

ಪ್ರಶ್ನೆ: ನನ್ನ ವಯಸ್ಸು 17. ನನಗೆ ಯೋನಿ ಭಾಗದಲ್ಲಿ ಬಹಳ ತುರಿಕೆ ಬರುತ್ತದೆ ಮತ್ತು ನೋವಾಗುತ್ತದೆ. ವೈದ್ಯರ ಬಳಿ ಹೋದಾಗ ಅವರು ಹೀಟ್ನಿಂದ ಆಗುತ್ತದೆ ಎಂದು ಕೆಲವೊಂದು ಮಾತ್ರೆ ಬರೆದುಕೊಟ್ಟರು. ಆ ಮಾತ್ರೆ ಬಳಸಿದಾಗ ಮಾತ್ರ ಕಡಿಮೆಯಾಗಿ ಮತ್ತೆ ಅದೇ ರೀತಿಯಾಗುತ್ತದೆ.
ಮೂತ್ರ ವಿಸರ್ಜಿಸುವಾಗಲೂ ಬಹಳ ಉರಿಯುತ್ತದೆ. ನನಗೆ ಬಿಳಿ ಸೆರಗು ಹೋಗುತ್ತದೆ. ಒಳ ಉಡುಪುಗಳನ್ನು ಚೆನ್ನಾಗಿ ತೊಳೆದು, ಬಿಸಿಲಿನಲ್ಲೇ ಒಣಗಿಸಿ ಉಪಯೋಗಿಸಿದರೂ ಕಡಿಮೆಯಾಗುತ್ತಿಲ್ಲ. ಏನು ಮಾಡಲಿ?
ಉತ್ತರ: ನೀವು ಪ್ರತಿದಿನ ಒಂದು ಲೀಟರ್ ನೀರಿಗೆ 4 ಚಮಚ ಬೇವಿನ ತೊಗಟೆ ಮತ್ತು ಅರಿಶಿನ ಹಾಕಿ ಕುದಿಸಿ. ಕಷಾಯ ತಯಾರಿಸಿ. ಇದರಿಂದ ದಿನಕ್ಕೆರಡು ಬಾರಿ ಜನನಾಂಗವನ್ನು ಸ್ವಚ್ಛಗೊಳಿಸಿ. ಅಲ್ಲದೆ, ಬೆಳಗ್ಗೆ ಹಾಗೂ ರಾತ್ರಿ ಊಟಕ್ಕೆ ಮುಂಚೆ ಅರ್ಧ ಲೋಡ ಬಿಸಿ ಹಾಲಿಗೆ ಅರ್ಧ ಚಮಮ ಅರಿಶಿಣ, ಅರ್ಧ ಚಮಚ ನೆಲ್ಲಿಕಾಯಿ ಪುಡಿ ಬೆರೆಸಿ ಕುಡಿಯಿರಿ.
ಆರೋಗ್ಯ ಸಂಬಂಧಿತ ಇತರ ಪರಿಹಾರಗಳಿಗೆ ಇಲ್ಲಿ ಕ್ಲಿಕ್ ಮಾಡಿ: