

ಬೆಂಗಳೂರು: ಇತ್ತೀಚೆಗೆ ನಿದ್ರಾಹೀನತೆ ಎಲ್ಲರಲ್ಲೂ ಕಾಡುತ್ತಿರುವ ಸಮಸ್ಯೆಯಾಗಿದೆ. ನಮ್ಮ ಜೀವನಶೈಲಿಯೇ ನಿದ್ರಾಹೀನತೆಗೆ ಮುಖ್ಯ ಕಾರಣ ಎಂದು ತಜ್ಱರು ತಿಳಿಸುತ್ತಾರೆ. ರಕ್ತದೊತ್ತಡ, ಸುಸ್ತು, ರಕ್ತದ ಮಟ್ಟದಲ್ಲಿ ಏರುಪೇರು ಮೊದಲಾದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ನಿದ್ರಾಹೀನತೆ ಕಾರಣವಾಗುತ್ತದೆ. ಒಳ್ಳೆಯ ಗುಣಮಟ್ಟದ ರಾತ್ರಿ ನಿದ್ದೆ ಇಲ್ಲದೆ ಹೋದರೆ ದಿನದ ಮೂಡ್ ಹಾಳಾಗಿ ಹೋಗುತ್ತದೆ. ಪ್ರತಿಯೊಬ್ಬ ಮನುಷ್ಯ ಕೂಡ ಸರಿಯಾಗಿ ನಿದ್ದೆ ಮಾಡುವುದು ಅತ್ಯಗತ್ಯ. ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ನಿದ್ರಾಹೀನತೆ ಸಮಸ್ಯೆಯನ್ನು ದೂರಗೊಳಿಸಿ ಆರೋಗ್ಯಕರ ಜೀವನವನ್ನು ನಡೆಸಬಹುದು. ಅಂತಹ ಕೆಲವು ಬದಲಾವಣೆಗಳನ್ನು ಪಟ್ಟಿಯನ್ನು ಕೆಳಗೆ ತಿಳಿಸಿದೆ.
ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ 6 ಹಂತದ ಬೆಳಗಿನ ದಿನಚರಿ
5) ತಿನ್ನುವ ಸಮಯ
ರಾತ್ರಿ ಮಲಗುವ ಮೂರು ಗಂಟೆಯ ಮೊದಲು ಆಹಾರವನ್ನು ಸೇವಿಸಿದರೆ ಬಹಳ ಒಳ್ಳೆಯದು. ಇದರಿಂದ ನಿದ್ರಾಹೀನತೆ ದೂರವಾಗುತ್ತದೆ. ಅದರೊಂದಿಗೆ ಜೀರ್ಣಕ್ರಿಯೆ ಕೂಡ ಹೆಚ್ಚಾಗುತ್ತದೆ.