ) ಈ ತಿಂಗಳಲ್ಲಿ ಇದುವರೆಗೆ ಭಾರತೀಯ ಷೇರು ಮಾರುಕಟ್ಟೆಯಿಂದ 28,242 ಕೋಟಿ ರೂಪಾಯಿ ಹೂಡಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ.

  ಮಾರಿಷಸ್‌ ಜತೆಗೆ ಭಾರತದ ತೆರಿಗೆ ಒಪ್ಪಂದದಲ್ಲಿನ ಬದಲಾವಣೆ ಮತ್ತು ಅಮೆರಿಕ ಬಾಂಡ್ ಇಳುವರಿಯಲ್ಲಿ ನಿರಂತರ ಏರಿಕೆಯಿಂದಾಗಿ ಕಳೆದ ತಿಂಗಳು ಏಪ್ರಿಲ್‌ನಲ್ಲಿ 8,700 ಕೋಟಿ ರೂಪಾಯಿಗಳ ಬಂಡವಾಳವನ್ನು ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಿಂದ ಹಿಂತೆಗೆದುಕೊಂಡಿದ್ದರು. ಇದಕ್ಕೂ ಮೊದಲು, ಎಫ್‌ಐಐಗಳು ಮಾರ್ಚ್‌ನಲ್ಲಿ 35,098 ಕೋಟಿ ರೂಪಾಯಿ ಮತ್ತು ಫೆಬ್ರವರಿಯಲ್ಲಿ 1,539 ಕೋಟಿ ರೂಪಾಯಿ ಹೂಡಿಕೆಯನ್ನು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಾಡಿದ್ದರು.

  ರಾಜಕೀಯ ಸ್ಥಿರತೆಯು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಒಳಹರಿವನ್ನು ಆಕರ್ಷಿಸುತ್ತದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

  ಲೋಕಸಭೆ ಚುನಾವಣೆಯ ನಂತರ, ಮೂರು ಪ್ರಮುಖ ಅಂಶಗಳಿಂದಾಗಿ ಭಾರತಕ್ಕೆ ವಿದೇಶಿ ಹೂಡಿಕೆಯ ಒಳಹರಿವು ಬಲಗೊಳ್ಳಬಹುದು ಎಂದು ಸ್ಮಾಲ್​ಕೇಸ್​ ಮ್ಯಾನೇಜರ್ ಮತ್ತು ಕ್ವಾಂಟೇಸ್ ರಿಸರ್ಚ್ ಸಂಸ್ಥಾಪಕ ಕಾರ್ತಿಕ್ ಜೋನಗಡ್ಲಾ ಹೇಳಿದ್ದಾರೆ.

  ವಿದೇಶಿ ಬಂಡವಾಳ ಹೂಡಿಕೆದಾರರು ಈ ತಿಂಗಳು (ಮೇ 17 ರವರೆಗೆ) ಷೇರುಗಳಲ್ಲಿ 28,242 ಕೋಟಿ ರೂ. ಹಣವನ್ನು ಹಿಂದಕ್ಕೆ ಪಡೆದಿದ್ದಾರೆ. ಅವರು ಷೇರುಗಳನ್ನು ಮಾರಾಟ ಮಾಡಲು ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ ಸಾರ್ವತ್ರಿಕ ಚುನಾವಣೆಯ ಬಗ್ಗೆ ಅನಿಶ್ಚಿತತೆ ಇರುವುದರಿಂದ ಷೇರುಗಳನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳಲು ಬಯಸಿದ್ದಾರೆ. ಎರಡನೆಯದಾಗಿ, ಮಾರುಕಟ್ಟೆಯ ಮೌಲ್ಯಮಾಪನಗಳು (ಅಂದರೆ, ಷೇರುಗಳ ಬೆಲೆಗಳ ಮೌಲ್ಯಮಾಪನ) ಹೆಚ್ಚಾಗಿರುವುದು ಎಂದು ಮೊಜೊಪಿಎಂಎಸ್​ ಮುಖ್ಯ ಹೂಡಿಕೆ ಅಧಿಕಾರಿ ಸುನೀಲ್ ದಮಾನಿಯಾ ಹೇಳುತ್ತಾರೆ.

  ಇದಲ್ಲದೆ, ಚೀನಾ ಮತ್ತು ಹಾಂಗ್​ಕಾಂಗ್‌ಗೆ ತಮ್ಮ ಹಣವನ್ನು ವಿದೇಶಿ ಹೂಡಿಕೆದಾರರು ಮರುಹಂಚಿಕೆ ಮಾಡುತ್ತಿದ್ದಾರೆ. ಭಾರತೀಯ ಷೇರುಗಳಿಗೆ ಹೋಲಿಸಿದರೆ ಆಕರ್ಷಕ (ಅಗ್ಗದ) ಮೌಲ್ಯಗಳಲ್ಲಿ ಇವುಗಳು ವಹಿವಾಟು ನಡೆಸುತ್ತಿವೆ ಎಂದು ಪಿಜಿಐಎಂ ಇಂಡಿಯಾ ಅಸೆಟ್ ಮ್ಯಾನೇಜ್‌ಮೆಂಟ್‌ನ ಅನಿರುದ್ಧ್ ನಹಾ ಅಭಿಪ್ರಾಯಪಡುತ್ತಾರೆ.

  ಭಾರತೀಯ ಷೇರುಗಳ ಮಾರಾಟಕ್ಕೆ ವಿದೇಶಿ ಹೂಡಿಕೆದಾರರ ಪ್ರಮುಖ ಪ್ರಚೋದನೆಯು ಹಾಂಗ್​ಕಾಂಗ್ ಸೂಚ್ಯಂಕ ಹ್ಯಾಂಗ್ ಸೆಂಗ್‌ನ ಉತ್ತಮ ಕಾರ್ಯಕ್ಷಮತೆಯಾಗಿದೆ. ಇದು ಕಳೆದ ಒಂದು ತಿಂಗಳ ಅವಧಿಯಲ್ಲಿ ಶೇಕಡಾ 19.33 ರಷ್ಟು ಏರಿಕೆಯಾಗಿದೆ. ಹೀಗಾಗಿ, ಭಾರತದಂತಹ ದುಬಾರಿ ಮಾರುಕಟ್ಟೆಗಳಿಂದ ಹಾಂಗ್​ಕಾಂಗ್‌ನಂತಹ ಅಗ್ಗದ ಮಾರುಕಟ್ಟೆಗಳಿಗೆ ಹಣವನ್ನು ತಿರುಗಿಸುತ್ತಿದ್ದಾರೆ ಎಂದು ವಿಜಯಕುಮಾರ್​ ಹೇಳುತ್ತಾರೆ.

  ಸಿಐಐ ಅಧ್ಯಕ್ಷರಾಗಿ ಐಟಿಸಿಯ ಸಂಜೀವ್ ಪುರಿ ಅಧಿಕಾರ ಸ್ವೀಕಾರ

  ರೂ. 400 ಕೋಟಿ ಕಂಪನಿ ರೂಪಿಸಿದ ಮಾವು ಮಾರಾಟಗಾರನ ಮಗ: ಭಾರತದ ಐಸ್ ಕ್ರೀಮ್ ಮ್ಯಾನ್ ಕಾಮತ್ ಈಗ ನೆನಪು ಮಾತ್ರ

  ಅಪ್ಪರ್​ ಸರ್ಕ್ಯೂಟ್​ ಹಿಟ್​ ಆದ ಷೇರುಗಳು: ಮಂಗಳವಾರವೂ ಈ ಸ್ಟಾಕ್​ಗಳಿಗೆ ಬೇಡಿಕೆ, ದರ ಏರಿಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts