More

    ಕೋಲೆಗಾರನಿಗೆ ಜಾಮೀನು ನೀಡಬಾರದು

    ಕಂಪ್ಲಿ: ನೇಹಾ ಹತ್ಯೆ ಖಂಡಿಸಿ, ವೀರಶೈವ ಸಂಘ ಸೋಮವಾರ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಪಾದಯಾತ್ರೆ ಮಾಡಿ, ತಹಸೀಲ್ದಾರ್ ಶಿವರಾಜ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

    ಇದನ್ನೂ ಓದಿ: ತಮಿಳುನಾಡು ಯೂಟ್ಯೂಬರ್ ವಿರುದ್ಧ ಕೇಸ್ ಹಾಕಿದ ಡಿಎಂಕೆಗೆ ಸುಪ್ರೀಂ ಕೋರ್ಟ್ ಜಾಮೀನು: ಡಿಎಂಕೆಗೆ ತರಾಟೆ

    ವೀರಶೈವ ಸಂಘ ತಾಲೂಕು ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಮಾತನಾಡಿ, ನೇಹಾ ಹತ್ಯೆ ಮಾಡಿದ ದುಷ್ಕರ್ಮಿ ಫಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕು. ಈತನ ಪರವಾಗಿ ನ್ಯಾಯಾಲಯದಲ್ಲಿ ಯಾವ ವಕೀಲರು ನ್ಯಾಯಮಂಡನೆ ಮಾಡಬಾರದು.

    ಆರೋಪಿಗೆ ಜಾಮೀನು ಸಿಗದಂತೆ ಐಪಿಸಿ ಸೆಕ್ಷನ್‌ಗಳನ್ನು ದಾಖಲಿಸಬೇಕು. ಈ ವಿಚಾರದಲ್ಲಿ ಸರ್ಕಾರ ಮೃಧು ಧೋರಣೆ ಅನುಸರಿಸಬಾರದು. ತುರ್ತಾಗಿ ತೀರ್ಪು ನೀಡಬೇಕು. ಯಾವುದೇ ಕಾರಣಕ್ಕೂ ಹಂತಕನಿಗೆ ಜಾಮೀನು ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯ ಸೇವಾ ಟ್ರಸ್ಟ್, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯಿಂದಲೂ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ವೀರಶೈವ ಸಮಾಜದ ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ,

    ಅರವಿ ಬಸವನಗೌಡ, ಎಸ್.ಎಂ.ನಾಗರಾಜ, ಮುಕ್ಕುಂದಿ ಶಿವಗಂಗಮ್ಮ, ಶಾಂತಲಾ ವಿ.ವಿದ್ಯಾಧರ, ಗಡಾದ್ ಚೈತ್ರಾ ಸಿದ್ದಾಪುರ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ವಾಲಿ ಕೊಟ್ರಪ್ಪ, ಕಲ್ಗುಡಿ ವಿಶ್ವನಾಥ, ಎಚ್.ನಾಗರಾಜ,

    ಎಸ್.ಡಿ.ಬಸವರಾಜ, ಜಿ.ಚಂದ್ರಶೇಖರಗೌಡ, ಕೆ.ಎಂ.ಸೌಮ್ಯಾ, ಅಲಬನೂರು ಬಸವರಾಜ, ಬಿ.ವಿ.ಗೌಡ, ಟಿ.ಎಚ್.ಎಂ.ರಾಜಕುಮಾರ, ಎನ್.ಎಂ.ಪತ್ರೆಯ್ಯಸ್ವಾಮಿ, ಗಡಾದ ಪ್ರಸಾದ್ ಇತರರಿದ್ದರು. ಪಿಐ ಪ್ರಕಾಶ ಮಾಳಿ ಬಿಗಿಬಂದೋಬಸ್ತ್ ಒದಗಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts