Mahakumbh Mela; ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಭಕ್ತರು ಸಾವು

Belagavi Devotees
Published on

ಬೆಳಗಾವಿ: ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ (Mahakumbh Mela) ಮೌನಿ ಅಮಾವಾಸ್ಯೆಯ ಪ್ರಯುಕ್ತ ಭಕ್ತರು ಪುಣ್ಯಸ್ನಾನ ಮಾಡಲು ಮುಂದಾದಾಗ ಕಾಲ್ತುಳಿತ ಉಂಟಾಗಿದ್ದು, ಈ ಘಟನೆಯಲ್ಲಿ ತಾಯಿ-ಮಗಳು ಸೇರಿದಂತೆ ಬೆಳಗಾವಿಯ ನಾಲ್ವರು ಭಕ್ತಾಧಿಗಳು ಮೃತಪಟ್ಟಿದ್ದಾರೆ.

ಬೆಳಗಾವಿಯ  ಜ್ಯೋತಿ ಹತ್ತರವಾಠ (50), ಅವರ ಮಗಳು ಮೇಘಾ ಹತ್ತರವಾಠ್‌ (25), ಮಹಾದೇವಿ ಹಾಗೂ  ಶೆಟ್ಟಿಗಲ್ಲಿ ನಿವಾಸಿಯಾದ ಅರುಣ ಕೋಪರ್ಡೆ ಕಾಲ್ತುಳಿತದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಈ ಮೂವರು ಟ್ರಾವೆಲ್​ ಏಜೆನ್ಸಿ ಮೂಲಕ ಮಹಾ ಕುಂಭಮೇಳಕ್ಕೆ ತೆರಳಿದ್ದರು. ಮಹಾಕುಂಭಮೇಳದಲ್ಲಿ ಇಂದು ಬೆಳಗಿನ ಜಾವ ಪುಣ್ಯಸ್ನಾನ ಮಾಡಲು ಹೋಗಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಈ ಮೂವರು ಮೃತಪಟ್ಟಿದ್ದಾರೆ. ಮೃತರ ಮನೆಗಳಿಗೆ ಬೆಳಗಾವಿ ಜಿಲ್ಲಾಡಳಿತದ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಖಚಿತ ಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net