ಬ್ರೆಜಿಲ್​ನ ನೂತನ ಅಧ್ಯಕ್ಷರಿಗೆ ಅಭಿನಂದಿಸಿದ ಪ್ರಧಾನಿ ಮೋದಿ; ಭಾರಿ ಪೈಪೋಟಿಯ ನಡುವೆ ಗೆಲುವಿನ ನಗೆ ಬೀರಿದ ಲುಲಾ!

lula da silva bazil pres
Published on

ನವದೆಹಲಿ: ಬ್ರೆಜಿಲ್​ ಮತ್ತು ಭಾರತದ ನಂಟು ತುಂಬಾ ಹತ್ತಿರದ್ದು. ಇಂದು (ಅ.31) ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಲುಲಾ ಡಾ ಸಿಲ್ವಾಗೆ ಪ್ರಧಾನಿ ಮೋದಿ ಅಭಿನಂಧಿಸಿದ್ದಾರೆ.

ಟ್ವಿಟರ್​ನಲ್ಲಿ ಅಭಿನಂದಿಸಿದ ಮೋದಿ 'ಬ್ರೆಜಿಲ್‌ನಲ್ಲಿ ಅಧ್ಯಕ್ಷೀಯ ಚುನಾವಣೆಯನ್ನು ಗೆದ್ದಿರುವ ಲುಲಾ ಅವರಿಗೆ ಅಭಿನಂದನೆಗಳು. ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಮತ್ತು ಕಾರ್ಯಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಿ ಜಾಗತಿಕ ಸಮಸ್ಯೆಗಳ ಬಗ್ಗೆ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ' ಎಂದು ಹೇಳಿದ್ದಾರೆ.

ಲುಲಾ ಎಂದೇ ಪ್ರಸಿದ್ಧರಾಗಿರುವ ಸಿಲ್ವಾ, ಜೈರ್​ ಬೊಲ್ಸೊನಾರೊರನ್ನು ಸೋಲಿಸಿ ಬ್ರೆಜಿಲ್​ನ ಅಧ್ಯಕ್ಷರಾದರು. ತೀವ್ರತರ ಪೈಪೋಟಿಯ ನಡುವೆ ಲುಲಾ ಶೇಕಡ 50.83 ಮತಗಳನ್ನು ಪಡೆದು ಗೆದ್ದಿದ್ದಾರೆ. ಪ್ರತಿಸ್ಪರ್ಧಿ ಜೈರ್​ ಶೇಕಡಾ 49.17 ಮತಗಳನ್ನು ಪಡೆದಿದ್ದಾರೆ. ಒಟ್ಟು 98 ಶೇಕಡಾ ಜನರು ಮತದಾನ ಮಾಡಿದ್ದಾರೆ.

ಬ್ರೆಜಿಲ್​ ಮತ್ತು ಭಾರತದ ದೃಷ್ಟಿಕೋನ ಅನೇಕ ವಿಷಯದಲ್ಲಿ ಒಂದೇ ಆಗಿರುತ್ತದೆ. ಬ್ರೆಜಿಲ್​ ನಮ್ಮಂತೆಯೇ ಬ್ರಿಕ್ಸ್​ ಒಕ್ಕೂಟದ ಸದಸ್ಯ. ವ್ಯಾಪಾರದಲ್ಲಿ ಭಾರತ ಬ್ರೆಜಿಲ್​ನ 5ನೇ ಅತಿ ದೊಡ್ಡ ಪಾಲುದಾರ ದೇಶವಾಗಿದೆ. ಭಾರತ ಬ್ರೆಜಿಲ್​ನಿಂದ ಮುತ್ತು, ಬೆಲೆಬಾಳುವ ಕಲ್ಲುಗಳಿಂದ ಹಿಡಿದು ಅಣು ರಿಯಾಕ್ಟರ್​ಗಳನ್ನೂ ಆಮದು ಮಾಡುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net