More

    VIDEO| ಮನೆ ಬಾಗಿಲಿಗೆ ಹೋಗಿ ಕರೆದರೂ ಕರೊನಾ ವ್ಯಾಕ್ಸಿನ್​ ಪಡೆಯಲು ಸೋಲಿಗರು ಹಿಂದೇಟು

    ಚಾಮರಾಜನಗರ : ಕರೊನಾ ಸೋಂಕು ನಿಯಂತ್ರಣಕ್ಕಾಗಿ ಅಧಿಕಾರಿಗಳು ಹಳ್ಳಿಗಳ ಮೂಲೆಮೂಲೆಗೆ ಹೋಗಿ ಕರೊನಾ ಟೆಸ್ಟ್​ ಮಾಡುತ್ತಿದ್ದಾರೆ, ಕರೊನಾ ವ್ಯಾಕ್ಸಿನ್ ನೀಡುವುದರಲ್ಲಿ ತೊಡಗಿದ್ದಾರೆ. ಇಂಥದ್ದೇ ಪ್ರಯತ್ನ ಚಾಮರಾಜನಗರ ಜಿಲ್ಲೆ ಹನೂರಿನ ಹಾವಿನಮೂಲೆ ಹಾಡಿಯಲ್ಲಿ ನಡೆಯುತ್ತಿದೆ. ಆದರೆ ಕರೊನಾ ಟೆಸ್ಟ್ ಮಾಡಿಸಿಕೊಳ್ಳಲು, ವ್ಯಾಕ್ಸಿನ್ ಪಡೆಯಲು ಇಲ್ಲಿ ವಾಸಿಸುತ್ತಿರುವ ಸೋಲಿಗರು ಹಿಂದೇಟು ಹಾಕುತ್ತಿದ್ದಾರೆ.

    ಈಗಾಗಲೇ ಈ ಭಾಗದಲ್ಲಿ ಹತ್ತು ಮಂದಿಗೆ ಕರೊನಾ ಸೋಂಕು ಧೃಢವಾಗಿದೆ. ಆದ್ರು ಕ್ಯಾರೆ ಎನ್ನದ ಸೋಲಿಗರು ಪರೀಕ್ಷೆಗೆ ಒಳಗಾಗುತ್ತಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿ ಹಾಡಿಗಳಿಗೆ ತೆರಳಿದ್ರೆ, ಸೋಲಿಗರು ಕಾಡಿನತ್ತ ತೆರಳುತ್ತಿದ್ದಾರೆ. ಮನೆಬಾಗಿಲಿಗೆ ಹೋಗಿ ಲಸಿಕೆ ಹಾಕ್ತೀವಿ ಅಂದ್ರೂ ಬೇಡ ಅಂತಿದ್ದಾರೆ. ಮನವೊಲಿಸಲು ಆರೋಗ್ಯ ಸಿಬ್ಬಂದಿ, ಗ್ರಾಮ ಪಂಚಾಯತಿ ಸದಸ್ಯರು ಹರಸಾಹಸ ಮಾಡುತ್ತಿದ್ದರೆ, ಜನ ಮಾತ್ರ ಜಗ್ಗುತ್ತಿಲ್ಲ.

    ಹಾವಿನದೊಡ್ಡಿ ಹಾಡಿಯಲ್ಲಿ ನಾಲ್ಕು ಪೋಡುಗಳಿವೆ. ಅವುಗಳಲ್ಲಿ ಕನ್ನೇಗೌಡನದೊಡ್ಡಿ ಪೋಡಿನಲ್ಲಿ ಲಸಿಕೆ ಪಡೆಯಲು ಸೋಲಿಗರು ಮುಂದಾಗಿದ್ದಾರೆ. ಆದರೆ, ಮೇಸ್ತ್ರಿ ದೊಡ್ಡಿ, ಯಜಮಾನನ ದೊಡ್ಡಿ, ಹನುಮನದೊಡ್ಡಿ ಪೋಡಿಗಳಲ್ಲಿ ಜನ ಹಿಂದೇಟು ಹಾಕಿದ್ದಾರೆ. ಇಲ್ಲಿನ ನಿವಾಸಿಗಳ ಮನವೊಲಿಸಲು ಹಿರಿಯ ಅಧಿಕಾರಿಗಳು, ಹಾಡಿಯ ಯಜಮಾನರು ಹೋಗಿ ಮನವಿ ಮಾಡಿದರೂ ಅದಕ್ಕೆ ಸ್ಪಂದಿಸುತ್ತಿಲ್ಲ. ಕೆಲವೇ ಕೆಲವು ಮಂದಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದು, ಈವರೆಗೆ 250 ಜನರ ಪೈಕಿ ಲಸಿಕೆ ಹಾಕಿಸಿಕೊಂಡವರು 20 ಮಂದಿ ಮಾತ್ರ. ಸೋಲಿಗರ ಈ ನಡವಳಿಕೆಗೆ ಪಿ.ಜಿ.ಪಾಳ್ಯ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಥಂಡಾ ಆಗಿದ್ದಾರೆ.

    ಒಂದು ಹಣ್ಣಿಗೆ 1,000 ರೂ. ಬೆಲೆ ಬಾಳುವ ನೂರ್​ಜಹಾನ್ ಮಾವಿನಹಣ್ಣು!

    ಅನ್​​ಲಾಕ್​ ಬಸ್​ ಸಂಚಾರಕ್ಕೆ ಸಿದ್ಧತೆ : ಸಾರಿಗೆ ನೌಕರರಿಗೆ ಕರ್ತವ್ಯದ ಕರೆ

    ಸುಮಾರು 1 ಲಕ್ಷ ಹೊಸ ಪ್ರಕರಣಗಳು; 2 ತಿಂಗಳಲ್ಲಿ ಅತಿಕಡಿಮೆ ಸೋಂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts