LosAngeles Wildfires: ದಕ್ಷಿಣ ಕಾಲಿಫೋರ್ನಿಯ ಅರಣ್ಯದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಇದೀಗ ಇಡೀ ನಗರವನ್ನೇ ವ್ಯಾಪಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಲಾಸ್ ಏಜೆಂಲಿಸ್ ಆಹುತಿಯಾಗಿದೆ. ಅಗ್ನಿಶಾಮಕ ಪಡೆಗಳು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದರು, ಅಗ್ನಿಯ ಪ್ರಮಾಣವನ್ನು ತಡೆಗಟ್ಟುವುದು ದೊಡ್ಡ ಸವಾಲಾಗಿದೆ. ಕಾಡ್ಗಿಚ್ಚು ವೇಗವಾಗಿ ಹರಡುತ್ತಿದ್ದು, ಭಯಾನಕ ಕಾಡ್ಗಿಚ್ಚಿಗೆ ಐವರು ಸಜೀವ ದಹನವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಈ 3 ರಾಶಿಯವರು ಹುಟ್ಟಿನಿಂದಲೇ ಬಹಳ ಬುದ್ಧಿವಂತರಾಗಿರುತ್ತಾರಂತೆ! ನಿಮ್ಮದು ಇದೇ ರಾಶಿನಾ? Astrology
ಹಾಲಿವುಡ್ಗೂ ಬೆಂಕಿ ಬಿಸಿ ತಾಕೀದ ಹಿನ್ನೆಲೆಯಲ್ಲಿ ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಬೆಂಕಿಯ ಆರ್ಭಟಕ್ಕೆ 9,000ಕ್ಕೂ ಅಧಿಕ ಮನೆಗಳು, ಕಟ್ಟಡಗಳು ಸುಟ್ಟು ಕರಕಲಾಗಿವೆ. ಐವರು ಸಜೀವ ದಹನವಾಗಿರುವ ಮಾಹಿತಿ ಸಿಕ್ಕಿದ್ದೇ ಆದರೂ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಕನಿಷ್ಠ 1,30,000 ನಿವಾಸಿಗಳನ್ನು ಈಗಾಗಲೇ ಸ್ಥಳಾಂತರಿಸುವ ಆದೇಶದಡಿಯಲ್ಲಿ ಇರಿಸಲಾಗಿದೆ. ತಜ್ಞರು ಲಾಸ್ ಏಜೆಂಲಿಸ್ ಇನ್ನೂ ಅಗ್ನಿಯ ಅಪಾಯದಿಂದ ಹೊರಬಂದಿಲ್ಲ ಮತ್ತು ಕಾಡ್ಗಿಚ್ಚು ಅವಘಡ ಅಮೆರಿಕಾದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಕಾಡ್ಗಿಚ್ಚು ವಿಪತ್ತು ಎಂಬ ಪಟ್ಟಿಯನ್ನು ಸೇರಲಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).