ನಿಮ್ಮ ದೇಹಕ್ಕೆ ಎಷ್ಟು ಪ್ರೋಟೀನ್ ಬೇಕು? ಎಲ್ಲಿ ಹೆಚ್ಚಾಗಿ ಸಿಗುತ್ತದೆ? ಇಲ್ಲಿದೆ ಉಪಯುಕ್ತ ಮಾಹಿತಿ…

protein
Published on

ಉತ್ತಮ ಸ್ನಾಯು ಬೆಳವಣಿಗೆಗೆ ನಿಯಮಿತವಾಗಿ ದೇಹಕ್ಕೆ ಬೇಕಾದಷ್ಟು ಪ್ರೋಟೀನ್​ ಸೇವನೆ ಮಾಡಬೇಕೆಂದು ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ, ವಾಸ್ತವವಾಗಿ ಪ್ರತಿಯೊಬ್ಬ ವ್ಯಕ್ತಿಗೂ ಪ್ರೋಟೀನ್​ ಅವಶ್ಯಕತೆ ಇದೆ. ಉತ್ತಮ ಆರೋಗ್ಯಕ್ಕಾಗಿ ಬೇಕೆ ಬೇಕು. ಆದರೆ, ಆರೋಗ್ಯವಂತ ವ್ಯಕ್ತಿಗೆ ಎಷ್ಟು ಪ್ರೋಟೀನ್ ಬೇಕು ಎಂಬ ಪ್ರಶ್ನೆ ಅನೇಕ ಜನರಲ್ಲಿದೆ. ಈ ಪ್ರೋಟೀನ್​ಗಳು ನಿಮ್ಮ ದೇಹದ ಮುಖ್ಯ ಬಿಲ್ಡಿಂಗ್ ಬ್ಲಾಕ್ಸ್ ಎಂಬುದು ನೆನಪಿರಲಿ.

ಪ್ರೋಟೀನ್​ ಅನ್ನು ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟ ರಚನೆ ಎಂದು ಕರೆಯಲಾಗುತ್ತದೆ. ನಮ್ಮ ದೇಹದಲ್ಲೇ ಪ್ರೋಟೀನ್​ ಉತ್ಪಾದನೆಯಾದರೂ ಸಹ ದೇಹಕ್ಕೆ ಬೇಕಾದಷ್ಟು ಪ್ರೋಟೋನ್​ಗಾಗಿ ನಾವು ಕೆಲವು ಆಹಾರಗಳನ್ನು ಆಶ್ರಯಿಸಬೇಕಾಗುತ್ತದೆ. ಮಾಂಸ, ಮೀನು, ಮೊಟ್ಟೆ ಮತ್ತು ಡೈರಿ ಉತ್ಪನ್ನಗಳನ್ನು ತಿನ್ನಲು ವೈದ್ಯರು ಸೂಚಿಸುತ್ತಾರೆ. ಈ ಆಹಾರ ಪದಾರ್ಥಗಳು ಸಾಕಷ್ಟು ಪ್ರೋಟೀನ್ ಒದಗಿಸುತ್ತದೆ. ಹೆಚ್ಚಿನ ಪ್ರೋಟೀನ್ ಸೇವನೆಯು ಉತ್ತಮ ಸ್ನಾಯು ಮತ್ತು ದೈಹಿಕ ಶಕ್ತಿಯ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ.

ಗರ್ಭಾವಸ್ಥೆಯಲ್ಲಿ ಅಂಗಾಂಶಗಳ ಬೆಳವಣಿಗೆಗೆ ದೇಹಕ್ಕೆ ಹೆಚ್ಚಿನ ಪ್ರೋಟೀನ್ ಅಗತ್ಯವಿರುತ್ತದೆ. ಪ್ರೋಟೀನ್ ತಾಯಿ ಮತ್ತು ಮಗುವಿಗೆ ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಗರ್ಭಾವಸ್ಥೆಯಲ್ಲಿ ನಿತ್ಯವೂ ಪ್ರತಿ ಕೆಜಿಗೆ 1.2-1.52 ಗ್ರಾಂ ಪ್ರೋಟೀನ್​ ಸೇವನೆಯನ್ನು ಶಿಫಾರಸು ಮಾಡಲಾಗುತ್ತದೆ. ಹಾಲುಣಿಸುವ ಸಮಯದಲ್ಲಿ ತಾಯಿಯು ಪ್ರೋಟೀನ್ ಪಡೆಯುವುದು ಬಹಳ ಮುಖ್ಯವಾಗಿದೆ.

ಸದಾ ಮೈದಾನದಲ್ಲಿ ಬೆವರು ಹರಿಸುವ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರಮಾಣದ ಪ್ರೋಟೀನ್ ಅಗತ್ಯವಿರುತ್ತದೆ. ದಿನಕ್ಕೆ ಕೆಜಿಗೆ 1.2-1.4 ಗ್ರಾಂ ಪ್ರೋಟೀನ್ ಬೇಕಿದೆ. ಪ್ರೋಟೀನ್ ಸೇವನೆಯು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಧುಮೇಹದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಪ್ರೋಟೀನ್​ ಯಾವುದರಲ್ಲಿ ದೊರೆಯುತ್ತದೆ?

ಮಾಂಸ, ಮೀನು, ಮೊಟ್ಟೆ ಮತ್ತು ಡೈರಿ ಉತ್ಪನ್ನಗಳಲ್ಲಿ ಪ್ರೋಟೀನ್ ಹೆಚ್ಚಾಗಿ ಕಂಡುಬರುತ್ತದೆ. ಅವು ನಿಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲ ಅಮೈನೋ ಆಮ್ಲಗಳನ್ನು ಹೊಂದಿರುತ್ತವೆ. ದ್ವಿದಳ ಧಾನ್ಯಗಳು ಮತ್ತು ಬೀಜಗಳು ಸಹ ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ. ಮೊಟ್ಟೆಯು ಹೆಚ್ಚಿನ ಪ್ರೋಟೀನ್ ಆಹಾರವಾಗಿದೆ. ಇದರಲ್ಲಿರುವ ವಿಟಮಿನ್​ಗಳು, ಮಿನರಲ್​ಗಳು, ಆ್ಯಂಟಿ-ಆಕ್ಸಿಡೆಂಟ್​ಗಳು ಕಣ್ಣಿಗೆ ಒಳ್ಳೆಯದು ಮತ್ತು ದೇಹಕ್ಕೆ ಅಗತ್ಯವಾದ ಆರೋಗ್ಯಕರ ಕೊಬ್ಬುಗಳನ್ನು ಸಹ ನೀಡುತ್ತದೆ. ಹೀಗಾಗಿ ನಮ್ಮ ಆಹಾರದಲ್ಲಿ ಪ್ರತಿದಿನ ಒಂದು ಮೊಟ್ಟೆ ಇರಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು.

ಮೊಟ್ಟೆ ತಿನ್ನಲು ಇಷ್ಟಪಡದವರು ಬೇಳೆಕಾಳುಗಳನ್ನು ತೆಗೆದುಕೊಳ್ಳಬಹುದು. ಇದು ಪ್ರೋಟೀನ್‌ನಲ್ಲಿ ಮಾತ್ರವಲ್ಲದೆ ಖನಿಜಗಳು, ಫೈಬರ್, ಕಬ್ಬಿಣ, ಮ್ಯಾಂಗನೀಸ್, ಪೊಟ್ಯಾಸಿಯಮ್, ರಂಜಕ ಮತ್ತು ವಿಟಮಿನ್ ಬಿ ಯಂತಹ ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net