ತಮ್ಮ ಬಳಿ ಆಶೀರ್ವಾದ ಕೇಳಿದ ವ್ಯಕ್ತಿಗೆ ನಾಗಾಸಾಧು ಮಾಡಿದ್ದು ಮಾತ್ರ... Mahakumbh ಮೇಳದ ವಿಡಿಯೋ ವೈರಲ್​

Viral Video
Published on

ಪ್ರಯಾಗ್​ರಾಜ್​: ಪ್ರಯಾಗ್​ರಾಜ್​ನಲ್ಲಿ ಜನವರಿ 13ರಿಂದ ಆರಂಭವಾಗಿರುವ ಮಹಾಕುಂಭ ಮೇಳಕ್ಕೆ (Mahakumbh Mela) ಭಕ್ತ ಸಾಗರವೇ ಹರಿದು ಬರುತ್ತಿದ್ದು, ಪ್ರತಿನಿತ್ಯ ಕೋಟ್ಯಂತರ ಭಕ್ತರು ಪುಣ್ಯಸ್ನಾನ ಮಾಡಿ ಅಲ್ಲಿರುವ ಸಾಧುಗಳಿಂದ ಆಶೀರ್ವಾದ ಪಡೆಯುತ್ತಿದ್ದಾರೆ. ಸದ್ಯ ಕುಂಭಮೇಳಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, ಸಾಧುವೊಬ್ಬರು ಭಕ್ತನಿಗೆ ವಿಶೇಷವಾಗಿ ಆಶೀರ್ವಾದ ಮಾಡಿರುವ ವಿಡಿಯೋ ವೈರಲ್​ ಆಗುತ್ತಿದೆ.

ಹಾಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ (Mahakumbh Mela) ಭಕ್ತರೊಬ್ಬರು ನಾಗಾಸಾಧುವಿನ ಬಳಿ ಆಶೀರ್ವಾದ ಪಡೆದಿದ್ದಾರೆ. ಆದರೆ, ಆ ನಾಗಾಸಾಧು ಭಕ್ತನಿಗೆ ಬೇರೆ ರೀತಿಯಾಗಿ ಆಶೀರ್ವಾದ ಮಾಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಭಕ್ತರೊಬ್ಬರು ಪುಣ್ಯಸ್ನಾನ ಮಾಡಿದ ಬಳಿಕ ನಾಗಾಸಾಧು ಒಬ್ಬರ ಬಳಿ ಆಶೀರ್ವಾದ ಪಡೆಯಲು ಹೋಗುತ್ತಾರೆ. ಮೊದಲಿಗೆ ಆಶೀರ್ವಾದ ಮಾಡುವ ಸಾಧು ಆ ಬಳಿಕ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿ ಮಾಡದಂತೆ ಹೇಳಿದ್ದಾರೆ. ಬಳಿಕ ಭಕ್ತನ ತಲೆ ಮೇಲೆ ಜೋರಾಗಿ ಹೊಡೆದಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದ್ದು, ಅನೇಕರು ಸಾಧುವಿನ ನಡೆಯನ್ನು ಖಂಡಿಸಿದ್ದಾರೆ.

ಈ ಹಿಂದೆ ಇದೇ ನಾಗಾಸಾಧು ಅಸಂಬದ್ಧ ಪ್ರಶ್ನೆಗಳನ್ನು ಕೇಳಿದರೆಂದು ಆರೋಪಿಸಿ ಯೂಟ್ಯೂಬರ್​ ಒಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸಖತ್ ವೈರಲ್​ ಆಗಿತ್ತು. ಈ ವಿಚಾರ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿತ್ತು. ಇದೀಗ ಮತ್ತೊಮ್ಮೆ ಬಾಬಾಗೆ ಸಂಬಂಧಿಸಿದ ವಿಡಿಯೋ ಸಖತ್​ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net