ಸುಮಾರು 1 ಲಕ್ಷ ಹೊಸ ಪ್ರಕರಣಗಳು; 2 ತಿಂಗಳಲ್ಲಿ ಅತಿಕಡಿಮೆ ಸೋಂಕು

ನವದೆಹಲಿ : ಕಳೆದ 24 ಗಂಟೆಗಳಲ್ಲಿ 1,00,636 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಇದು ಎರಡು ತಿಂಗಳಲ್ಲಿ ಅತಿಕಡಿಮೆ ನಿತ್ಯಪ್ರಕರಣಗಳ ಸಂಖ್ಯೆಯಾಗಿದೆ. ಸೋಂಕಿನ ಪ್ರಮಾಣ ಸತತವಾಗಿ ಇಳಿಮುಖವಾಗಿದೆ. ನಿನ್ನೆ ಬೆಳಿಗ್ಗೆ 1.14 ಲಕ್ಷ ಹೊಸ ಪ್ರಕರಣ ದಾಖಲಾಗಿದ್ದು, ಇಂದು ಬೆಳಿಗ್ಗೆಯ ವರದಿಯಲ್ಲಿ ಶೇ.12 ರಷ್ಟು ಇಳಿಕೆ ಕಂಡುಬಂದಿದೆ. ಪ್ರತಿ ನೂರು ಜನರಿಗೆ ಕರೊನಾ ಪಾಸಿಟಿವ್​ ಫಲಿತಾಂಶ ಬರುವ ಸಂಖ್ಯೆಯನ್ನು ಆಧರಿಸಿದ ಪಾಸಿಟಿವಿಟಿ ರೇಟ್ ಕೂಡ ಇಳಿಮುಖವಾಗಿದ್ದು, ಶೇ. 6.33 ರಷ್ಟಿದೆ. ಕಳೆದ 14 ದಿನಗಳಿಂದ ಭಾರತದಲ್ಲಿ ಸತತವಾಗಿ … Continue reading ಸುಮಾರು 1 ಲಕ್ಷ ಹೊಸ ಪ್ರಕರಣಗಳು; 2 ತಿಂಗಳಲ್ಲಿ ಅತಿಕಡಿಮೆ ಸೋಂಕು