

ಪ್ರಯಾಗ್ರಾಜ್: ವಿಶ್ವದ ಅತ್ಯಂತ ಪ್ರಸಿದ್ಧ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಮಾಹಕುಂಭ ಮೇಳವು ಜನವರಿ 13ರಂದು ಪ್ರಾರಂಭಗೊಂಡಿದ್ದು, ದೇಶ-ವಿದೇಶದಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ ಎಂದರೆ ತಪ್ಪಾಗಲಾರದು. ಲಕ್ಷಾಂತರ ಸಂಖ್ಯೆಯ ನಾಗ ಸಾಧುಗಳು, ಸಾಧು ಸಂತರುಗಳು ಕೂಡಾ ಆಗಮಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದೀಗ ನಾಗಾಸಾಧು ಒಬ್ಬರು ಯೂಟ್ಯೂಬರ್ನನ್ನು ಹೊಡೆದು ಓಡಿಸಿರುವ ಘಟನೆ ಮಹಾಕುಂಭಮೇಳದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಖತ್ ವೈರಲ್ (Video Viral) ಆಗಿದೆ. ಅನೇಕರು ನಾಗಾಸಾಧುವಿನ ನಡೆಯನ್ನು ಮೆಚ್ಚಿ ಕಮೆಂಟ್ ಹಾಕುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ (Video Viral) ನೋಡುವುದಾದರೆ ಧ್ಯಾನ ಮಾಡುತ್ತಿರುವ ನಾಗಾಸಾಧು ಒಬ್ಬರ ಬಳಿ ಬಂದು ಯೂಟ್ಯೂಬರ್ ಬಾಬಾ ನೀವು ಯಾವಾಗ ಸನ್ಯಾಸಿ ಪಂಥವನ್ನು ಸೇರಿದ್ದೀರಿ ಎಂಬ ಪ್ರಶ್ನೆಯನ್ನು ಕೇಳುತ್ತಾನೆ. ಮೊದಲಿಗೆ ಶಾಂತವಾಗಿಯೇ ಆತನ ಪ್ರಶ್ನೆಗಳಿಗೆ ಉತ್ತರಿಸಿದ ನಾಗಾಸಾದು ಆ ಬಳಿಕ ಆತನ ಅಸಂಬದ್ಧ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಲ್ಲಿಂದ ಹೊಡೆದು ಓಡಿಸಿದ್ದಾರೆ.
ಜನತಾ ದರ್ಬಾರ್ 123 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈವರೆಗೂ 20.9 ಮಿಲಿಯನ್ಗೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಅನೇಕರು ನಾಗಾಸಾಧುವಿನ ನಡೆಯನ್ನು ಮೆಚ್ಚಿದ್ದು, ಆತನಿಗೆ ಹೀಗೆಯೇ ಆಗಬೇಕಿತ್ತು ಎಂದು ಕಮೆಂಟ್ ಹಾಕಿ ಯೂಟ್ಯೂಬರ್ನ ವಿರುದ್ಧ ಕಿಡಿಕಾರಿದ್ದಾರೆ.