ಮುಂಬೈ: ಭಾರೀ ಹೈಪ್ನೊಂದಿಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಆಧಿಕಾರ ವಹಿಸಿಕೊಂಡಿದ್ದ ಗೌತಮ್ ಗಂಭೀರ್ ಸರಣಿ ಸೋಲುಗಳ ಬಳಿಕ ಬೆಂಕಿಯ ಕೆನ್ನಾಲಿಗೆಗೆ ಬಿದ್ದಿದ್ದು, ಇವರನ್ನು ಬದಲಾವಣೆ ಮಾಡುವಂತೆ ಆಗ್ರಹ ಕೇಳಿ ಬರುತ್ತಿದೆ. ಈ ಸಂಬಂಧ ಬಿಸಿಸಿಐ ನಾಯಕ ರೋಹಿತ್ ಶರ್ಮ ಹಾಗೂ ಗೌತಮ್ ಗಂಭೀರ್ರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದು, ಸೋಲಿಗೆ ಕಾರಣವಾದ ಅಂಶಗಳನ್ನು ಹುಡುಕುತ್ತಿದೆ. ಗೌತಮ್ ಗಂಭೀರ್ ಜತೆಗೆ ಸಹಾಯಕ ಸಿಬ್ಬಂದಿ ಮೇಲೂ ತೂಗುಗತ್ತಿ ನೇತಾಡುತ್ತಿದ್ದು, ಇವರ ಬದಲಾವರಣೆಗೂ ಆಗ್ರಹ ಕೇಳಿ ಬರುತ್ತಿದೆ.
ಗೌತಮ್ ಗಂಭೀರ್ ಕೇಳಿದ ಕೇಳಿದ ದುಬಾರಿ ವೇತನ, ಇಬ್ಬರು ಸಹಾಯಕ ಕೋಚ್ ಮತ್ತು ಬೌಲಿಂಗ್ ಕೋಚ್‌ಗಳನ್ನೇ ನೀಡಿ ಪೂರ್ಣಬೆಂಬಲ ಒದಗಿಸಿತ್ತು. ಅದರಂತೆ ಅಭಿಷೇಕ್ ನಾಯರ್ ಹಾಗೂ ರಿಯಾನ್ ಟೆನ್ ಡೋಸ್ಚೇಟ್ರನ್ನು ಗಂಭೀರ್ ಒತ್ತಾಯದ ಮೇಲೆ ನೇಮಿಸಲಾಗಿತ್ತು. ಟೆಸ್ಟ್ನಲ್ಲಿ ಹೆಚ್ಚು ಅನುಭವ ಹೊಂದಿರುವ ಈ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿದ್ದು, ಇವರ ಬದಲಾವಣೆಗೂ ಆಗ್ರಹ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐನ (BCCI)ಹಿರಿಯ ಅಧಿಕಾರಿ ಹಾಗೂ ಮಾಜಿ ಕ್ರಿಕೆಟಿಗರೊಬ್ಬರು ಮಾತನಾಡಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ಬೌಲಿಂಗ್ ಕೋಚ್ ಮಾರ್ನ್ ಮಾರ್ಕೆಲ್ ಹೊರತಾಗಿ ಸಹಾಯಕ ತರಬೇತುದಾರರಾದ ಅಭಿಷೇಕ್ ನಾಯರ್ ಮತ್ತು ರಿಯಾನ್ ಟೆನ್ ಡೋಸ್ಕೇಟ್ ಅವರು ತರಬೇತಿಯ ಪರಿಣಿತಿಯಲ್ಲಿ ಕೊರತೆಯಿದೆ, ವಿಶೇಷವಾಗಿ ಟೆಸ್ಟ್ ಬಂದಾಗ, ತಂಡದಲ್ಲಿ ಬೆಳೆಯುತ್ತಿರುವ ಅಭಿಪ್ರಾಯವಿದೆ. ಇಂಗ್ಲೆಂಡ್ ಪ್ರವಾಸಕ್ಕೆ ತಾಂತ್ರಿಕ ಪರಿಣತಿ ಹೊಂದಿರುವ ಕೋಚಿಂಗ್ ಸಿಬ್ಬಂದಿಯನ್ನು ನೇಮಿಸುವ ಅಗತ್ಯವಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸುನಿಲ್ ಗವಾಸ್ಕರ್, ವಿಭಿನ್ನ ತರಬೇತುದಾರರನ್ನು ಹೊಂದಿರುವ ಅರ್ಹತೆಯ ಬಗ್ಗೆ ನನಗೆ ತಿಳಿದಿಲ್ಲ. ಅದು ನಿಮಗೆ ತಿಳಿದಿದೆ, ನಾವು ವಿಭಿನ್ನ ಸನ್ನಿವೇಶದಲ್ಲಿ ನೋಡಬೇಕಾಗಿದೆ. ನಾನು ಗೌತಮ್ ಗಂಭೀರ್ ಮತ್ತು ಅವರ ಕೋಚಿಂಗ್ ಸಿಬ್ಬಂದಿಗೆ ಪ್ರಶ್ನೆಗಳನ್ನು ಕೇಳಬೇಕಿದೆ. ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ನಾವು ಮೊದಲು ಕೇಳಬೇಕಿದೆ ಎಂದು ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಆರಂಭವಾಗಿರುವ ಹೊಸ್ತಿಲಲ್ಲೇ ಕೋಚ್ ಬದಲಾವಣೆ ಬಗ್ಗೆ ಹೆಚ್ಚಾಗಿ ಕೂಗು ಕೇಳಿ ಬರುತ್ತಿದ್ದು, ಬಿಸಿಸಿಐ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪ್ರದರ್ಶನ ಆಧರಿಸಿ ಕೋಚ್ ಬದಲಾವಣೆ ಮಾಡುವ ಬಗ್ಗೆ ಬಿಸಿಸಿಐ ನಿರ್ಧರಿಸಲಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ; ಶೀಘ್ರ ಗುಣಮುಖರಾಗಲಿ ಎಂದ CT Ravi