ನೀವು ಸೇವಿಸಿದ ಮಾತ್ರೆ ಗಂಟಲಲ್ಲಿ ಸಿಲುಕಿಕೊಂಡರೆ ಏನು ಮಾಡಬೇಕು?ಇಲ್ಲಿದೆ ಮಾಹಿತಿ | health tips

untitled-design-2025-08-30t174645566-68b2ebc0ccb8b
Published on

health tips: ಹವಾಮಾನ ಬದಲಾವಣೆಯಿಂದಾಗಿ ಶೀತ, ಕೆಮ್ಮು, ಜ್ವರದಂತಹ ಅನೇಕ ಕಾಯಿಲೆಗಳಿಗೆ ಇಂದಿನ ಜನಸಮೂಹ ತುತ್ತಾಗುತ್ತಿದ್ದಾರೆ. ಈ ರೋಗಗಳಿಂದ ಮುಕ್ತಿ ಹೊಂದಬೇಕಾದರೆ, ವೈದ್ಯ ಬಳಿ ಹೋಗಬೇಕು, ಇಲ್ಲವೇ ಔಷಧಿಗಳನ್ನು ಸೇವಿಸಿ ಅಪಾಯವನ್ನು ದೂರ ತಳ್ಳಬೇಕು. ಈ ರೀತಿಯಾಗಿ ಔಷಧಿಗಳನ್ನು ಸೇವಿಸುವಾಗ ಅಪಾಯಗಳು ಸಂಭವಿಸಬಹುದು. ಹಾಗದ್ದರೆ ಆ ಅಪಾಯಗಳನ್ನು ತಡೆಯುವುದು ಹೇಗೆ ಎಂದು ನಿಮಗೆ ತಿಳಿದಿದಿಯೇ? ಹಾಗಿದ್ದರೆ ಇಲ್ಲಿ ಗಮನಿಸಿ....

ಮಾತ್ರೆ ತಿನ್ನುವಾಗ ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆಗಳೇನು?

*  ಮಾತ್ರೆ ಸೇವಿಸುವುದು ಅಷ್ಟು ಸುಲಭವಲ್ಲ. ಇದು ಚಿಕ್ಕ ಮಕ್ಕಳಿಗೆ ಮಾತ್ರವಲ್ಲದೆ ಕೆಲವು ವಯಸ್ಕರಿಗೂ ಒಂದು ಸವಾಲಾಗಿ ಪರಿಣಾಮ ಬೀರುತ್ತದೆ. ಮಾತ್ರೆ ಸೇವಿಸಲು ಪ್ರಯತ್ನಿಸುವ ಪ್ರತಿ 3 ಜನರಲ್ಲಿ ಒಬ್ಬರು ವಾಂತಿ ಅಥವಾ ಉಸಿರಾಟದ ತೊಂದರೆಗಳಂತಹ ಸಮಸ್ಯೆಗಳನ್ನು ಎದುರು ನೋಡುತ್ತಾರೆ.

* ಕೆಲವು ಸಂಶೋಧನೆಯ ಪ್ರಕಾರ ಸಾಮಾನ್ಯವಾಗಿ, 6 ವರ್ಷಕ್ಕಿಂತ ಕಡಿಮೆ ವಯಸ್ಸದ ಮಕ್ಕಳಿಗೆ ಮಾತ್ರೆಗಳನ್ನು ನೀಡುವುದು ಉತ್ತಮ ಮಾರ್ಗವಲ್ಲ. ಅವರಿಗೆ ಔಷಧಿಯನ್ನು ಪುಡಿ ಮಾಡಿ ನೀರಿನಲ್ಲಿ ಹಾಕಿ ಕೊಡಬೇಕು ಎಂದು ತಿಳಿಸುತ್ತದೆ.

*  ಮೊದಲು ಬಾಯಲ್ಲಿ ಸ್ವಲ್ಪ ನೀರನ್ನು ತುಂಬಿಕೊಂಡು ಮಾತ್ರೆ ಸೇವಿಸುವುದು ಉತ್ತಮ ಮಾರ್ಗ ಎಂದು ತಿಳಿಸಲ್ಪಡುತ್ತದೆ. ಇದು ಚಿಕ್ಕಮಕ್ಕಳಿಗೆ ಕಷ್ಟವಾಗುವುದರಿಂದ ಅವರಿಗೆ ಔಷಧಿಯನ್ನು ಪುಡಿ ಮಾಡಿ ನೀರಿನಲ್ಲಿ ಹಾಕಿ ಕೊಡಬೇಕು.

*  ಮಕ್ಕಳಿಗೆ ಮಾತ್ರೆಗಳನ್ನು ನೀಡುವಾಗ ಹೆಚ್ಚಿನ ಕಾಳಜಿಯನ್ನು ಪೋಷಕರ ವಹಿಸಬೇಕು. ಇಲ್ಲದಿದ್ದರೆ ಕೆಲವೊಮ್ಮೆ ಅಪಾಯಗಳು ಸಂಭವಿಸುತ್ತದೆ.

ಮಾತ್ರೆ ಗಂಟಲಿನಲ್ಲಿ ಸಿಲುಕಿಕೊಂಡರೆ ಹೀಗೆ ಮಾಡಿ

* ಮಕ್ಕಳು ಅಥವಾ ವಯಸ್ಕರ ಗಂಟಲಿನಲ್ಲಿ ಮಾತ್ರೆ ಸಿಲುಕಿಕೊಂಡರೆ ಮೊದಲು 'ಹೀಮ್ಲಿಕ್ ಕುಶಲತೆ' ಎಂಬ ಪ್ರಾಥಮಿಕ ಚಿಕಿತ್ಸೆಯನ್ನು ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.

* ರೋಗಿಯ ಹಿಂದೆ ನಿಂತು ಅವರ ಸೊಂಟದ ಸುತ್ತಲೂ ಎರಡೂ ಕೈಗಳನ್ನು ಬಿಗಿಯಾಗಿ ಕಟ್ಟಬೇಕು. ನಂತರ ಅವರ ಹೊಟ್ಟೆಯ ಪ್ರದೆಶದಿಂದ 5-6 ಬಾರಿ ಬಲವಾದ ಒತ್ತಡವನ್ನು ಹಾಕಬೇಕು. ಈ ವಿಧಾನ ಅನುಸರಿಸುವುದರಿಂದ ಗಂಟಲಿನಲ್ಲಿ ಸಿಲುಕಿಕೊಂಡಿರುವ ಮಾತ್ರೆ ಹೊರಬರುತ್ತದೆ. ತದನಂತರ ಅವರನ್ನು ವೈದ್ಯರ ಬಳಿ ಕರೆದೊಯ್ಯಬೇಕು.

* ಇನ್ನು ಮಗುವು ಒಂದು ವರ್ಷಕ್ಕಿಂತ ಕಡಿಮೆ ವಯಸ್ಸನ್ನು ಹೊಂದಿದ್ದರೆ, ಆ ಮಗುವನ್ನು ಮಡಿಲಲ್ಲಿ ಕೂರಿಸಿಕೊಂಡು ಬೆನ್ನು ತಟ್ಟಬೇಕು ಅದರಿಂದ ಗಂಟಲಲ್ಲಿ ಸಿಲುಕಿರುವ ಮಾತ್ರೆ ಹೊರಬರುತ್ತದೆ.

* ನೀವು ಸೇವಿಸಿದ ಮಾತ್ರೆ ಕೆಲವೊಮ್ಮೆ ಗಂಟಲಿನಲ್ಲಿ ಸಿಲುಕಿಕೊಂಡರೆ ಜೋರಾಗಿ ಕೆಮ್ಮುವುದನ್ನು ಮಾಡಿ, ಇದರಿಂದ ಗಂಟಲಿನಲ್ಲಿ ಸಿಲುಕಿಕೊಂಡಿರುವ ಮಾತ್ರೆ ಹೊರಬರಲು ಸಹಾಯವಾಗುತ್ತದೆ.

* ಗಂಟಲಿನಲ್ಲಿ ಮಾತ್ರೆ ಸಿಲುಕಿಕೊಂಡಾಗ ಅಧಿಕ ನೀರನ್ನು ಕುಡಿಯಿರಿ ಇದರಿಂದ ನೀರು ಕೆಳಗೆ ಹೋಗಲು ಸಹಾಯವಾಗುತ್ತದೆ. ಹಾಗೇ ಇದು ಮಾತ್ರೆಯನ್ನು ಒಳತಳ್ಳಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net