smartphone:ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಪೋನ್ ಮತ್ತು ಅಂಡ್ರಾಯ್ಡ್ ಪೋನ್ಗಳ ಮೇಲೆ ಹೊಸ ಬೆದರಿಕೆಯೊಂದು ಎದುರಾಗಿದೆ. ಮಾಲ್ವೇರ್ವೊಂದು ಬಳಸಿ ಪೋನ್ಗಳ ಮಾಹಿತಿ ಕಲೆ ಹಾಕುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಂತಹ ಮಾಲ್‌ವೇರ್ ನಿಮ್ಮ ಫೋನ್ಗಳಲ್ಲಿ ಇದ್ದರೆ ಈಗಲೇ ಎಚ್ಚರವಹಿಸಿ.
ಇದನ್ನೂ ಓದಿ:ನಿರ್ಮಾಣ ಹಂತದ ಕಟ್ಟಡದಲ್ಲಿ Fire Accident; ಇಬ್ಬರು ಕಾರ್ಮಿಕರು ಸಾವು
ಹೌದು, ಇಂತಹ ಮಾಲ್‌ವೇರ್ ಹೊಂದಿರುವ ಸಾಪ್ಟ್ವೇರ್ ಡೆವಲೆಪ್ಮೆಂಟ್ ಕಿಟ್ಗಳು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್ ಸೇರಿದಂತೆ ಅನೇಕ ಸ್ಟೋರ್ನಲ್ಲಿನಲ್ಲಿನ ಅಪ್ಲಿಕೇಶನ್‌ಗಳಲ್ಲಿ ಇದು ಕಂಡುಬಂದಿದೆ.
ಇದನ್ನೂ ಓದಿ:D. K. Shivakumar | ಹೆಬ್ಬಾಳದ ಮೆಟ್ರೋ ಕಾಮಗಾರಿಯನ್ನು ಪರಿಶೀಲಿಸಿದ ಡಿಕೆ ಶಿವಕುಮಾರ್
ಇನ್ನು ಇದರ ಹೆಸರು ಸ್ಪಾರ್ಕ್‌ಕ್ಯಾಟ್(SparkCat) ಮತ್ತು ಇದನ್ನು ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕದಿಯಲು ವಿನ್ಯಾಸಗೊಳಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್ ಒಂದರಿಂದಲೇ ಇದನ್ನು ಎರಡು ಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ. ಈ ಮಾಲ್‌ವೇರ್ ಇಲ್ಲಿಯವರೆಗೆ ಲಕ್ಷಾಂತರ ಜನರನ್ನು ಗುರಿಯಾಗಿಸಿಕೊಂಡಿದೆ.
20 ಕ್ಕೂ ಅಧಿಕ ಪೋನ್ ಹ್ಯಾಕ್
ಈ ಮಾಲ್‌ವೇರ್ ಮೂಲಕ ಹ್ಯಾಕರ್‌ಗಳು ನಮ್ಮ ಪೋನ್ಗಳ ಪ್ರದೇಶವನ್ನು ಪ್ರವೇಶಿಸಿ, ವಿಭಿನ್ನ ತಂತ್ರಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇಲ್ಲಿಯವರೆಗೆ 18 ಆಂಡ್ರಾಯ್ಡ್ ಮತ್ತು 10 ಐಒಎಸ್ ಅಪ್ಲಿಕೇಶನ್‌ಗಳು ಈ ಮಾಲ್‌ವೇರ್‌ನಿಂದ ಸೋಂಕಿಗೆ(ಅಪಾಯ) ಒಳಗಾಗಿರುವುದು ಕಂಡುಬಂದಿದೆ.
ಇದನ್ನೂ ಓದಿ:ಬೆಳ್ಳಗಿರುವ ಹೀರೋಯಿನ್ ಬೇಕಿಲ್ಲ… ಸಾಯಿ ಪಲ್ಲವಿ ಕುರಿತು ಅಲ್ಲು ಅರವಿಂದ್ ಓಪನ್ ಟಾಕ್ | Sai Pallavi
ಈ ಅಪ್ಲಿಕೇಶನ್‌ಗಳಲ್ಲಿ ಒಂದು ChatAi ಆಗಿದ್ದು, ಇದನ್ನು Google Play Store ನಿಂದ ತೆಗೆದುಹಾಕುವ ಮೊದಲು 50,000 ಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ. ಈ ಮಾಲ್‌ವೇರ್ ಅನ್ನು ಹುದುಗಿಸಿರುವ ಇಂತಹ ಹಲವು ಅಪ್ಲಿಕೇಶನ್‌ಗಳು ಪ್ಲೇ ಮತ್ತು ಆಪ್ ಸ್ಟೋರ್‌ನಲ್ಲಿ ಇನ್ನೂ ಲಭ್ಯವಿದೆ. ಇದು ಬಳಕೆದಾರರ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ನಿಮ್ಮ ಫೋನ್‌ನಲ್ಲಿ ಅಂತಹ ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಆಗಿದೆ ಎಂದು ನಿಮಗನಿಸಿದರೆ ತಕ್ಷಣ ಅದನ್ನು ಆನ್ ಇನ್ಸ್ಟಾಲ್ ಮಾಡಿ.(ಏಜೆನ್ಸೀಸ್)
Google ನಲ್ಲಿ ಇಂತಹ ವಿಷಯಗಳು ಸರ್ಚ್ ಮಾಡಬೇಡಿ!: ಉಲ್ಲಂಘಿಸಿದರೆ ಜೈಲೂಟ ಫಿಕ್ಸ್