

Travel : ಚಳಿಗಾಲದ ಸಮಯದಲ್ಲಿ ಅನೇಕ ಸ್ಥಳಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುತ್ತವೆ. ಹಾಗೇ ಪ್ರವಾಸಿಗರು ಚಳಿಗಾಲದಲ್ಲಿ ದೇಶವನ್ನು ಸುತ್ತಲು ರೆಡಿಯಾಗಿ ಸ್ಥಳಗಳನ್ನು ಹುಡುಕಲು ಪ್ರಾರಂಭಿಸಿರುತ್ತಾರೆ. ಹಾಗೇಯೆ ನೀವು ಏನಾದರೂ ಈ ಬಾರಿಯ ಚಳಿಗಾಲದ ಟ್ರಿಪ್ ಹೋಗಲು ಬಯಸಿದ್ದರೇ ಈ ಸ್ಥಳಗಳಿಗೆ ಭೇಟಿ ನೀಡಿ.
ಭಾರತದ ಪ್ರಮುಖ ಗಿರಿದಾಮಗಳಲ್ಲೊಂದಾದ ಕೂರ್ಗ್ ಜನಪ್ರಿಯ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದೆ. ಇದು ಪ್ರವಾಸ ಮಾಡುವವರಿಗೆ ಉತ್ತಮ ಪ್ರದೇಶವಾಗಿದೆ. ಇನ್ನು ಇಲ್ಲಿ ಕಾಣುವಂತಹ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಹಾಗೇಯೇ ಇಲ್ಲಿರುವಂತ ಬೆಟ್ಟ, ಗುಡ್ಡ ಕಣಿವೆ ಪ್ರದೇಶಗಳು, ದೇವಾಲಯಗಳು ನೋಡುಗರಿಗೆ ಹೊಸ ಅನುಭವವನ್ನು ಸೃಷ್ಟಿಸುತ್ತದೆ. ಇಲ್ಲಿರುವ ರೋಹ್ಟಾಂಗ್ ಪಾಸ್‌ನಲ್ಲಿ ಹಿಮಪಾತವನ್ನು ನೋಡುವುದು ಮರೆಯಲಾಗದ ಅನುಭವವನ್ನು ನೀಡುತ್ತದೆ.
ಜಮ್ಮು ಕಾಶ್ಮೀರ ಪ್ರದೇಶವು ತುಂಬಾ ಸೌಂದರ್ಯ ಬೀರುವಂತ ಪ್ರದೆಶವಾಗಿದ್ದು, ಇಲ್ಲಿರುವ ಹಿಮಾಲಯ ಪರ್ವತಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಾಗೆಯೇ ಇಲ್ಲಿ ಹರಿಯುವ ನದಿಗಳು, ಅಲ್ಲಿರುವ ಶಿಖರಗಳು ರೋಮಾಂಚನ ನೀಡುತ್ತವೆ. ಇಲ್ಲಿನ ಪ್ರವಾಸಿತಾಣಗಳಾದ ಶ್ರೀನಗರ, ಗುಲ್ಮಾರ್ಗ್, ಪಹಲ್ಗಾಮ್, ಜಮ್ಮು ಈ ಪ್ರದೇಶಗಳು ಅನೇಕ ಇತಿಹಾಸವನ್ನು ಹೊಂದಿದ್ದು, ನೋಡಲು ಸುಂದರವಾದ ಪ್ರದೇಶವಾಗಿದೆ.
ಚಳಿಗಾಲದಲ್ಲಿ ಉತ್ತರಖಾಂಡಕ್ಕೆ ಪ್ರವಾಸ ಮಾಡಿದರೆ, ಇಲ್ಲಿರುವ ಹಿಮದಿಂದ ಕೂಡಿದ ಬೆಟ್ಟಗಳು, ಓಕ್ ಕಾಡುಗಳು ನೋಡಲು ರಮಣೀಯವಾಗಿರುತ್ತವೆ. ಇವು ಪಗ್ರವಾಸಿಗರಿಗೆ ಕೈ ಬೀಸಿ ಕರೆಯುವುದರೊಂದಿಗೆ ಜನರನ್ನು ಸಂತೋಷವಾಗಿಸುತ್ತದೆ. ಇಲ್ಲಿರುವ ಕೇದರನಾಥ ದೇವಾಲಯ, ಗವರ್ಲಾ ಹಿಮಾಲಯ ಪರ್ವತ, ನೈನಿತಾಲ್ನಲ್ಲಿರುವ ರಾಜಭವನ, ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾವನಗಳು ಇತಿಹಾಸವನ್ನು ಹೊಂದಿದ್ದು, ಪ್ರವಾಸಕ್ಕೆ ಈ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದು.
ಚಳಿಗಾಲದಲ್ಲಿ ಗೋವಾ ಪ್ರವಾಸವು ಜನರನ್ನು ಸೆಳೆಯುವಂತಹ ಸ್ಥಳವಾಗಿದೆ. ಇದು ಮಕ್ಕಳಿರಲಿ, ಹಿರಿಯರಿರಲಿ ಈ ಪ್ರದೆಶದಲ್ಲಿ ಕೆಲವು ಸಮಯ ಕಳೆಯಲು ಸಹಾಯ ಮಾಡುತ್ತದೆ. ಇಲ್ಲಿರುವ ಬೀಚ್ಗಳು ಸೌಮ್ಯ ಹವಾಮಾನದಿಂದ ಕೂಡಿದ್ದು, ಜನರನ್ನು ತನ್ನಡೆಗೆ ಸೆಳೆಯುತ್ತದೆ. ಹಾಗೇ ಇಲ್ಲಿರುವ ಚರ್ಚ್ಗಳು, ದೇವಾಲಗಳು ಪುರಾತನ ಇತಿಹಾಸವನ್ನು ಹೊಂದಿದ್ದು, ನೋಡುಗರಿಗೆ ಆಕರ್ಷಣೆ ನೀಡುತ್ತದೆ.
ಹಿಮಾಚಲ ಪ್ರದೇಶ ದಟ್ಟ ಕಾಡುಗಳಲ್ಲಿ ಸ್ಥಾಪನೆಯಾದಂತಹ ಪ್ರದೇಶ. ಇದು ಚಳಿಗಾಲದಲ್ಲಿ ಸಂಪೂರ್ಣ ಹಿಮದಿಂದ ಕೂಡಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಮನಮೋಹಕ ದೇವಾಲಯಗಳು, ಚರ್ಚ್, ಹಾಗೂ ರಸ್ತೆ ಪಕ್ಕದಲ್ಲಿರುವ ಮಾಲ್ ಆಕರ್ಷಣೀಯ ಪ್ರದೇಶವಾಗಿದೆ. ಇನ್ನು ಈ ಪ್ರದೇಶಗಳು ಮಂಜಿನಿಮದ ಕೂಡಿದ್ದು, ಸ್ನೋ ಅಡ್ವೆಂಚರ್ಗಳು ಬಾರೀ ಗಮನ ಸೆಳೆಯುತ್ತವೆ. (ಏಜೆನ್ಸೀಸ್)