More

    ಅಲ್ಪಸಂಖ್ಯಾತ ಹಿಂದುಗಳ ಕೈಗೆ ಶಸ್ತ್ರಾಸ್ತ್ರ ನೀಡಿ; ನಿವೃತ್ತ ಪೊಲೀಸ್​ ಮಹಾ ನಿರ್ದೇಶಕ ಒತ್ತಾಯ

    ನವದೆಹಲಿ: ಅಲ್ಪಸಂಖ್ಯಾತ ಹಿಂದುಗಳ ಕೈಗೆ ಶಸ್ತ್ರಾಸ್ತ್ರಗಳನ್ನು ನೀಡಬೇಕೆಂದು ಜಮ್ಮ ಮತ್ತು ಕಾಶ್ಮೀರದ ನಿವೃತ್ತ ಪೊಲೀಸ್​ ಮಹಾ ನಿರ್ದೇಶಕ ಶೇಷ್​ ಪೌಲ್​ ವೈದ ಹೇಳಿದ್ದಾರೆ.

    ದಕ್ಷಿಣ ಕಾಶ್ಮೀರದ ಅನಂತನಾಗ್​ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಕಾಶ್ಮೀರಿ ಪಂಡಿತ ಗ್ರಾಮ ಮುಖ್ಯಸ್ಥ (ಸರ್​ಪಂಚ್​) ಅಜಯ್​ ಪಂಡಿತ ಭಾರತೀ ಹತ್ಯೆ ನಡೆದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ; ಮಹಿಳೆಯರಿಗಿನ್ನು ಹದಿನೆಂಟಲ್ಲ, ಮದುವೆ ವಯಸ್ಸು 21…! 

    ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಹಾಗೂ ಕೆಲ ಮುಸ್ಲಿಂ ಪಂಗಡಗಳಿಗೆ ಭಯೋತ್ಪಾದಕ ಕೃತ್ಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ನೀಡಬೇಕೆಂದು ಅವರು ಸಲಹೆ ನೀಡಿದ್ದಾರೆ.

    ಕಾಶ್ಮೀರಿ ಹಿಂದುಗಳಲ್ಲಿ ಭದ್ರತಾ ಭಾವವನ್ನು ಮೂಡಿಸಲು ಕೆಲ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಅವರಿಗೆ ಶಸ್ತ್ರಾಸ್ತ್ರಗಳನ್ನು ನೀಡಿ, ಅವುಗಳ ಬಳಕೆಯ ಬಗ್ಗೆ ತರಬೇತಿ ನೀಡಬೇಕು. ಈ ರೀತಿ ಮಾಡುವುದರಿಂದ ಯಾವುದೇ ಅಪಾಯವಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ; ಕರೊನಾದಿಂದ ಕಾಪಾಡುತ್ತಿರುವ ಔಷಧಗಳಿವು; ಬೆಲೆ ಕೇಳಿದರೆ ತಲೆ ತಿರುಗುತ್ತೆ…!

    ಗ್ರಾಮ ರಕ್ಷಕ ಸಮಿತಿಗಳನ್ನು ರಚಿಸಬಹುದು ಎಂದು ಶೇಷ್​ ಪೌಲ್​ ಸಲಹೆ ನೀಡಿದ್ದಾರೆ. ಇದಕ್ಕಾಗಿ ವಿಸ್ತೃತ ಯೋಜನೆಗಳ ಅಗತ್ಯವಿದೆ. ಇಂಥ ಸಮಿತಿಗಳನ್ನು ರಚಿಸುವುದು ಕಷ್ಟವಾಗಬಹುದು. ಆದರೆ, ಅಸಾಧ್ಯವೇನಲ್ಲ ಎಂದು ಹೇಳಿದ್ದಾರೆ. ಸರಪಂಚ್​ ಹತ್ಯೆ ಬಳಿಕ, ಭಯೋತ್ಪಾದಕರಿಗೆ ಸುಲಭದ ತುತ್ತಾಗಿರುವ ತಮಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿ ಎಂದು ಕಾಶ್ಮೀರಿ ಪಂಡಿತರು ಕೂಡ ಒತ್ತಾಯಿಸಿದ್ದಾರೆ.

    ಜೂನ್​ 15ರಿಂದ ಮತ್ತೊಮ್ಮೆ ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್​ ; ಇಲ್ಲಿದೆ ಫ್ಯಾಕ್ಟ್​ಚೆಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts