More

    ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

    ಬೆಂಗಳೂರು: ಪ್ಯಾನ್​ ಕಾರ್ಡ್​ಗೆ ಆಧಾರ್ ಲಿಂಕ್ ಮಾಡಲು ಮಾ. 31 ಕಡೇ ದಿನವಾಗಿದ್ದು, ಅಷ್ಟರೊಳಗೆ ಲಿಂಕ್ ಮಾಡಿಕೊಂಡಿರದಿದ್ದರೆ, ಅಂಥವರ ಪ್ಯಾನ್​ ಕಾರ್ಡ್​ ಏ. 1ರಿಂದ ನಿಷ್ಕ್ರಿಯವಾಗಲಿದೆ.

    ಎಲ್ಲ ಸರಿ.. ಕೆಲವರಿಗೆ ಈಗ ತಮ್ಮ ಪ್ಯಾನ್​-ಆಧಾರ್ ಕಾರ್ಡ್ ಲಿಂಕ್ ಮಾಡಿಸಿದ್ದೇವೋ ಇಲ್ಲವೋ ಎಂಬ ಅನುಮಾನ ಕಾಡಬಹುದು. ಲಿಂಕ್ ಮಾಡಿಸಿದ್ದರೂ ಏನಾದರೂ ತಾಂತ್ರಿಕ ಕಾರಣದಿಂದಾಗಿ ಡಿ-ಲಿಂಕ್ ಆಗಿದ್ದರೆ ಎಂಬ ಚಿಂತೆಯೂ ಕಾಡಬಹುದು. ಅಂಥವರು ಪ್ಯಾನ್​-ಆಧಾರ್ ಲಿಂಕ್ ಸ್ಟೇಟಸ್​ ಆನ್​ಲೈನ್​ನಲ್ಲೇ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.

    ಪ್ಯಾನ್​-ಆಧಾರ್​ ಲಿಂಕ್ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್​ ಮಾಡಿ.

    https://eportal.incometax.gov.in/iec/foservices/#/pre-login/link-aadhaar-status

    ಈ ಮೇಲಿನ ಲಿಂಕ್ ಕ್ಲಿಕ್ ಮಾಡಿದ ಬಳಿಕ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಪ್ಯಾನ್ ನಂಬರ್​ ಮತ್ತು ಆಧಾರ್​ ನಂಬರ್​ ಹಾಕಿ ಬಲಭಾಗದಲ್ಲಿ ಕೆಳಗೆ ಇರುವ “ವ್ಯೂ ಲಿಂಕ್ ಆಧಾರ್ ಸ್ಟೇಟಸ್” ಎಂಬುದನ್ನು ಕ್ಲಿಕ್ ಮಾಡಿದರೆ ನಿಮ್ಮ ಪ್ಯಾನ್​-ಆಧಾರ್ ಲಿಂಕ್ ಆಗಿದೆಯೇ ಇಲ್ಲವೇ ಎಂಬುದು ಖಚಿತಪಡುತ್ತದೆ.

    ಪ್ಯಾನ್-ಆಧಾರ್ ಲಿಂಕ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

    https://eportal.incometax.gov.in/iec/foservices/#/pre-login/bl-link-aadhaar

    ಈ ಮೇಲಿನ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ತೆರೆದುಕೊಳ್ಳುವ ಪುಟದಲ್ಲಿ ನಿಮ್ಮ ಪ್ಯಾನ್​ ಮತ್ತು ಆಧಾರ್ ನಂಬರ್​ಗಳನ್ನು ನಮೂದಿಸಿ. ಮುಂದೆ ಅದು ಸೂಚನೆ ನೀಡಿದ ಪ್ರಕಾರ ಮುಂದುವರಿಯಿರಿ. ಆದರೆ ಹೀಗೆ ಲಿಂಕ್ ಮಾಡುವಾಗ 1 ಸಾವಿರ ರೂ. ಶುಲ್ಕ ತೆರಬೇಕಾಗುತ್ತದೆ.

    ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ಸಿಕ್ಕಿಬಿಡ್ತು ಕಟ್ಟುಗಟ್ಟಲೆ ಹಣ; ದಾಖಲೆರಹಿತ 1.9 ಕೋಟಿ ರೂ. ವಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts