

US Open: ಪುರುಷರ ಗ್ರ್ಯಾಂಡ್ ಸ್ಲ್ಯಾಮ್ ಇತಿಹಾಸದಲ್ಲಿ ಅತಿ ಹೆಚ್ಚು ಹಾರ್ಡ್ ಕೋರ್ಟ್ ಪಂದ್ಯಗಳಲ್ಲಿ 191 ಗೆಲುವು ಸಾಧಿಸಿದ್ದ ಟೆನಿಸ್ ಲೆಜೆಂಡ್ ರೋಜರ್ ಫೆಡರರ್ ದಾಖಲೆಯನ್ನು ನೊವಾಕ್ ಜೊಕೊವಿಕ್ 192 ಪಂದ್ಯಗಳನ್ನು ಗೆಲ್ಲುವ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ.
ಯುಎಸ್ ಓಪನ್ ಮೂರನೇ ಸುತ್ತಿನಲ್ಲಿ ಬ್ರಿಟನ್‌ನ ಕ್ಯಾಮರೂನ್ ನಾರ್ರಿ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಸರ್ಬಿಯಾದ ನೊವಾಕ್ ಈ ಮೈಲಿಗಲ್ಲು ತಲುಪಿದ್ದಾರೆ. ಈ ಪಂದ್ಯದಲ್ಲಿ ಜೊಕೊವಿಕ್ ತಮ್ಮ ಬಲಿಷ್ಟವಾದ ಆಟ ಮತ್ತು ಕೌಶಲ್ಯವನ್ನು ಪ್ರದರ್ಶಿಸಿ 6-4, 6-7 (3-7), 6-2, 6-3 ಸೆಟ್‌ಗಳಿಂದ ಜಯಗಳಿಸಿದರು. ಈ ಜಯದೊಂದಿಗೆ ಯುಎಸ್ ಓಪನ್‌ನಲ್ಲಿ ಜೊಕೊವಿಕ್ ನಾಲ್ಕನೇ ಸುತ್ತಿಗೆ ಭರ್ತಿ ಪಡೆದಿದ್ದಾರೆ. 1991 ರಲ್ಲಿ ಜಿಮ್ಮಿ ಕಾನರ್ಸ್ ನಂತರ ಯುಎಸ್ ಓಪನ್‌ನಲ್ಲಿ 4ನೇ ಹಂತವನ್ನು ತಲುಪಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ನೋವಾಕ್ ಪಾತ್ರರಾಗಿದ್ದಾರೆ.
ಈ ಗೆಲುವಿನಿಂದ ಜೊಕೊವಿಕ್ ಯುಎಸ್ ಓಪನ್‌ನಲ್ಲಿ 16 ಸುತ್ತಿಗೆ ಪ್ರವೇಶಿಸಿದ್ದು, ಅಲ್ಲಿ ಜಾನ್-ಲೆನ್ನಾರ್ಡ್ ಸ್ಟ್ರಫ್ರನ್ನು ಎದುರಿಸಲಿದ್ದಾರೆ. ಕಳೆದ ವರ್ಷದ ಸೆಮಿಫೈನಲಿಸ್ಟ್ ಫ್ರಾನ್ಸಿಸ್ ಟಿಯಾಫೊ ಅವರನ್ನು ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ಜರ್ಮನ್ ಆಟಗಾರ ಈ ಹಿಂದೆ ಸುದ್ದಿಯಾಗಿದ್ದರು. ದಾಖಲೆಯ 25 ನೇ ಗ್ರ್ಯಾಂಡ್ ಸ್ಲ್ಯಾಮ್ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ.
ದೈಹಿಕ ಸವಾಲುಗಳ ಹೊರತಾಗಿಯೂ, ಜೊಕೊವಿಕ್ ತಮ್ಮ ಫಾರ್ಮ್ ಮತ್ತು ಫಿಟ್ನೆಸ್ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಎದುರಾಳಿಗಳಿಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದಿರುವ ಬಗ್ಗೆ ಅವರು ಪ್ರಸ್ತಾಪಿಸಿದರು, ಆದರೆ ನಾನು ಮೊದಲಿನಂತೆ ಬಲಿಷ್ಠನಾಗಿದ್ದೇನೆ ಎಂದಿದ್ದಾರೆ.
ನಾನು ಇನ್ನೂ ನನ್ನ ಗುರಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇಂದು ನಾನು ಟೂರ್ನಮೆಂಟ್‌ನಲ್ಲಿ ಇದುವರೆಗೆ ಆಡಿದ ಅತ್ಯುತ್ತಮ ಆಟವಾಡಿದ್ದೇನೆ ಎಂದು ಜೊಕೊವಿಕ್ ತಿಳಿಸಿದರು. ಫಿಟ್ನೆಸ್ ಬಗ್ಗೆ ಮಾತನಾಡಿದ ನೊವಾಕ್, ನಿಮಗೆ ಕೆಲವು ಏರಿಳಿತಗಳಿವೆ ಆದರೆ ನೀವು ನಿಮ್ಮ ಪ್ರತಿಸ್ಪರ್ಧಿಗಳಿಗೆ ಹೆಚ್ಚು ಬಹಿರಂಗಪಡಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)