More

    ಕರೊನಾ ಲಸಿಕೆ ಭಾರತದಲ್ಲಿ ಸೆಪ್ಟೆಂಬರ್​ಗೆ ಸಿಗೋದು ಪಕ್ಕಾ; ಜಿದ್ದಿಗೆ ಬಿದ್ದು ಉತ್ಪಾದನೆಯಲ್ಲಿ ತೊಡಗಿವೆ ಕಂಪನಿಗಳು

    ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕರೊನಾ ವೈರಸ್​ ನಿರ್ಮೂಲನೆ ಮಾಡುವ ಲಸಿಕೆಯ 20 ಲಕ್ಷ ಡೋಸ್​ ತಯಾರಿಸಿ ದಾಸ್ತಾನು ಇಡಲಾಗಿದೆ ಎಂದು ಹೇಳಿದ್ದರು. ಅಂತೆಯೇ ಲಸಿಕೆ ಉತ್ಪಾದನೆ ಆರಂಭಿಸಿರುವ ಬಗ್ಗೆ ಹಲವು ಕಂಪನಿಗಳು ಈಗ ಸುಳಿವು ನೀಡಿವೆ.

    ಬ್ರಿಟನ್​ ಪ್ರಧಾನಿ ಬೊರಿಸ್​ ಜಾನ್​ಸನ್​ ಕೂಡ ಲಸಿಕೆ ಸಂಶೋಧನೆಯಲ್ಲಿ ತನ್ನ ದೇಶ ಎಲ್ಲಕ್ಕಿಂತ ಮುಂದಿದೆ ಎಂದು ಹೇಳಿದ್ದರು. ಅದರಂತೆ, ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ತಂಡವು ಬ್ರಿಟಿಷ್​ ಔಷಧ ಕಂಪನಿ ಅಸ್ಟ್ರಾಜೆನೆಸಾ ಜತೆ ಸೇರಿ ಬೃಹತ್​ ಪ್ರಮಾಣದಲ್ಲಿ ಕರೊನಾ ಲಸಿಕೆ ಉತ್ಪಾದನೆಗೆ ಮುಂದಾಗಿರುವುದಾಗಿ ಹೇಳಿದೆ.

    ಇದನ್ನೂ ಓದಿ; ಒಂದೇ ವರ್ಷದಲ್ಲಿ 1.25 ಕೋಟಿ ರೂ. ಗಳಿಸಿದ ವಿಜ್ಞಾನ ಶಿಕ್ಷಕಿಯ ವಂಚನಾ ಕಲೆ; ಬೆಳಕಿಗೆ ಬಂದೇ ಇಲ್ಲ ಅನಾಮಿಕಾ

    ವಿಶೇಷವೆಂದರೆ, ಭಾರತದಲ್ಲೂ ಈ ಕಂಪನಿಯ ಲಸಿಕೆ ಉತ್ಪಾದನೆಯಾಗುತ್ತಿದೆ. ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಜತೆ ಅಸ್ಟ್ರಾಜೆನೆಸಾ ಒಪ್ಪಂದ ಮಾಡಿಕೊಂಡಿದೆ. ಆರಂಭದಲ್ಲಿ 60 ಲಕ್ಷ ಡೋಸ್​ ಲಸಿಕೆ ತಯಾರಾಗಲಿದೆ.

    ಇದಲ್ಲದೇ  ಬ್ರಿಟನ್​, ನಾರ್ವೆ, ಸ್ವಿಜರ್ಲೆಂಡ್​ನಲ್ಲೂ ಲಸಿಕೆ ತಯಾರಿಕೆಗೆ ಕಂಪನಿ ಹಲವು ಉತ್ಪಾದಕರಿಗೆ ಪರವಾನಗಿ ನೀಡಿ ಮುಂದುವರಿಯಲು ಗ್ರೀನ್​ ಸಿಗ್ನಲ್​ ನೀಡಿದೆ. ಒಟ್ಟಾರೆ 10 ಕೋಟಿ ಡೋಸ್​ ಸೆಪ್ಟೆಂಬರ್​ ವೇಳೆಗೆ ಸಿದ್ಧವಾದರೆ, 2021ರ ಮಧ್ಯಾವಧಿಗೆ 200 ಕೋಟಿ ಡೋಸ್​ ಉತ್ಪಾದನೆ ಗುರಿ ಹೊಂದಲಾಗಿದೆ.

    ಇದನ್ನೂ ಓದಿ; ಕರೊನಾ ಪ್ರಕರಣಗಳಿಗೆ ಅಂತ್ಯ ಹಾಡಿದ ನ್ಯೂಜಿಲೆಂಡ್; ಸಾರ್ವಜನಿಕ ಸಭೆ, ಸಮಾರಂಭಗಳಿಗೂ ಇಲ್ಲ ನಿರ್ಬಂಧ

    ಕರೊನಾ ಲಸಿಕೆ ಉತ್ಪಾದನೆಯನ್ನು ಆರಂಭಿಸಲಾಗಿದೆ ಎಂದು ಅಸ್ಟ್ರಾಜೆನೆಸಾ ಮುಕ್ಯಾಧಿಕಾರಿ ಪಾಸ್ಕಲ್​ ಸೋರಿಯಟ್​ ಬಿಬಿಸಿ ರೆಡಿಯೋಗೆ ತಿಳಿಸಿದ್ದಾರೆ. ಲಸಿಕೆಯನ್ನು ಮಾನವ ಮೇಲೆ ಪ್ರಯೋಗಿಸಲಾಗಿದ್ದು, ಅದರ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಳಕೆಗೆ ಸಿದ್ಧವಿರುವಂತೆ ನೋಡೊಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

    ಈ ನಿರ್ಧಾರದಿಂದ ಆರ್ಥಿಕ ನಷ್ಟವೂ ಉಂಟಾಗಬಹುದು. ಅದು ಲಸಿಕೆ ಯಶಸ್ವಿಯಾಗದಿದ್ದರೆ ಮಾತ್ರ. ಇದನ್ನು ಮನಗಂಡೇ ಮುಂದುವರಿದಿದ್ದೇವೆ ಎಂದು ಅವರು ಹೇಳಿದ್ದಾರೆ. ಆಗಸ್ಟ್​ ವೇಳೆಗೆ ನಮ್ಮ ನಿರ್ಧಾರ ಸರಿಯೋ ತಪ್ಪೋ ಎಂಬುದು ಗೊತ್ತಾಗಲಿದೆ. ಈ ಕಾರಣಕ್ಕಾಗಿ ಯಾವುದೇ ಲಾಭದ ಉದ್ದೇಶವಿಲ್ಲದೇ ಇದನ್ನು ಮಾಡಲಾಗುತ್ತಿದೆ. ಹೀಗಾಗಿ ಕಾರ್ಪೋರೇಟ್​ ಸಂಸ್ಥೆಗಳು ಈ ಉದ್ದೇಶಕ್ಕೆ ನೆರವು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಕರೊನಾ ದೂರವಿಟ್ಟು ಬೆಂಗಳೂರಿನಿಂದ 2,000 ಕಿ.ಮೀ ಕಾಲ್ನಡಿಗೆಯಲ್ಲಿ ಮನೆ ತಲುಪಿದ, ಹೊಂಚು ಹಾಕಿದ್ದ ವಿಧಿಯನ್ನು ವಂಚಿಸಲಾಗಲಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts