More

    ಜ್ವರ, ಕೆಮ್ಮು ಮಾತ್ರವಲ್ಲ, ಇವು ಕೂಡ ಕರೊನಾ ಲಕ್ಷಣಗಳು…! ಪರೀಕ್ಷಿಸಿಕೊಳ್ಳಿ…

    ನವದೆಹಲಿ: ಕರೊನಾ ವೈರಸ್​ ಸೋಂಕು ಆರಂಭದಲ್ಲಿ ಕಾಣಿಸಿಕೊಂಡ ದೇಶಗಳಲ್ಲಿ ಹೊಸ ಕೇಸ್​ಗಳ ಪ್ರಮಾಣ ಇಳಿಕೆಯಾಗುತ್ತಿದೆ. ಆದರೆ, ಭಾರತದಲ್ಲಿ ಇಳಿಮುಖವಾಗುವ ಲಕ್ಷಣಗಳನ್ನೇ ತೋರುತ್ತಿಲ್ಲ. ಕೋವಿಡ್​ ಪ್ರಕರಣಗಳು ಹೆಚ್ಚುತ್ತಿರುವುದು ಇರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ.

    ಕರೊನಾ ಸೋಂಕಿಗೆ ಒಳಗಾದರೂ ವ್ಯಕ್ತಿಯಲ್ಲಿ ರೋಗದ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿರುವುದು ಇದರ ಪತ್ತೆಗೆ ಸವಾಲಾಗಿ ಪರಿಣಮಿಸಿದೆ. ದೇಶದ ಶೇ.70 ರೋಗಿಗಳು ಇಂಥವರೇ ಆಗಿದ್ದಾರೆ. ಹೀಗಾಗಿ ಕೊನೆಯ ಹಂತದಲ್ಲಿ ರೋಗ ಉಲ್ಬಣಿಸಿದಾಗ ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಆ ವೇಳೆಗಾಗಲೇ ಹಲವರಿಗೆ ಸೋಂಕು ವ್ಯಾಪಿಸಿರುತ್ತದೆ. ಇದು ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

    ಇದನ್ನೂ ಓದಿ; ಕರೊನಾದಿಂದ ಕಾಪಾಡುತ್ತಿರುವ ಔಷಧಗಳಿವು; ಬೆಲೆ ಕೇಳಿದರೆ ತಲೆ ತಿರುಗುತ್ತೆ…! 

    ಕರೊನಾ ಪತ್ತೆ ಹಚ್ಚಲು ಅಥವಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲು ಜ್ವರ, ಕೆಮ್ಮು, ಗಂಟಲಲ್ಲಿ ಕೆರೆತ, ಉಸಿರಾಟದಲ್ಲಿ ತೊಂದರೆ, ಮೈಕೈ ನೋವು, ಮೊದಲಾದ ಲಕ್ಷಣಗಳನ್ನು ಪಟ್ಟಿ ಮಾಡಲಾಗಿತ್ತು.

    ಆದರೆ, ಯಾವುದೇ ಲಕ್ಷಣವಿಲ್ಲದ ವ್ಯಕ್ತಿಗಳನ್ನು ಗುರುತಿಸಲು ಕೇಂದ್ರ ಆರೋಗ್ಯ ಇಲಾಖೆ ಇನ್ನೆರಡು ಲಕ್ಷಣಗಳನ್ನು ಈ ಪಟ್ಟಿಗೆ ಸೇರಿಸಿದೆ. ಅದೆಂದರೆ ರುಚಿ ಹಾಗೂ ವಾಸನೆ ಗ್ರಹಿಕೆ ಕಳೆದುಕೊಂಡಿರುವುದು. ಭಾರತ ಮಾತ್ರವಲ್ಲ, ಜಗತ್ತಿನ ಹಲವು ದೇಶಗಳಲ್ಲಿ ಈ ಲಕ್ಷಣಗಳಿಂದಲೂ ಕರೊನಾ ಸೋಂಕನ್ನು ಪತ್ತೆ ಹಚ್ಚಬಹುದು ಎಂದು ತಿಳಿಸಲಾಗಿದೆ.

    ಇದನ್ನೂ ಓದಿ; ಕರೊನಾ ಲಸಿಕೆ ಭಾರತದಲ್ಲಿ ಸೆಪ್ಟೆಂಬರ್​ಗೆ ಸಿಗೋದು ಪಕ್ಕಾ; ಜಿದ್ದಿಗೆ ಬಿದ್ದು ಉತ್ಪಾದನೆಯಲ್ಲಿ ತೊಡಗಿವೆ ಕಂಪನಿಗಳು

    ಹೀಗಾಗಿ ಭಾರತ ಕೂಡ ಕೋವಿಡ್​ ಪತ್ತೆ ಹಚ್ಚುವ ನಿಟ್ಟಿನಲ್ಲಿ ಹೊರಡಿಸಲಾಗಿರುವ ಮಾರ್ಗಸೂಚಿಯನ್ನು ಈ ಅಂಶಗಳನ್ನು ಸೇರಿಸಿ ಪರಿಷ್ಕೃತಗೊಳಿಸಿದೆ.
    ಇದಲ್ಲದೇ. ರೆಮ್​ಡೆಸಿವಿರ್​ ಹಾಗೂ ಟೊಸಿಲಿಜುಮಾಬ್​ ಲಸಿಕೆ ಬಳಕೆ ಹಾಗೂ ಪ್ಲಾಸ್ಮಾ ಚಿಕಿತ್ಸೆ ಅಳವಡಿಕೆ ಬಗ್ಗೆಯೂ ಸ್ಪಷ್ಟನೆ ನೀಡಿದೆ. ಕೆಲ ಆಯ್ದ ಪ್ರಕರಣಗಳಲ್ಲಿ ಕೋವಿಡ್​ ರೋಗಿಗಳಿಗೆ ಇವನ್ನು ಬಳಸಬಹುದು ಎಂದು ಅಧಿಕೃತಗೊಳಿಸಿದೆ.

    ಅಲ್ಪಸಂಖ್ಯಾತ ಹಿಂದುಗಳ ಕೈಗೆ ಶಸ್ತ್ರಾಸ್ತ್ರ ನೀಡಿ; ನಿವೃತ್ತ ಪೊಲೀಸ್​ ಮಹಾ ನಿರ್ದೇಶಕ ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts