More

    ಮದುವೆಯಾಗಿ ಮೂರು ವರ್ಷಕ್ಕೇ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಂಡಿರುವೆ- ಪರಿಹಾರ ಹೇಳಿ

    ಮದುವೆಯಾಗಿ ಮೂರು ವರ್ಷಕ್ಕೇ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಂಡಿರುವೆ- ಪರಿಹಾರ ಹೇಳಿನನ್ನ ವಯಸ್ಸು 30. ಮದುವೆ ಆಗಿ ಮೂರು ವರ್ಷಗಳಾಗಿವೆ. ನನ್ನ ಪತಿಗೆ 35 ವರ್ಷ. ಅವರಿಗೆ ಸಕ್ಕರೆ ಕಾಯಿಲೆ ಇದೆ. ಕಳೆದ ಮೂರು ವರ್ಷದಿಂದಲೂ ಮಕ್ಕಳಾಗಲು ಪ್ರಯತ್ನಿಸುತ್ತಲೇ ಇದ್ದೇವೆ. ಆಗುತ್ತಿಲ್ಲ. ನನಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯೇ ಇಲ್ಲ. ಸಕ್ಕರೆ ಕಾಯಿಲೆ ಇದ್ದರೆ ಮಕ್ಕಳಾಗುವುದಿಲ್ಲವೇ? ನಮ್ಮ ಸಮಸ್ಯೆಗೆ ಪರಿಹಾರ ಸೂಚಿಸಿ.

    ಸಕ್ಕರೆ ಕಾಯಿಲೆಗೂ ಮಕ್ಕಳಾಗದಿರುವುದಕ್ಕೂ ಸಂಬಂಧವಿಲ್ಲ. ನಿಮ್ಮ ಮದುವೆಯಾಗಿ ಮೂರು ವರ್ಷಗಳಾಗಿರುವುದರಿಂದ ಒಮ್ಮೆ ಇಬ್ಬರೂ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಒಳಿತು. ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು ಒಳ್ಳೆಯದು. ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮುಖ್ಯ.

    ನಿಮಗೆ ಲೈಂಗಿಕ ಆಸಕ್ತಿ ಇಲ್ಲ ಎಂದಿರುವಿರಿ. ಒಮ್ಮೆ ಕೌನ್ಸೆಲಿಂಗ್​ಗೆ ಹೋಗಿ ನೋಡಿ. ಬಯಕೆ ಪರಸ್ಪರ ಗಂಡ-ಹೆಂಡಿರಲ್ಲಿ ಒಡಮೂಡಿ ದೇಹ, ಮನಸ್ಸುಗಳೆರಡೂ ಸಿದ್ಧಗೊಂಡಾಗ ಲೈಂಗಿಕ ಕ್ರಿಯೆ ಸಾಧ್ಯ. ಪರಸ್ಪರರಲ್ಲಿ ಪ್ರೀತಿ ತುಂಬಿದ ನೋಟ, ಸ್ಪರ್ಶ, ಮಾತುಕತೆ ಎಲ್ಲವೂ ಇದಕ್ಕೆ ಕಾರಣವಾಗುತ್ತವೆ. ಇಬ್ಬರೂ ಒಲವಿನಿಂದ ಲೈಂಗಿಕ ಕ್ರಿಯೆಯಲ್ಲಿ ಒಳಗೊಳ್ಳಿ, ಖಂಡಿತ ಮಕ್ಕಳಾಗುತ್ತವೆ.

    ಆರೋಗ್ಯಕ್ಕೆ ಸಂಬಂಧಿಸಿದ ಇತರ ಲೇಖನಗಳಿಗೆ ಇಲ್ಲಿ ಕ್ಲಿಕ್​ ಮಾಡಿ:
    https://www.vijayavani.net/category/%e0%b2%86%e0%b2%b0%e0%b3%8b%e0%b2%97%e0%b3%8d%e0%b2%af/

    ಪತ್ನಿಯ ಜತೆ ಲೈಂಗಿಕಕ್ರಿಯೆ ನಡೆಸಲು ಆಗುತ್ತಿಲ್ಲ, ನನ್ನ ಈ ಚಟ ಕಾರಣವಾಗಿಹೋಯ್ತಾ?

    ವೀರ್ಯ ಉತ್ಪತ್ತಿಯಾಗದಿದ್ದರೆ ವೆರಿಕೋಸ್​ ಕೂಡ ಕಾರಣವಾಗಿರಬಹುದು, ನೋಡಿ…

    ಮೆನೋಪಾಸ್‌ ನಂತರ ಪತ್ನಿಗೆ ಲೈಂಗಿಕಾಸಕ್ತಿಯೇ ಇಲ್ಲ- ನನಗೆ ದಿಕ್ಕೇ ತೋಚದಾಗಿದೆ; ಇದಕ್ಕೆ ಪರಿಹಾರವಿಲ್ಲವೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts