ಪಾಕಿಸ್ತಾನ ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ದವಾಗಿದೆ: ಪಾಕ್​ ವಿದೇಶಾಂಗ ಸಚಿವ| Ishaq Dar

Ishaq Dar 30
Published on

Ishaq Dar: ಪಾಕಿಸ್ತಾನವು ಭಾರತದೊಂದಿಗೆ ಮಾತುಕತೆಗಾಗಿ ಬೇಡಿಕೊಳ್ಳುವುದಿಲ್ಲ ಎಂದು ಪಾಕ್​ ವಿದೇಶಾಂಗ ಸಚಿವ ಇಶಾಕ್ ದಾರ್ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮ ಸಂವಾದದ ಸಂದರ್ಭದಲ್ಲಿ ಮಾತನಾಡಿದ ಪಾಕ್​ ವಿದೇಶಾಂಗ ಸಚಿವ, ಜಮ್ಮು ಮತ್ತು ಕಾಶ್ಮೀರ ವಿವಾದ ಸೇರಿದಂತೆ ಎಲ್ಲಾ ಬಾಕಿ ಇರುವ ವಿಷಯಗಳ ಕುರಿತು ಭಾರತದೊಂದಿಗೆ ಘನತೆ ಮತ್ತು ಗೌರವಯುತ ರೀತಿಯಲ್ಲಿ ಸಂವಾದಕ್ಕೆ ಪಾಕಿಸ್ತಾನ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಮುಂದುವರೆದ ಮಾತನಾಡಿದ ಇಶಾಕ್​ ದಾರ್, ನಮ್ಮ ಮೇಲೆ ಯಾವುದೇ ಆಕ್ರಮಣ ನಡೆದರೆ ಭಾರತಕ್ಕೆ ಸಂಪೂರ್ಣ ಬಲದಿಂದ ಪ್ರತೀಕಾರ ತೀರಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಇಂಡೋ-ಪಾಕ್​ ಸಂಘರ್ಷದ ಬಗ್ಗೆ ಮಾತನಾಡಿದ ದಾರ್, ಪಾಕಿಸ್ತಾನದ ಮಾತುಗಳನ್ನು ಜಾಗತಿಕ ಮಟ್ಟದಲ್ಲಿ ಪೂರ್ವಭಾವಿಯಾಗಿ ರಾಜತಾಂತ್ರಿಕತೆಯ ಮೂಲಕ ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಭಾರತದೊಂದಿಗಿನ ಸಂಘರ್ಷದಲ್ಲಿ ಪಾಕಿಸ್ತಾನಿ ಪಡೆಗಳು ಗಾಳಿಯಲ್ಲಿ ಮತ್ತು ಭೂಮಿಯಲ್ಲಿ ತಮ್ಮ ಪರಾಕ್ರಮವನ್ನು ಪ್ರದರ್ಶಿಸಿವೆ.ಅಲ್ಲದೆ, ಯಾವುದೇ ಪ್ರಚೋದನೆಗೆ ಸಂಪೂರ್ಣವಾಗಿ ಪ್ರತಿಕ್ರಿಯಿಸುವುದಾಗಿ ದಾರ್​ ಎಚ್ಚರಿಸಿದೆ ನೀಡಿದ್ದಾರೆ.

ಸಮುದ್ರದ ಮೂಲಕ ಪಾಕ್​ ಮೇಲೆ ಯಾವುದೇ ಆಕ್ರಮಣ ಮಾಡಿದರೆ ಭಾರತಕ್ಕೆ ಸಂಪೂರ್ಣ ಬಲದಿಂದ ಪ್ರತಿಕ್ರಿಯಿಸಲು ಪಾಕಿಸ್ತಾನ ಸಿದ್ಧವಾಗಿದೆ ದಾರ್​ ಹೇಳಿದ್ದಾರೆ.

ಭಯೋತ್ಪಾದನೆಯ ನಿಲ್ಲುವವರೆಗೂ ಪಾಕ್​ ಜತೆ ಮಾತುಕತೆ ಇಲ್ಲ: ಭಾರತದ ದೃಢ ನಿಲುವು

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ, ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರವನ್ನು ಪ್ರಾರಂಭಿಸಿತು. ಪಾಕಿಸ್ತಾನವು ತನ್ನ ಭಯೋತ್ಪಾದಕ ವ್ಯವಸ್ಥೆಯನ್ನು ನಾಶಪಡಿಸುವವರೆಗೆ ಮತ್ತು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ಖಾಲಿ ಮಾಡುವವರೆಗೆ ಮಾತುಕತೆ ಪುನರಾರಂಭಿಸಲು ಸಾಧ್ಯವಿಲ್ಲ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net