ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ, ರನ್ ಮೆಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ (Virat Kohli) ಐಪಿಎಲ್ ಹಾಗೂ ಟಿ20 ವಿಶ್ವಕಪ್ ಬಳಿಕ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಒಂದು ಅರ್ಧಶತಕ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಒಂದು ಶತಕ ಬಿಟ್ಟರೇ ವಿರಾಟ್ರ ಬ್ಯಾಟ್ನಿಂದ ರನ್ ಹರಿದು ಬಂದಿಲ್ಲ. ವಿರಾಟ್ರ ಕಳಪೆ ಫಾರ್ಮ್ ಗಮನಿಸಿ ಅನೇಕರು ನಿವೃತ್ತಿ ಘೋಷಿಸುವಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದು, ಇದೀಗ ಈ ಬಗ್ಗೆ ಪಾಕ್ ಕ್ರಿಕೆಟ್ ತಂಡದ ಆಟಗಾರ ಶೋಯೆಬ್ ಅಖ್ತರ್ (Shoaib Akthar) ಮಾತನಾಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಶೋಯೆಬ್ ಅಖ್ತರ್, ನೀವು ವಿರಾಟ್ನ (Virat Kohli) ಫಾರ್ಮ್ನ ವಿಚಾರಕ್ಕೆ ಬರುವುದಾದರೆ ಆತನಿಗೆ ಪಾಕಿಸ್ತಾನದ ವಿರುದ್ಧ ಪಂದ್ಯವಿದೆ ಎಂದು ಹೇಳಿ. ನಾವು ಈ ವಿಚಾರವನ್ನು ಗಮನಿಸಿದ್ದೇವೆ. 2022ರಲ್ಲಿ ಮೆಲ್ಬೋರ್ನ್ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯ ಅದಕ್ಕೆ ಜೀವಂತ ಉದಾಹರಣೆಯಾಗಿದೆ.
ಚಾಂಪಪಿಯನ್ಸ್ ಟ್ರೋಫಿ ವಿಚಾರಕ್ಕೆ ಬರುವುದಾದರೆ ಭಾರತವು ಬಲಿಷ್ಠ ತಂಡವಾಗಿದೆ. ರೋಹಿತ್, ಕೊಹ್ಲಿ, ಜಸ್ಪ್ರೀತ್ ಮತ್ತು ಎಲ್ಲರೂ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ. ಭಾರತಕ್ಕಾಗಿ ವಿರಾಟ್ ಕೊಹ್ಲಿ (Virat Kohli) ಹಾಗೂ ಜಸ್ಪ್ರೀತ್ ಬುಮ್ರಾ ಆಡುವುದನ್ನು ನೋಡುವುದೇ ಒಂದೆ ಚೆಂದ ಎಂದು ಪಾಕ್ ಕ್ರಿಕೆಟ್ ತಂಡದ ಆಟಗಾರ ಶೋಯೆಬ್ ಅಖ್ತರ್ ಹೇಳಿದ್ದಾರೆ.
ಫೆಬ್ರವರಿ 19ರಿಂದ ಮಾರ್ಚ್ 09ರವರೆಗೆ ಪಾಕಿಸ್ತಾನ ಹಾಗೂ ದುಬೈ (ಭಾರತದ ಪಂದ್ಯಗಳು ಮಾತ್ರ) ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಈಗಾಗಲೇ ತಂಡಗಳು ತಯಾರಿ ಆರಂಭಿಸಿದ್ದು, ಬಿಸಿಸಿಐ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಿದೆ. ಈ ಸಂಬಂಧ ಬಿಸಿಸಿಐ ಐಸಿಸಿ ಬಳಿ ಸಮಯ ಕೇಳಿದ್ದು, ಶೀಘ್ರದಲ್ಲೇ ತಂಡ ಪ್ರಕಟಿಸುವ ಸಾಧ್ಯತೆ ಇದೆ.
ಗೌತಮ್ ಗಂಭೀರ್ ಬಳಿಕ ಸಂಕಷ್ಟದಲ್ಲಿ ಸಹಾಯಕ ಸಿಬ್ಬಂದಿ; BCCI ನಿರ್ಧಾರದ ಕುರಿತು ಹಿರಿಯ ಅಧಿಕಾರಿಯ ಹೇಳಿಕೆ ವೈರಲ್