ದುರ್ಘಟನೆ ನಡೆಯುತ್ತದೆ ಎಂದು ಭವಿಷ್ಯ ಹೇಳಿದ್ದರು; ಅಪಘಾತದ ಕುರಿತು ಅಸಲಿ ವಿಚಾರ ಬಿಚ್ಚಿಟ್ಟ ಸಚಿವೆ Laxmi Hebbalkar ಸಹೋದರ

blank

ಬೆಳಗಾವಿ: ಬೆಳಗಾವಿಗೆ ಪ್ರಯಾಣಿಸುವ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ (Laxmi Hebbalkar) ಅವರಿದ್ದ ಕಾರು ಅಪಘಾತಕ್ಕೀಡಾಗಿದ್ದು, ಗಂಭೀರವಾಗು ಗಾಯಗೊಂಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಅಪಘಾತ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಅವರ ಸಹೋದರ, ವಿಧಾನಪರಿಷತ್ ಸದಸ್ಯ ಚನ್ನರಾಜ್​ ಹಟ್ಟಿಹೊಳಿ ಮಾಹಿತಿ ನೀಡಿದ್ದು, ಈ ಹಿಂದೆ ದುರ್ಘಟನೆ ಬಗ್ಗೆ ಭವಿಷ್ಯ ಹೇಳಿದ್ದನ್ನು ಬಹಿರಂಗಪಡಿಸಿದ್ದಾರೆ.

ಬೆಳಗಾವಿಯಲ್ಲಿ ಈ ಬಗ್ಗೆ ಮಾತನಾಡಿದ ಚನ್ನರಾಜ್​ ಹಟ್ಟಿಹೊಳಿ, ಪಕ್ಷದ ಸಿಎಲ್​ಪಿ ಸಭೆ ಮುಗಿಸಿಕೊಂಡು ಬೆಂಗಳೂರಿನಿಂದ ರಾತ್ರಿ 11 ಗಂಟೆ ಸುಮಾರಿಗೆ ಹೊರಟೆವು. ಸಂಕ್ರಮಣ ಹಬ್ಬದ ನಿಮಿತ್ತ ಕುಟುಂಬ ಸಮೇತ ಮನೆ ದೇವರಾದ ವೀರಭದ್ರ ದೇವಸ್ಥಾನಕ್ಕೆ ಹೋಗಲು ನಿರ್ಧಾರ ಮಾಡಿದ್ವಿ. ರಾತ್ರಿಯೇ ತರಾತುರಿಯಲ್ಲಿ ಬೆಂಗಳೂರು ನಿವಾಸದಿಂದ ಹೊರಟೆವು. ಬೆಳಗ್ಗೆ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿತು. 15 ನಿಮಿಷದಲ್ಲಿ ಮನೆ ತಲುಪಲಿದ್ದೆವು. ಅಷ್ಟರಲ್ಲಿ ಅಪಘಾತ ಸಂಭವಿಸಿತು.

ಸಂಕ್ರಾಂತಿ ಪ್ರಯುಕ್ತ ಕುಟುಂಬ ಸಮೇತರಾಗಿ ಮನೆದೇವರ ದೇಗುಲಕ್ಕೆ ಭೇಟಿ ನೀಡಲು ನಿರ್ಧರಿಸಿದ್ವಿ. ನಮ್ಮ ಕಾರಿನ ಮುಂಭಾಗ ಒಂದು ಕಂಟೇನರ್​ ನಿಧಾನವಾಗಿ ಚಲಿಸುತ್ತಿತ್ತು. ದಿಢೀರ್​ ಎಂದು ಎರಡು ನಾಯಿಗಳು ಕಾರಿಗೆ ಅಡ್ಡ ಬಂದವು. ನಮ್ಮ ಚಾಲಕ ಅದನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಸಚಿವರಿಗೆ ಬೆನ್ನು ಮೂಳೆಗೆ ಏರ್ ಲೈನ್ಸ್ ಪ್ರ್ಯಾಕ್ಚರ್ ಆಗಿದೆ. ಮನೆಯಲ್ಲಿ ಗಾಬರಿ ಆಗಿದ್ದರಿಂದ ನಾನು ಚಿಕಿತ್ಸೆ ಪಡೆದು ಹೋಗಿದ್ದೆ. ಈಗ ಮತ್ತೆ ಸಹೋದರಿಯನ್ನ ಭೇಟಿ ಮಾಡಿರುವೆ. ಪೆಟ್ಟಾಗಿದ್ದರಿಂದ ನೋವು ಜಾಸ್ತಿಯಿದೆ. ಹೀಗಾಗಿ ಮಾತನಾಡಲು ಸಾಧ್ಯ ಆಗುತ್ತಿಲ್ಲ.

ದುರ್ಘಟನೆ ನಡೆಯುತ್ತದೆ ಎಂದು ಭವಿಷ್ಯ ಹೇಳಿದ್ದರು; ಅಪಘಾತದ ಕುರಿತು ಅಸಲಿ ವಿಚಾರ ಬಿಚ್ಚಿಟ್ಟ ಸಚಿವೆ Laxmi Hebbalkar ಸಹೋದರ

ನಾವು ನಮ್ಮ ಬೆಂಗಾವಲು ಪಡೆಗೆ ಯಾವುದೇ ಮಾಹಿತಿ ನೀಡದೆ ತರಾತುರಿಯಲ್ಲಿ ಬೆಂಗಳೂರಿನಿಂದ ಹೊರಟೆವು. ಇಂತಹ ಘಟನೆಗಳು ಆಗುತ್ತವೆ ಎಂದು ಹಿರಿಯರು ಹೇಳಿದ್ದರು. ನಮಗೆ ಬೇಕಾದವರು ಸಂಕ್ರಮಣದ ಸಂದರ್ಭದಲ್ಲಿ ಮನೆಯಲ್ಲಿ ದುರ್ಘಟನೆ ನಡೆಯುತ್ತದೆ ಎಂದು ಭವಿಷ್ಯ ಹೇಳಿದ್ದರು. ಆದರೂ ಕೂಡಾ ನಮ್ಮಿಂದಲೇ ಅಚಾತುರ್ಯ ಜರುಗಿದೆ. ಸಿಎಂ ಸಿದ್ದರಾಮಯ್ಯ, ಸ್ಪೀಕರ್, ಗೃಹ ಸಚಿವರು, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸೇರಿ ಪಕ್ಷಾತೀತವಾಗಿ ಎಲ್ಲರೂ ಆರೋಗ್ಯ ವಿಚಾರಿಸಿದ್ದಾರೆ. ನಮ್ಮ ಆರೋಗ್ಯ ವಿಚಾರಿಸಿದವರಿಗೆ ಧನ್ಯವಾದಗಳು. ಸಚಿವೆ ಹೆಬ್ಬಾಳ್ಕರ್ ಅವರನ್ನ ಬೆಂಗಳೂರಿಗೆ ಶಿಫ್ಟ್ ಮಾಡುವ ಅವಶ್ಯಕತೆ ಇಲ್ಲ. ಮೂರು ವಾರಗಳ ಕಾಲ ರೆಸ್ಟ್ ಮಾಡಲು ಹೇಳಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ (Laxmi Hebbalkar) ಸಹೋದರ, ವಿಧಾನಪರಿಷತ್​ ಸದಸ್ಯ ಚನ್ನರಾಜ್​ ಹಟ್ಟಿಹೊಳಿ ಮಾಹಿತಿ ನೀಡಿದ್ದಾರೆ.

ಚಾಲಕನ ವಿರುದ್ಧ ದಾಖಲಾಯ್ತು ಪ್ರಕರಣ 

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಚಾಲಕನ ವಿರುದ್ಧ ಕಿತ್ತೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಸಚಿವರ ಗನ್​ಮ್ಯಾನ್​ .ಶಿವಪ್ರಸಾದ್ ನೀಡಿದ ದೂರಿನ ಮೇರೆಗೆ ಬಿಎನ್​ಎಸ್​  281, 125ಎ, 125ಬಿ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಅಪಘಾತದ ಸ್ಥಳಕ್ಕೆ ಕಿತ್ತೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕಾರು ಚಾಲಕನ ಹೇಳಿಕೆ ದಾಖಲಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ.

ಬಿಜೆಪಿಯವರು ಮತದಾರರಿಗೆ ಹಣ, ಚಿನ್ನದ ಸರ ಹಂಚುತ್ತಿದ್ದಾರೆ; ಆದರೆ ಜನ… Arvind Kejriwal ಗಂಭೀರ ಆರೋಪ

Auto ಬಾಡಿಗೆ ಕೇಳಿದ್ದಕ್ಕೆ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ ಯುವತಿ; ಹಲ್ಲೆಯ ವಿಡಿಯೋ ವೈರಲ್​

Share This Article

ಕೆಟ್ಟ ಕೊಲೆಸ್ಟ್ರಾಲ್​ ಅನ್ನು ನ್ಯಾಚುರಲ್​ ಆಗಿ ಕಡಿಮೆ ಮಾಡಬೇಕಾ? ಕೇವಲ ಈ ಬದಲಾವಣೆ ಮಾಡಿ ಸಾಕು! Bad cholesterol

Bad cholesterol : ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಗ್ಯವಾಗಿರಬೇಕೆಂದರೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು.…

ಈ 3 ರಾಶಿಯಲ್ಲಿ ಜನಿಸಿದವರನ್ನು ಶಾಂತಿಯ ಪ್ರತಿರೂಪ ಎಂದು ಹೇಳಲಾಗುತ್ತೆ! ನೀವು ಯಾವ ರಾಶಿಯವರು? Zodiac Signs

Zodiac Signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ…

Summer Tips: ಬೇಸಿಗೆಯಲ್ಲಿ ಕೆಟ್ಟ ಬೆವರು ವಾಸನೆಯಿಂದ ತೊಂದರೆ ಅನುಭವಿಸುತ್ತಿದ್ದೀರಾ? ಈ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ

Summer Tips: ಬೇಸಿಗೆಯಲ್ಲಿ ಬೆವರು ವಾಸನೆಯನ್ನು ತಪ್ಪಿಸಲು, ನೀವು ಪ್ರತಿದಿನ ಸ್ನಾನ ಮಾಡುವುದು ಮತ್ತು ನಿಯಮಿತವಾಗಿ…