ಈ 3 ರಾಶಿಯವರು ಹುಟ್ಟಿನಿಂದಲೇ ಬಹಳ ಬುದ್ಧಿವಂತರಾಗಿರುತ್ತಾರಂತೆ! ನಿಮ್ಮದು ಇದೇ ರಾಶಿನಾ? Astrology

Astrology
Published on

Astrology : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಜನಿಸಿದ ರಾಶಿಚಕ್ರ ಚಿಹ್ನೆ ಮತ್ತು ನಕ್ಷತ್ರವು ಅವರ ಭವಿಷ್ಯದ ಜೀವನ, ಆತನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಮನುಷ್ಯನ ಸ್ವಭಾವಗಳಲ್ಲಿನ ಬದಲಾವಣೆಗೆ ಗ್ರಹಗತಿಗಳೇ ಕಾರಣ ಎಂದು ನಂಬಲಾಗಿದೆ. ವ್ಯಕ್ತಿಯ ಒಳಿತು-ಕೆಡುಕಗಳ ಮೇಲೆಯೂ ಜಾತಕವೂ ಪ್ರಭಾವ ಬೀರುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲ ರಾಶಿಚಕ್ರ ಚಿಹ್ನೆಗಳ ಅಡಿಯಲ್ಲಿ ಜನಿಸಿದ ಜನರು ಹುಟ್ಟಿನಿಂದಲೇ ತುಂಬಾ ಬುದ್ಧಿವಂತರಾಗಿರುತ್ತಾರಂತೆ. ಅಂತಹ ಜನರು ಯಾವುದೇ ಸಮಸ್ಯೆಯನ್ನು ತಮ್ಮದೇಯಾದ ದೃಷ್ಟಿಕೋನದಿಂದ ನೋಡುತ್ತಾರೆ ಮತ್ತು ಪರಿಹರಿಸುತ್ತಾರೆ. ಅಲ್ಲದೆ, ಯಾವುದೇ ಪರಿಸ್ಥಿತಿಯಲ್ಲಿ ಬೇಗನೆ ಕಲಿಯುವ ಗುಣವನ್ನು ಹೊಂದಿರುತ್ತಾರೆ.

ಯಾವ ರಾಶಿಚಕ್ರ ಚಿಹ್ನೆಗಳಲ್ಲಿ ಹುಟ್ಟಿದವರು ಅತ್ಯಂತ ಬುದ್ಧಿವಂತರು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿಯೇ ಮುಕ್ತ ಮನಸ್ಸಿನವರು ಮತ್ತು ಮಹತ್ವಾಕಾಂಕ್ಷೆಯುಳ್ಳವರು. ತಮ್ಮ ಗುರಿಗಳನ್ನು ಸಾಧಿಸಲು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಇವರಿಗೆ ಪ್ರಪಂಚ ಮತ್ತು ಇತರರ ಮನೋವಿಜ್ಞಾನದ ಬಗ್ಗೆ ಹೆಚ್ಚಿನ ಜ್ಞಾನವಿರುತ್ತದೆ.

ಕನ್ಯಾರಾಶಿ

ಕನ್ಯಾರಾಶಿಯ ಚಿಹ್ನೆಯಡಿಯಲ್ಲಿ ಜನಿಸಿದ ಜನರು ನೋಡಲು ತುಂಬಾ ಸಾಮಾನ್ಯವಾಗಿ ಕಾಣಿಸಬಹುದು. ಆದರೆ, ಅವರು ಸ್ವಾಭಾವಿಕವಾಗಿ ಬಹಳ ಬುದ್ಧಿವಂತರು. ಅವರನ್ನು ಹತ್ತಿರದಿಂದ ನೋಡಿದವರಿಗೆ ಮಾತ್ರ ಈ ಗುಣ ತಿಳಿದಿರುತ್ತದೆ. ಈ ರಾಶಿಯವರು ಖಂಡಿತವಾಗಿಯೂ ಒಂದು ವಿಷಯದ ಬಗ್ಗೆ ವಿಭಿನ್ನ ರೀತಿಯಲ್ಲಿ ಯೋಚಿಸುವ ಮತ್ತು ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇತರರು ಪರಿಹರಿಸಲು ಹೆಣಗಾಡುವ ಸಮಸ್ಯೆಗಳನ್ನು ಇವರು ಸುಲಭವಾಗಿ ಪರಿಹರಿಸುತ್ತವೆ.

ಮಕರ ರಾಶಿ

ಮಕರ ರಾಶಿಯಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿ ಬಹಳ ದೃಢನಿಶ್ಚಯ ಮತ್ತು ಅಚಲ ನಂಬಿಕೆಯನ್ನು ಹೊಂದಿರುತ್ತಾರೆ. ಅವರ ಮೆದುಳು ಯಾವಾಗಲೂ ಸಕ್ರಿಯವಾಗಿರುತ್ತದೆ ಮತ್ತು ವಿಶಿಷ್ಟ ಆವಿಷ್ಕಾರಗಳನ್ನು ಸೃಷ್ಟಿಸುವವರು ಹೆಚ್ಚಾಗಿ ಈ ರಾಶಿಚಕ್ರ ಚಿಹ್ನೆಯವರಾಗಿರುತ್ತಾರೆ. ಈ ರಾಶಿಯವರು ತಮ್ಮ ವಿಶಿಷ್ಟ ಪ್ರತಿಭೆಯಿಂದಾಗಿ ಯಾವಾಗಲೂ ಇತರರಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಸೈಟ್ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net