ನಂದಿಗ್ರಾಮದಲ್ಲಿ ಎರಡು ಮನೆ ಬಾಡಿಗೆಗೆ ಪಡೆದ ದೀದಿ! ಚುನಾವಣೆ ಮುಗಿದ ತಕ್ಷಣ ಅಲ್ಲಿಂದ ಎಸ್ಕೇಪ್​?

mamatha
Published on

ನಂದಿಗ್ರಾಮ: ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ರಂಗೇರಿದೆ. ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಹೊರಗಿನವರು ಎನ್ನುವ ಆರೋಪವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅಲ್ಲಿ ಎರಡು ಮನೆಗಳನ್ನು ಬಾಡಿಗೆಗೆ ಪಡೆದಿದ್ದಾರೆ.

ನಂದಿಗ್ರಾಮದ ರಯಾಪರ ಪ್ರದೇಶದಲ್ಲಿ ದೀದಿ ಎರಡು ಮನೆ ಬಾಡಿಗೆ ಪಡೆದಿದ್ದಾರೆ. ಎರಡೂ 100 ಮೀಟರ್​ ಅಂತದಲ್ಲಿವೆ. ಒಂದು ಮನೆಯನ್ನು ಒಂದು ವರ್ಷದ ಅವಧಿಗೆ ಬಾಡಿಗೆ ಪಡೆದಿದ್ದರೆ ಇನ್ನೊಂದು ಮನೆಯನ್ನು ಕೇವಲ ಆರು ತಿಂಗಳ ಮಟ್ಟಿಗೆ ಬಾಡಿಗೆ ಪಡೆದಿದ್ದಾರೆ ಎನ್ನಲಾಗಿದೆ. ಎಂದರೆ ಚುನಾವಣೆ ಮುಗಿದು ಕೆಲ ತಿಂಗಳಲ್ಲಿ ಅವರು ಅಲ್ಲಿನ ಮನೆಯನ್ನು ಬಿಟ್ಟುಕೊಡಲಿದ್ದಾರೆ.

ನಂದಿಗ್ರಾಮದಲ್ಲಿ ಮಮತಾ ಅವರು ಕಣಕ್ಕಿಳಿದಿರುವ ಬಗ್ಗೆ ಬಿಜೆಪಿಯ ಸುವೇಂದು ಅಧಿಕಾರಿ ಕಾಲೆಳೆದಿದ್ದರು. ಹೊರಗಿನವರೆಲ್ಲ ಬಂದು ನಮ್ಮ ಕ್ಷೇತ್ರದ ಆಳ್ವಿಕೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಅದೇ ಕಾರಣದಿಂದಾಗಿ ದೀದಿ ಈ ಮನೆಗಳನ್ನು ಬಾಡಿಗೆ ಪಡೆದಿರುವುದಾಗಿ ಹೇಳಲಾಗಿದೆ. ಅದಷ್ಟೇ ಅಲ್ಲದೆ ಹಳ್ದಿ ನದಿ ದಡದಲ್ಲಿ ಇನ್ನೊಂದು ಮನೆ ನಿರ್ಮಿಸಿಕೊಳ್ಳುವುದಾಗಿಯೂ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net