More

  ಅಂದು ‘ಎಲ್ಲೂ ಹೋಗಿಲ್ಲ, ಮನೆಯಲ್ಲೇ ಇದ್ದೆ’ ಎಂದಿದ್ದ ಮಾಡಾಳ್ ಇಂದು ಮತ್ತೆ ನಾಪತ್ತೆ!

  ದಾವಣಗೆರೆ: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಭಾರಿ ಮೊತ್ತದ ಹಣ ಸಿಕ್ಕು ತಮ್ಮ ವಿರುದ್ಧ ಆರೋಪ ಬರುತ್ತಿದ್ದಂತೆ ಬಂಧನದ ಭಯದಿಂದ ಕೆಲವು ದಿನಗಳ ಕಾಲ ಕಾಣೆಯಾಗಿದ್ದರು. ಆದರೆ ಬಳಿಕ ನಿರೀಕ್ಷಣಾ ಜಾಮೀನು ಸಿಗುತ್ತಿದ್ದಂತೆ ಪ್ರತ್ಯಕ್ಷರಾದ ಅವರು ‘ನಾನು ಎಲ್ಲೂ ಹೋಗಿಲ್ಲ, ಮನೆಯಲ್ಲೇ ಇದ್ದೆ’ ಎಂದಿದ್ದರು.

  ಇದನ್ನೂ ಓದಿ: ಚುನಾವಣಾ ಆಯೋಗಕ್ಕೆ ವಿಶೇಷ ಮನವಿ: ಜಾರಿಯಾಗುತ್ತಾ ಹೊಸ ಸೂಚನೆ?

  ಅದೇ ಮಾಡಾಳ್ ವಿರೂಪಾಕ್ಷಪ್ಪ ಅವರು ಇಂದು ಬಂಧನದ ಭಯದಿಂದ ಅಜ್ಞಾತವಾಸಿಯಾಗಿದ್ದಾರೆ. ಇದೀಗ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು, ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಮಾಡಾಳ್ ಸದ್ಯಕ್ಕೆ ಯಾರಿಗೂ ಸಿಗದಂತಾಗಿದ್ದಾರೆ. ಜಾಮೀನು ಅರ್ಜಿ ವಜಾ ವಿಷಯ ತಿಳಿಯುತ್ತಿದಂತೆ ಚನ್ನಗಿರಿ ಪ್ರವಾಸಿ ಮಂದಿರದಿಂದ ವಿರೂಪಾಕ್ಷಪ್ಪ ದಿಢೀರ್ ತೆರಳಿದ್ದಾರೆ. ಐಬಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತಿದ್ದ ಅವರು, ಅಹವಾಲು ಸ್ವೀಕರಿಸುವುದನ್ನು ಅರ್ಧಕ್ಕೇ ಮೊಟಕುಗೊಳಿಸಿ ತೆರಳಿದ್ದಾರೆ.

  ಇದನ್ನೂ ಓದಿ: ನಾನು ತಲೆಮರೆಸಿಕೊಂಡಿಲ್ಲ, ಮನೆಯಲ್ಲೇ ಇದ್ದೆ; ಮತ್ತೆ ಬಿಜೆಪಿ ಸದಸ್ಯತ್ವ ಪಡೆಯುವೆ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ

  ಲೋಕಾಯುಕ್ತ ದಾಳಿ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದಿದ್ದ ಮಾಡಾಳ್, ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆ ತೆರಳಿರುವ ಮಾಡಾಳ್, ಎಲ್ಲಿಗೆ ಹೋಗಿದ್ದಾರೆ, ಈಗ ಎಲ್ಲಿದ್ದಾರೆ ಎಂಬುದರ ಸುಳಿವಿಲ್ಲ.

  ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

  ಬಾಯ್ಬಿಟ್ಟು ಕೆಟ್ಟಳು ಕಿಡ್ನ್ಯಾಪ್ ಮಾಡಿದ್ದ ಮಹಿಳೆ; ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿತು ‘ಹಾಲು-ಉಪ್ಪಿಟ್ಟು’!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts