More

  ಮಾಡಾಳ್ ಬಂಧನದ ಹಿಂದಿತ್ತು 20ಕ್ಕೂ ಅಧಿಕ ಲೋಕಾಯುಕ್ತ ಪೊಲೀಸರ ಸತತ 3 ಗಂಟೆಗಳ ಕಸರತ್ತು: ಇಲ್ಲಿದೆ ವಿವರ..​

  ದಾವಣಗೆರೆ: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಬಂಧನ ಇಂದು ಆಗಿದ್ದು, ಈ ಕಾರ್ಯಾಚರಣೆ ಹಿಂದೆ 20ಕ್ಕೂ ಹೆಚ್ಚು ಲೋಕಾಯುಕ್ತ ಪೊಲೀಸರ ಸತತ ಮೂರು ಗಂಟೆಗಳ ಶ್ರಮವಿದೆ.

  ನಿರೀಕ್ಷಣಾ ಜಾಮೀನಿನ ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಪರಾರಿ ಆಗಲಿರುವ ಸುಳಿವು ಸಿಕ್ಕಿದ್ದರಿಂದ ಲೋಕಾಯುಕ್ತ ಪೊಲೀಸರ ಒಂದು ತಂಡ ಇಂದು ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮತ್ತೊಂದೆಡೆ ಇನ್ನೊಂದು ತಂಡದ 20ಕ್ಕೂ ಹೆಚ್ಚು ಲೋಕಾಯುಕ್ತ ಪೊಲೀಸರು ಐದು ವಾಹನಗಳಲ್ಲಿ ತುಮಕೂರಿನ ಕ್ಯಾತಸಂದ್ರ ಟೋಲ್ ಬಳಿ ಬಂದು ನಿಗಾ ಇರಿಸಿದ್ದರು.

  ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

  ಸತತ ಮೂರು ಗಂಟೆಗಳ ಕಾಲ ಇಲ್ಲಿ ವಾಹನಗಳ ತಪಾಸಣೆ ನಡೆಸಿದ ಪೊಲೀಸರು ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ಪ್ರತಿವಾಹನಗಳ ಪರಿಶೀಲನೆ ನಡೆಸಿದ್ದರು. ಅವರ ಈ ಶ್ರಮ ಕೊನೆಗೂ ಫಲ ಕೊಟ್ಟಿದ್ದು, ಬಿಳಿ ಬಣ್ಣದ ಇನೋವಾ ಕಾರಿನಲ್ಲಿ ಸಾಗುತ್ತಿದ್ದ ಮಾಡಾಳ್ ಸಿಕ್ಕಿಬಿದ್ದಿದ್ದರು.

  ಇದನ್ನೂ ಓದಿ: ಅಂದು ‘ಎಲ್ಲೂ ಹೋಗಿಲ್ಲ, ಮನೆಯಲ್ಲೇ ಇದ್ದೆ’ ಎಂದಿದ್ದ ಮಾಡಾಳ್ ಇಂದು ಮತ್ತೆ ನಾಪತ್ತೆ!

  ಇಲ್ಲೂ ಪ್ರಭಾವ ಬೀರುವ ಪ್ರಯತ್ನ..

  ಕೆಎ 17 ಝಡ್ 7929 ಕಾರಿನಲ್ಲಿ ಮಾಡಾಳ್ ಸೇರಿ ನಾಲ್ವರಿದ್ದರು. ಲೋಕಾಯುಕ್ತ ಪೊಲೀಸರು ಮಾಡಾಳ್ ಕಾರು ಅಡ್ಡಗಟ್ಟುತ್ತಿದ್ದಂತೆ, ಲೋಕಾಯುಕ್ತ ಅಧಿಕಾರಿಗೆ ನಾನು ಈಗಾಗಲೇ ಮಾತಾನಾಡಿದ್ದೇನೆ ಎಂದಿದ್ದಾರೆ. ಆದರೆ ಅದಕ್ಕೆ ಸೊಪ್ಪು ಹಾಕದ ಅಧಿಕಾರಿ, ನಮಗೆ ಮೇಲಿನಿಂದ ಆರ್ಡರ್ ಆಗಿದೆ, ಕೂಡಲೇ ನಮ್ಮ ಜೊತೆ ಬನ್ನಿ ಎಂದು ಮಾಡಾಳ್ ಕಾರಿನ ಮುಂಬದಿ ಸೀಟ್​​ನಲ್ಲಿ ಕುಳಿತು ಆ ಕಾರನ್ನು ಬೆಂಗಳೂರಿನತ್ತ ಕರೆದೊಯ್ದಿದ್ದರು. ಈ ಬಂಧನಕ್ಕಾಗಿ ಸಂಜೆ 4 ಗಂಟೆಯಿಂದಲೇ ಟೋಲ್ ಬಳಿ ಕಾದು ಕುಳಿತಿದ್ದ ಅಧಿಕಾರಿಗಳು, 7 ಗಂಟೆಗೆ ಮಾಡಾಳ್​ನನ್ನು ಬಂಧಿಸಿದ್ದಾರೆ.

  ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

  ಬಾಯ್ಬಿಟ್ಟು ಕೆಟ್ಟಳು ಕಿಡ್ನ್ಯಾಪ್ ಮಾಡಿದ್ದ ಮಹಿಳೆ; ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿತು ‘ಹಾಲು-ಉಪ್ಪಿಟ್ಟು’!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts