

Google:ಇಂದಿನ ಅತ್ಯಾಧುನಿ ಯುಗದಲ್ಲಿ ಇಂಟರ್ನೆಟ್ ನಮ್ಮ ಜೀವನ ಪ್ರಮುಖ ಭಾಗವಾಗಿದೆ. ನಮಗೆ ಯಾವುದೇ ಮಾಹಿತಿ ಬೇಕಾದರೆ ಮೊದಲು GOOGLE ಸರ್ಚ್ ಎಂಜಿನ್ಗೆ ಹೋಗಿ, ಅದರ ಸಹಾಯ ಪಡೆಯುತ್ತೇವೆ. ಆದರೆ, ಗೂಗಲ್ನಲ್ಲಿ ಯಾವ ವಿಷಯದ ಬಗ್ಗೆ ಹುಡುಕಾಟ ನಡೆಸಿದರೆ ಜೈಲು ಸೇರಬೇಕಾಗುತ್ತಯೇ ಎಂದು ಗೊತ್ತಿದೆಯೇ?.
ಹೌದು, ಇತ್ತೀಚಿನ ದಿನಗಳಲ್ಲಿ ಗೂಗಲ್ನಲ್ಲಿ ಬೇಡವಾದ ವಿಷಯಗಳ ಬಗ್ಗೆ ಮಾಹಿತಿ ಹುಡುಕಾಟ ಮಾಡಬೇಕಾದರೆ ಎಚ್ಚರವಹಿಸುವುದು ಅಗತ್ಯ. ಅಂತಹ ವಿಷಯಗಳ ಬಗ್ಗೆ ಸರ್ಚ್ ಮಾಡಿದೆರೆ ನಿಮ್ಮ ಮನೆಗೆ ಪೊಲೀಸರು ಬರುವುದು ಗ್ಯಾರಂಟಿ ಎನ್ನುತ್ತಿದೆ ಗೂಗಲ್. ಹೀಗಾಗಿ, ಗೂಗಲ್ನಲ್ಲಿನ ಯಾವ ವಿಷಯಗಳ ಬಗ್ಗೆ ಹುಡುಕಾಟ ಮಾಡಬಾರದು ಎಂದು ತಿಳಿಯೋಣ ಬನ್ನಿ..
ಬಾಂಬ್ ತಯಾರಿಕೆಯ ವಿಧಾನಗಳು ಮತ್ತು ಭಯೋತ್ಪಾದನೆ ಸಂಬಂಧಿಸಿದ ಚಟುವಟಿಕೆಗಳ ಮಾಹಿತಿ ಮತ್ತು ಅದರ ವಿಷಯದ ಬಗ್ಗೆ ಗೂಗಲ್ ಸರ್ಚ್ ಮಾಡಿದರೆ, ಭದ್ರತಾ ಸಂಸ್ಥೆಗಳು ಕೂಡಲೇ ಅಲರ್ಟ್ ಆಗುತ್ತೇವೆ. ಇಂತಹ ವಿಷಯಗಳು ಹುಡುಕಿದರೆ ದೇಶದ್ರೋಹದ ಪ್ರಕರಣದಡಿಯಲ್ಲಿ ದೂರು ದಾಖಲಾಗಿ ಜೈಲಿಗೆ ಹಾಕಬಹುದು.
ಗೂಗಲ್ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ಅಕ್ಷೇಪಾರ್ಹ ವಿಡಿಯೋಗಳು ಹುಡುಕಿದರೆ ಕಾನೂನುಬದ್ಧ ಅಪರಾಧವಾಗಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇದರ ಮೇಲೆ ಕಟ್ಟುನಿಟ್ಟಿನ ನಿಷೇಧವಿದೆ. ನೀವು ಇಂತಹ ಯಾವುದೇ ವಿಷಯದ ವಿಡಿಯೋಗಳನ್ನು ಡೌನ್ಲೋಡ್ ಮಾಡಿದೆ ಮತ್ತು ಹಂಚಿಕೊಂಡರೆ ನಿಮ್ಮ ಮೇಲೆ ಪ್ರಕರಣ ದಾಖಲಾಗುವುದು.
ಗೂಗಲ್ನಲ್ಲಿ ಸಾಮಾಜಿಕ ಜಾಲತಾಣದ ಖಾತೆಗಳನ್ನು ಹೇಗೆ ಹ್ಯಾಕ್ ಮಾಡುವುದು ಅಥವಾ ಇತರರ ವೈಫೈ ಪಾಸವರ್ಡ್ ಕದಿಯುವುದೇಗೆ ಎಂದು ಸರ್ಜ್ ಮಾಡಿದರೆ ಜೈಲು ಗ್ಯಾರಂಟಿ.
ನಿಷೇಧಿತ ಔಷಧಿ ಸೇರಿದಂತೆ ಮಾದಕ ದ್ರವ್ಯ ಖರೀದಿಸುವ ಬಗ್ಗೆ ಮತ್ತು ಯಾವುದೇ ಅಕ್ರಮ ಶಸ್ತ್ರಾಸ್ತ್ರ ಖರೀದಿ ಬಗ್ಗೆ ಹುಡುಕಾಟ ನಡೆಸಿದರೆ, ಮಾದಕ ದ್ರವ್ಯ ನಿಯಂತ್ರಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಲರ್ಟ್ ಆಗುತ್ತೆ.
ನೀವು ಯಾರೊಬ್ಬರ ಮೊಬೈಲ್ ಸಂಖ್ಯೆ, ಮನೆ ವಿಳಾಸ ಅಥವಾ ಬ್ಯಾಂಕ್ ವಿವರಗಳನ್ನು ಹೊರತೆಗೆಯಲು ಪ್ರಯತ್ನಿಸಿದುವುದು ಅಪರಾಧವಾಗಿದೆ. ನೀವು ಯಾರೊಬ್ಬರ ಗೌಪ್ಯತೆಯನ್ನು ಉಲ್ಲಂಘಿಸಿದರೆ, ನಿಮ್ಮನ್ನು ಐಟಿ ಕಾಯ್ದೆ 2000 ರ ಅಡಿಯಲ್ಲಿ ಜೈಲಿಗೆ ಹಾಕಬಹುದು.
ಗೂಗಲ್ನಲ್ಲಿ ತಪ್ಪು ವಿಷಯಗಳನ್ನು ಹುಡುಕುದರಿಂದ ನಿಮ್ಮನ್ನು ಜೈಲಿಗೆ ಹಾಕಬಹುದು. ಆದ್ದರಿಂದ, ಗೂಗಲ್ ಅನ್ನು ಬುದ್ಧಿವಂತಿಕೆಯಿಂದ ಬಳಸಿ ಮತ್ತು ಕಾನೂನು ಮಿತಿಯೊಳಗೆ ಇಂಟರ್ನೆಟ್ ಬಳಸಿ.(ಏಜೆನ್ಸೀಸ್)