

ಉತ್ತರ: ನಿಮಗೆ ಒಣ ಚರ್ಮದ ಸಮಸ್ಯೆ ಇದೆ ಎನಿಸುತ್ತದೆ. ಹಾಗಿದ್ದಲ್ಲಿ ಪ್ರತಿದಿವಸ 2 ಚಮಚದಷ್ಟಾದರೂ ತುಪ್ಪವನ್ನು ಸೇವಿಸಿ. ಕನಿಷ್ಠ 3 ಲೀ. ನೀರು ಕುಡಿಯಿರಿ.
ಎಳ್ಳು, ಉಚ್ಚೆಳ್ಳು, ಬಾದಾಮಿಯನ್ನು ಪ್ರತಿದಿನ ಸೇವಿಸಿ. ಸೌತೆಕಾಯಿ, ಹೀರೇಕಾಯಿ, ಸೊಪ್ಪುಗಳು, ಸೋರೆಕಾಯಿ, ಬೆಂಡೆಕಾಯಿ ಮುಂತಾದ ನಾರಿನಾಂಶ ಅಧಿಕವಿರುವ ತರಕಾರಿಗಳನ್ನು ಸೇವಿಸಿ. ದಿನಕ್ಕೊಮ್ಮೆ ಬಾಳೆಹಣ್ಣನ್ನು ಪೇಸ್ಟ್ ಮಾಡಿ ತುಟಿಗೆ ಲೇಪಿಸಿಕೊಳ್ಳಿ. ಪ್ರತಿದಿನ ರಾತ್ರಿ ಬೆಳಗ್ಗೆ ತುಪ್ಪವನ್ನು ಲೇಪಿಸಿಕೊಳ್ಳಿ. ತುಟಿಯನ್ನು ನಾಲಿಗೆಯಿಂದ ಸವರುತ್ತಿರಬೇಡಿ. ತುಟಿಗಳಿಗೆ ಬೀಟ್‍ರೂಟ್ ಮತ್ತು ಕ್ಯಾರೆಟ್ ಪೇಸ್ಟ್ ತಯಾರಿಸಿ ಆಗಾಗ ಹಚ್ಚುತ್ತಿರಿ.
ಡಾ.ವಸುಂಧರಾ ಭೂಪತಿಯವರ ಇನ್ನೂ ಹೆಚ್ಚಿನ ಸಲಹೆಗೆ http://vijayavani.net ಆರೋಗ್ಯ ಅಂಕಣ ನೋಡಿ