More

    ಮೈಮೇಲೆ ಕೂದಲು ಹೆಚ್ಚಿಗೆ ಇದ್ದರೆ, ಋತುಸ್ರಾವ ಏರುಪೇರಾದರೆ ಮಕ್ಕಳಾಗುವುದಿಲ್ಲವೆ?

    ಮೈಮೇಲೆ ಕೂದಲು ಹೆಚ್ಚಿಗೆ ಇದ್ದರೆ, ಋತುಸ್ರಾವ ಏರುಪೇರಾದರೆ ಮಕ್ಕಳಾಗುವುದಿಲ್ಲವೆ?ನನಗೆ 26 ವರ್ಷ, ಇನ್ನೂ ಮದುವೆ ಆಗಿಲ್ಲ. ನನಗೆ ಋತುಚಕ್ರವು ಸರಿಯಾದ ಸಮಯದಲ್ಲಿ ಆಗುವುದಿಲ್ಲ. ಒಂದೊಂದು ತಿಂಗಳಲ್ಲಿ ಒಂದೊಂದು ತರಹ ಇರುತ್ತದೆ. ಅಂದರೆ, ಒಂದು ತಿಂಗಳು 15 ದಿನಗಳವರೆಗೆ ಋತುಸ್ರಾವ ಇದ್ದರೆ, ಮತ್ತೊಂದು ತಿಂಗಳು 3 ದಿವಸ ಮಾತ್ರ ಆಗುತ್ತದೆ. 3 ವರ್ಷಗಳ ಹಿಂದೆ 3 ತಿಂಗಳಿಗೊಮ್ಮೆ ಅಥವಾ 2 ತಿಂಗಳಿಗೊಮ್ಮೆ ಆಗುತ್ತಿತ್ತು.

    ಈಗ ಹೀಗೆ. ನನ್ನ ಅಕ್ಕನಿಗೆ ಮದುವೆ ಆಗಿ 5 ವರ್ಷ ಆದರೂ ಮಕ್ಕಳಿಲ್ಲ. ಅವಳಿಗೂ ಇದೇ ತೆರನಾದ ಸಮಸ್ಯೆ ಇತ್ತು. ಮತ್ತು ಅಮ್ಮ ಸೇರಿದಂತೆ ನಮ್ಮ ಮನೆಯಲ್ಲಿ ಎಲ್ಲರಿಗೂ ಮೈಯಲ್ಲಿ ರೋಮಗಳು ಹೆಚ್ಚು. ಅದರಿಂದ ನನಗೂ ಮುಂದೆ ಮಕ್ಕಳಾಗದ ಸಮಸ್ಯೆ ಎದುರಾಗಬಹುದೇ ಎಂಬ ಭಯ ಆಗುತ್ತಿದೆ. ಈ ಸಮಸ್ಯೆಗೆ ಪರಿಹಾರ ತಿಳಿಸಿ.

    ಉತ್ತರ: ನೀವು ವಿನಾಕಾರಣ ಚಿಂತಿಸುತ್ತಿರುವಿರಿ. ಅನಿಯಮಿತ ಋತುಚಕ್ರ ರಸದೂತಗಳ ಏರುಪೇರಿನಿಂದ ಉಂಟಾಗುತ್ತದೆ. ಒಮ್ಮೆ ನೀವು ರಕ್ತ ಪರೀಕ್ಷೆ ಮಾಡಿಸಿ ಥೈರಾಯ್್ಡ ಸಮಸ್ಯೆ ಇದೆಯೇ ಎಂದು ತಿಳಿದುಕೊಳ್ಳಿ. ಅಲ್ಲದೆ, ಸ್ಕ್ಯಾನಿಂಗ್ ಮುಖಾಂತರ ಪಿಸಿಓಡಿ ಸಮಸ್ಯೆ ಇದೆಯೇ ಎಂದು ಅರಿತುಕೊಂಡಲ್ಲಿ ಚಿಕಿತ್ಸೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

    ಅಲ್ಲದೆ, ತೀವ್ರ ರಕ್ತಹೀನತೆಯಿದ್ದರೂ ಋತುಚಕ್ರ ಸರಿಯಾಗಿ ಆಗುವುದಿಲ್ಲ. ಯಾವ ಕಾರಣದಿಂದ ಸರಿಯಾಗಿ ಆಗುತ್ತಿಲ್ಲ ಎಂದು ತಿಳಿದುಕೊಂಡು ಚಿಕಿತ್ಸೆ ಪಡೆಯಿರಿ. ಅಲ್ಲದೆ, ನಿಮ್ಮ ಅಕ್ಕನಿಗೆ ಮಕ್ಕಳಾಗಿಲ್ಲವೆಂದು ಇನ್ನೂ ಮದುವೆಯೇ ಆಗದ ನೀವು ಯೋಚನೆ ಮಾಡುತ್ತಿರುವಿರಲ್ಲ? ಇದು ಅನಗತ್ಯ. ಮೈಯಲ್ಲಿ ರೋಮಗಳಿಗೂ ಮಕ್ಕಳಾಗದೆ ಇರುವುದಕ್ಕೂ ಸಂಬಂಧವಿಲ್ಲ. ಅನಿಯಮಿತ ಮುಟ್ಟು ಇದ್ದರೂ ಮಕ್ಕಳಾಗುತ್ತವೆ, ಸರಿಯಾದ ಚಿಕಿತ್ಸೆ ಮುಖ್ಯ. ಸದ್ಯ ನೀವು ಲೋಹಾಸವವನ್ನು ದಿನಕ್ಕೆರಡು ಬಾರಿ ಮೂರು ಚಮಚೆಯಷ್ಟನ್ನು ನೀರು ಬೆರೆಸಿ ಊಟದ ನಂತರ ಸೇವಿಸಿ.

    ಆರೋಗ್ಯಕ್ಕೆ ಸಂಬಂಧಿಸಿದ ಇತರ ಲೇಖನಗಳಿಗೆ ಇಲ್ಲಿ ಕ್ಲಿಕ್​ ಮಾಡಿ:
    https://www.vijayavani.net/category/%e0%b2%86%e0%b2%b0%e0%b3%8b%e0%b2%97%e0%b3%8d%e0%b2%af/

    ವೀರ್ಯ ಉತ್ಪತ್ತಿಯಾಗದಿದ್ದರೆ ವೆರಿಕೋಸ್​ ಕೂಡ ಕಾರಣವಾಗಿರಬಹುದು, ನೋಡಿ…

    ಮೆನೋಪಾಸ್‌ ನಂತರ ಪತ್ನಿಗೆ ಲೈಂಗಿಕಾಸಕ್ತಿಯೇ ಇಲ್ಲ- ನನಗೆ ದಿಕ್ಕೇ ತೋಚದಾಗಿದೆ; ಇದಕ್ಕೆ ಪರಿಹಾರವಿಲ್ಲವೆ?

    ಪತ್ನಿಯ ಜತೆ ಲೈಂಗಿಕಕ್ರಿಯೆ ನಡೆಸಲು ಆಗುತ್ತಿಲ್ಲ, ನನ್ನ ಈ ಚಟ ಕಾರಣವಾಗಿಹೋಯ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts