VIDEO | ಟೊಮ್ಯಾಟೊ ಕಾಯಲು ಬೌನ್ಸರ್ ನೇಮಿಸಿದ ತರಕಾರಿ ವ್ಯಾಪಾರಿ!

varanasi tometo
Published on

ವಾರಣಾಸಿ: ಟೊಮ್ಯಾಟೊ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ರಾತ್ರೋರಾತ್ರಿ ಟೊಮ್ಯಾಟೊ ಕದ್ದೊಯ್ಯುತ್ತಿದ್ದಾರೆ. ಹೀಗಾಗಿ ಇಲ್ಲೊಬ್ಬ ತರಕಾರಿ ವ್ಯಾಪಾರಿ ಮಾಸ್ಟರ್​ ಪ್ಲ್ಯಾನ್​​ ಮಾಡಿರುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಉತ್ತರ ಪ್ರದೇಶದ ವಾರಣಸಿಯ ತರಕಾರಿ ವ್ಯಾಪಾರಿ ಅಜಯ್ ಫೌಜಿ ಟೊಮ್ಯಾಟೊ ಕಾಯಲು ಇಬ್ಬರು ಬೌನ್ಸರ್ ನೇಮಿಸಿದ್ದಾರೆ. ಟೊಮ್ಯಾಟೊ ಬೆಲೆ ಗಗನಕ್ಕೇರಿದೆ. ಹಲವೆಡೆ ಟೊಮ್ಯಾಟೊ  ಕಳ್ಳತನ ನಡೆದ ಘಟನೆಗಳು ನಡೆದಿದೆ. ಹೀಗಾಗಿ ಈ ಸಮಸ್ಯೆ ಇಲ್ಲಿ ಆಗಬಾರದು ಎಂದು ಇಬ್ಬರು ಬೌನ್ಸರ್ ನೇಮಕ ಮಾಡಿದ್ದೇನೆ ಎಂದು ಅಜಯ್ ಫೌಜಿ ಹೇಳಿದ್ದಾರೆ.

ಟೊಮ್ಯಾಟೊ ಪಕ್ಕದಲ್ಲೇ ನಿಂತುಕೊಂಡಿರುವ ಇಬ್ಬರು ಬೌನ್ಸರ್ ಗ್ರಾಹಕರನ್ನು ಎಚ್ಚರಿಸುತ್ತಿದ್ದಾರೆ. ಗ್ರಾಹಕರನ್ನು ಟೊಮ್ಯಾಟೊ ಮುಟ್ಟಲು ಈ ಬೌನ್ಸರ್ ಬಿಡುತ್ತಿಲ್ಲ. ನಿಮಗೆ ಎಷ್ಟು ಟೊಮ್ಯಾಟೊ ಬೇಕು ಅಷ್ಟನ್ನು ಮಾಲೀಕರ ಬಳಿ ಕೇಳಿ. ಟೊಮ್ಯಾಟೊ ಮುಟ್ಟಿ ಹಾಳುಮಾಡಬೇಡಿ ಎಂದು ಬೌನ್ಸರ್ ಗದರಿಸುತ್ತಿರುವ ದೃಶ್ಯ ವೈರಲ್ ಆಗಿದೆ.

ವಾರಣಾಸಿ ತರಕಾರಿ ವ್ಯಾಪಾರಿ ತನ್ನ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿರುವ ಟೊಮ್ಯಾಟೊ ಕಾಯಲು ಇಬ್ಬರು ಬೌನ್ಸರ್ ನೇಮಕ ಮಾಡಿದ್ದಾನೆ. ವ್ಯಾಪಾರಿಯ ಈ ನಡೆ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net