More

    ವೀರ್ಯ ಉತ್ಪತ್ತಿಯಾಗದಿದ್ದರೆ ವೆರಿಕೋಸ್​ ಕೂಡ ಕಾರಣವಾಗಿರಬಹುದು, ನೋಡಿ…

    ವೀರ್ಯ ಉತ್ಪತ್ತಿಯಾಗದಿದ್ದರೆ ವೆರಿಕೋಸ್​ ಕೂಡ ಕಾರಣವಾಗಿರಬಹುದು, ನೋಡಿ...ಪ್ರಶ್ನೆ: ನನಗೆ 30 ವರ್ಷ. ನನ್ನ ಪತಿಗೆ 34 ವರ್ಷ. ಮದುವೆ ಆಗಿ 5 ವರ್ಷ ಆಗಿದೆ. ಇನ್ನೂ ಮಕ್ಕಳಾಗಿಲ್ಲ. ಪತಿಗೆ ವೀರ್ಯ ಪರೀಕ್ಷೆ ಮಾಡಿಸಿದಾಗ ಕೌಂಟ್​ ಕಡಿಮೆ ಬಂದಿದೆ. ವೈದ್ಯರು ನೀಡಿದ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ನಾವೇನು ಮಾಡಬಹುದು? ಮಕ್ಕಳಾಗಬಹುದೇ?

    ಉತ್ತರ: ನಿಮ್ಮ ಪತಿಯ ವೀರ್ಯ ಪರೀಕ್ಷೆಯನ್ನು ಮತ್ತೊಮ್ಮೆ ಮಾಡಿಸಿ. ದಿಢೀರ್​ ನಿರ್ಧಾರ ಸರಿಯಲ್ಲ. ವೀರ್ಯಾಣುಗಳೇ ಉತ್ಪತ್ತಿ ಆಗುವುದಿಲ್ಲವೋ ಅಥವಾ ವೀರ್ಯಾಣುಗಳೇ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ.

    ಸ್ಕ್ಯಾನಿಂಗ್ ಮೂಲಕ ವೆರಿಕೋಸ್ ಇದೆಯಾ ಎಂಬುದನ್ನು ಸಹ ತಿಳಿದುಕೊಳ್ಳಿ. ವೆರಿಕೋಸ್ ಇದ್ದಲ್ಲಿ ಅಡ್ಡಿಯುಂಟಾಗುತ್ತಿರುತ್ತದೆ, ಅದನ್ನು ಚಿಕಿತ್ಸೆಯ ಮೂಲಕ ಸರಿಪಡಿಸಿಕೊಳ್ಳಬಹುದು. ಆದರೆ, ಇದ್ಯಾವುದೂ ಇಲ್ಲದೇ ವೀರ್ಯಾಣುಗಳ ಉತ್ಪತ್ತಿಯೇ ಇಲ್ಲವೆಂದಾದಲ್ಲಿ ಮಕ್ಕಳಾಗುವ ಸಾಧ್ಯತೆ ಇರುವುದಿಲ್ಲ. ಸುಮ್ಮನೆ ಚಿಕಿತ್ಸೆಗೆ ವೈದ್ಯರಿಂದ ವೈದ್ಯರಿಗೆ ಅಲೆದಾಡುತ್ತ ಹಣ, ಸಮಯ, ಶಕ್ತಿ ವ್ಯಯ ಮಾಡಿಕೊಳ್ಳಬೇಡಿ.

    ಯಾವುದಕ್ಕೂ ಮೊದಲು ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ. ಸೂಕ್ತ ವೈದ್ಯರ ಮಾರ್ಗದರ್ಶನ ಪಡೆಯಿರಿ. ಒಂದೊಮ್ಮೆ, ವೀರ್ಯಾಣುಗಳು ಉತ್ಪತ್ತಿಯಾಗುತ್ತಿದ್ದು, ಚಲನೆರಹಿತವಾಗಿದ್ದು, ರಚನೆಯಲ್ಲಿ ವ್ಯತ್ಯಾಸ ಹೊಂದಿದ್ದು ಅಥವಾ ವೀರ್ಯಾಣುಗಳ ಸಂಖ್ಯೆ ಕಡಿಮೆ ಇದ್ದಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ಆರೋಗ್ಯವಂತ ವೀರ್ಯಾಣುಗಳು ಹೆಚ್ಚಾಗಿ ಮಕ್ಕಳಾಗಲು ತೊಂದರೆಯಾಗುವುದಿಲ್ಲ. ಆಯುರ್ವೇದದಲ್ಲಿ ಪಂಚಕರ್ಮ ಮತ್ತು ಉತ್ತಮವಾದ ಔಷಧ ಚಿಕಿತ್ಸೆಗಳು ಲಭ್ಯ ಇವೆ.

    ಪುರುಷತ್ವ ಹೆಚ್ಚಿಸಲು ಆಯುರ್ವೇದ ಪರಿಹಾರವೇನು? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ…

    ಗರ್ಭ ಧರಿಸಿದಾಗ ಮಗುಬೇಡವೆಂದು ಮಾತ್ರೆ ತೆಗೆದುಕೊಂಡೆ- ಬಿಳಿ ಸೆರಗು ಹೋಗುತ್ತಿದೆ: ಪರಿಹಾರವೇನು?

    ಗುಪ್ತಾಂಗದಲ್ಲಿ ತುರಿಕೆ, ಮೂತ್ರ ವಿಸರ್ಜನೆಯಲ್ಲಿ ಉರಿ- ಸಮಸ್ಯೆಯಾದರೆ ಹೀಗೆ ಮಾಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts