More

    ಫಿಟ್​ನೆಸ್​ ಬಯಸುವವರಿಗೆ ಮಲೈಕಾ ಸಲಹೆ – ನೌಕಾಸನ !

    ಮುಂಬೈ : ಬಾಲಿವುಡ್​ ನಟಿಯರನ್ನು ನೋಡಿ ಮನಸೋಲದವರಿಲ್ಲ. ಅದರಲ್ಲೂ ಸಣ್ಣ ನಡುವನ್ನು ಕುಲುಕುತ್ತಾ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಿರುವ ಮಲೈಕಾ ಅರೋರಾ ಅವರಂಥ ಫಿಟ್​ ಪರ್ಸನಾಲಿಟಿ ಹೊಂದಿರುವವರಿಗೆ ಲಕ್ಷಾಂತರ ಅಭಿಮಾನಿಗಳು.

    ಅಂದ ಹಾಗೆ ಪ್ರತಿ ಸೋಮವಾರ ಒಳ್ಳೆಯ ಯೋಗ ಪೋಸ್​ಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವುದು ಮಲೈಕಾರ ವಾಡಿಕೆಯಾಗಿದೆ. ಇದನ್ನು ಮಲೈಕಾಸ್​ ಮೂವ್​ ಆಫ್​ ದ ವೀಕ್​ ಶೀರ್ಷಿಕೆಯಲ್ಲಿ ಅವರು, 12.8 ಮಿಲಿಯನ್​ ಅನುಯಾಯಿಗಳನ್ನು ಹೊಂದಿರುವ ತಮ್ಮ ಇನ್ಸ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡುತ್ತಾರೆ. ಫಿಟ್​ನೆಸ್​ ಬಗ್ಗೆ ಬಹಳ ಕಾಳಜಿ ವಹಿಸುವ ಮಲೈಕಾ ಇವತ್ತಿನ ಪೋಸ್ಟ್​ನಲ್ಲಿ ನಡುವಿಗೆ ಬಲ ಕೊಡುವ ವಿಶೇಷ ಯೋಗಾಸನದ ಬಗ್ಗೆ ಬರೆದಿದ್ದಾರೆ. ಅದೆಂದರೆ ನೌಕಾಸನ !

     
     
     
     
     
    View this post on Instagram
     
     
     
     
     
     
     
     
     
     
     

    A post shared by Malaika Arora (@malaikaaroraofficial)

    ನೌಕಾಸನ ಅಥವಾ ಬೋಟ್​ ಪೋಸ್​ ಮಾಡುತ್ತಿರುವ ತಮ್ಮ ಆಕರ್ಷಕ ಚಿತ್ರದೊಂದಿಗೆ ಮಲೈಕಾ ಈ ಆಸನವನ್ನು ಮಾಡುವ ವಿಧಾನವನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಹೊಟ್ಟೆಯ ಮತ್ತು ನಡುವಿನ ಸ್ನಾಯುಗಳನ್ನು ಬಲಪಡಿಸಿಕೊಳ್ಳಲು ಮತ್ತು ಆತ್ಮವಿಶ್ವಾಸ, ಇಚ್ಛಾಶಕ್ತಿ ಮತ್ತು ಸ್ವಯಂನಿಯಂತ್ರಣ ಹೆಚ್ಚಿಸಲು ಈ ಆಸನ ಬಹಳ ಉಪಯುಕ್ತ ಎಂದಿದ್ದಾರೆ. ‘ನೀವೂ ನೌಕಾಸನ ಮಾಡಿ ನಿಮ್ಮ ಫೋಟೋವನ್ನು ಶೇರ್​ ಮಾಡಿ, ನನ್ನನ್ನು ಟ್ಯಾಗ್ ಮಾಡಿ’ ಎಂದು ಆಸಕ್ತರಿಗೆ ಕರೆ ನೀಡಿದ್ದಾರೆ. (ಏಜೆನ್ಸೀಸ್)

    ತಾಲ್ಲೂಕು-ಜಿಲ್ಲಾ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಸೌಲಭ್ಯ : ಮೇಲ್ದರ್ಜೆ ಕಾರ್ಯಕ್ಕೆ 1,500 ಕೋಟಿ ರೂ. ಮಂಜೂರು

    VIDEO| ಮನೆ ಬಾಗಿಲಿಗೆ ಹೋಗಿ ಕರೆದರೂ ಕರೊನಾ ವ್ಯಾಕ್ಸಿನ್​ ಪಡೆಯಲು ಸೋಲಿಗರು ಹಿಂದೇಟು

    https://www.vijayavani.net/one-fruit-for-1000-rs-unique-noorjahan-mango/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts