More

    ಸುಮಾರು 1 ಲಕ್ಷ ಹೊಸ ಪ್ರಕರಣಗಳು; 2 ತಿಂಗಳಲ್ಲಿ ಅತಿಕಡಿಮೆ ಸೋಂಕು

    ನವದೆಹಲಿ : ಕಳೆದ 24 ಗಂಟೆಗಳಲ್ಲಿ 1,00,636 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಇದು ಎರಡು ತಿಂಗಳಲ್ಲಿ ಅತಿಕಡಿಮೆ ನಿತ್ಯಪ್ರಕರಣಗಳ ಸಂಖ್ಯೆಯಾಗಿದೆ. ಸೋಂಕಿನ ಪ್ರಮಾಣ ಸತತವಾಗಿ ಇಳಿಮುಖವಾಗಿದೆ. ನಿನ್ನೆ ಬೆಳಿಗ್ಗೆ 1.14 ಲಕ್ಷ ಹೊಸ ಪ್ರಕರಣ ದಾಖಲಾಗಿದ್ದು, ಇಂದು ಬೆಳಿಗ್ಗೆಯ ವರದಿಯಲ್ಲಿ ಶೇ.12 ರಷ್ಟು ಇಳಿಕೆ ಕಂಡುಬಂದಿದೆ.

    ಪ್ರತಿ ನೂರು ಜನರಿಗೆ ಕರೊನಾ ಪಾಸಿಟಿವ್​ ಫಲಿತಾಂಶ ಬರುವ ಸಂಖ್ಯೆಯನ್ನು ಆಧರಿಸಿದ ಪಾಸಿಟಿವಿಟಿ ರೇಟ್ ಕೂಡ ಇಳಿಮುಖವಾಗಿದ್ದು, ಶೇ. 6.33 ರಷ್ಟಿದೆ. ಕಳೆದ 14 ದಿನಗಳಿಂದ ಭಾರತದಲ್ಲಿ ಸತತವಾಗಿ ಪಾಸಿಟಿವಿಟಿ ದರ ಶೇ. 10 ರ ಕೆಳಗಿರುವುದು ಆಶಾದಾಯಕವಾಗಿದೆ. ಕಳೆದ 24 ಗಂಟೆಗಳಲ್ಲಿ 2,427 ಜನರು ಕರೊನಾದಿಂದಾಗಿ ಮೃತಪಟ್ಟಿದ್ದು, ದೇಶಾದ್ಯಂತ 14,01,609 ಸಕ್ರಿಯ ಪ್ರಕರಣಗಳಿವೆ.

    ಇದನ್ನೂ ಓದಿ: ಗಂಡುಮಗು ಹುಟ್ಟಲಿಲ್ಲ ಎಂದು ಪತ್ನಿ, ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಪಾಪಿ!

    ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ದೆಹಲಿ ಸೇರಿದಂತೆ ಹಲವು ರಾಜ್ಯಗಳು ಇಂದಿನಿಂದ ಕ್ರಮೇಣವಾಗಿ ಲಾಕ್​ಡೌನ್ ಸಡಿಲಗೊಳಿಸುವ ನಿರ್ಣಯ ತೆಗೆದುಕೊಂಡಿವೆ. ಕರ್ನಾಟಕ, ತಮಿಳುನಾಡು, ಹಿಮಾಚಲ ಪ್ರದೇಶ, ಹರಿಯಾಣ, ಗೋವಾ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಕರೊನಾ ಲಾಕ್​ಡೌನ್​ಅನ್ನು ಜೂನ್ 14 ರವರೆಗೆ ವಿಸ್ತರಿಸಲಾಗಿದೆ. (ಏಜೆನ್ಸೀಸ್)

    ಒಂದು ಹಣ್ಣಿಗೆ 1,000 ರೂ. ಬೆಲೆ ಬಾಳುವ ನೂರ್​ಜಹಾನ್ ಮಾವಿನಹಣ್ಣು!

    ಮಹಿಳೆ ದೇಹದಲ್ಲಿ 216 ದಿನಗಳಿಂದ ಬೀಡುಬಿಟ್ಟು, 32 ಬಾರಿ ರೂಪಾಂತರ ಹೊಂದಿದ ಕರೊನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts