ಮಹಾಕುಂಭ ಮೇಳದ ಮೂಲಕ ವೈರಲ್​ ಆದ ಚೆಲುವೆ Monalisa ಹೊಸ ಅವತಾರ; ಹಾಟ್​ ಡ್ಯಾನ್ಸ್ ವಿಡಿಯೋ ವೈರಲ್​

Monalisa Hot Dance
Published on

ಪ್ರಯಾಗ್​ರಾಜ್​: ಹಾಲಿ ನಡೆಯುತ್ತಿರುವ ಕುಂಭಮೇಳದಲ್ಲಿ ತನ್ನ ಕಣ್ಣಿನ ಮೂಲಕವೇ ಎಲ್ಲರ ಗಮನ ಸೆಳೆದಿರುವ ಯುವತಿ ಮೊನಾಲಿಸಾ (Monalisa) ಇಂಟರ್​ನೆಟ್​ ಸೆನ್ಸೇಷನ್​ ಎಂದರೆ ತಪ್ಪಾಗಲಾರದು. ಸದ್ಯ ಮೊನಾಲಿಸಾಗೆ ಸಂಬಂಧಿಸಿದ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಇದೀಗ ಆಕೆ ನಟಿಸಿರುವ ಹಾಡುನ್ನು ರಿಲೀಸ್​ ಮಾಡಲಾಗಿದೆ.

ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿ ಮೊನಾಲಿಸಾ (Monalisa) ಮುಗ್ಧ ನಗು, ನೀಲಿ ಕಣ್ಣುಗಳ ಮೂಲಕವೇ ಎಲ್ಲರ ಗಮನಸೆಳೆದು ರಾತ್ರೋರಾತ್ರಿ ಫೇಮಸ್‌ ಆಗಿದ್ದಾಳೆ. ಇದೀಗ ಮೈಚಳಿ ಬಿಟ್ಟು ನಟಿಸಿರುವ ಹಾಡು ರಿಲೀಸ್​ ಆಗಿದ್ದು, ಸದ್ಯ ಈ ವಿಡಿಯೋ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಕೆಂಪು ಬಣ್ಣದ ಡ್ರೆಸ್​​ನಲ್ಲಿ ಕಾಣಿಸಿಕೊಂಡಿರುವ ಮೊನಾಲಿಸಾಳ ಸಂಪೂರ್ಣ ಲುಕ್‌ ಬದಲಾಗಿದ್ದು, AI ತಂತ್ರಜ್ಞಾನವನ್ನು ಬಳಸಿ ಈ ವಿಡಿಯೋ ಮಾಡಲಾಗಿದೆ. ಸದ್ಯ ಈ ವಿಡಿಯೋ ವೈರಲ್​ ಆಗಿದ್ದು, ಹಲವರು ವಿಡಿಯೋ ಮಾಡಿದವರ ವಿರುದ್ಧ ಕಿಡಿಕಾರಿದ್ದಾರೆ.

ni8.out9 ಎಂಬ ಇನ್ಸ್​ಟಾಗ್ರಾಮ್​ ಪೇಜ್​ನಲ್ಲಿ ಈ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದ್ದು, 12.8 ಮಿಲಿಯನ್​​ಗೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಹಲವರು ತಂತ್ರಜ್ಞಾನದ ಬಳಕೆಗೆ ಕಿಡಿಕಾರಿದ್ದು, ಹಲವರು ವಿಡಿಯೋ ಜನರೇಟ್​ ಮಾಡಿದವರ ವಿರುದ್ಧ ಕಿಡಿಕಾರಿ ಕಮೆಂಟ್​ ಸೆಕ್ಷನ್​ನಲ್ಲಿ ಮನಸ್ಸೋಇಚ್ಛೆ ಬೈದಿದ್ಧಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net