More

    ಈ 11 ಆರೋಗ್ಯ ಪ್ರಯೋಜನಗಳು ದೊರೆಯಬೇಕಾ? ಹಾಗಾದ್ರೆ ಈ ಹಾಲನ್ನು ಮಿಸ್​ ಮಾಡಲೇಬೇಡಿ

    ಅರಿಶಿನ ಮತ್ತು ಹಾಲು ಬಹಳ ಪ್ರಯೋಜನಕಾರಿ ಆಹಾರ ಪದಾರ್ಥಗಳಾಗಿವೆ. ಅರಿಶಿನವನ್ನು ಮಿಶ್ರಣ ಮಾಡಿದಾಗ ಹಾಲಿನ ಬಣ್ಣವು ಹಳದಿ ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಇದನ್ನು ಚಿನ್ನದ ಹಾಲು ಎಂದೂ ಕರೆಯುತ್ತಾರೆ. ನೆಗಡಿ, ಕೆಮ್ಮು, ಜ್ವರ, ಗಾಯ, ಕೀಲು ನೋವಿಗೆ ಅರಿಶಿನ ಉತ್ತಮ ಮದ್ದು.

    ರಾತ್ರಿ ಮಲಗುವ ಮುನ್ನ ಅರಿಶಿನದ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಉಸಿರಾಟದ ತೊಂದರೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ತೊಡೆದುಹಾಕಲು ಅರಿಶಿನ ಹಾಲು ತುಂಬಾ ಒಳ್ಳೆಯದು. ಕ್ಯಾನ್ಸರ್ ತಡೆಗಟ್ಟುವುದರಿಂದ ಹಿಡಿದು ದೇಹದ ತೂಕ ಕಡಿಮೆ ಮಾಡುವವರೆಗೆ ಅರಿಶಿನ ಹಾಲು ಸಹಕಾರಿ.

    ಅರಿಶಿನ ಹಾಲಿನ ಆರೋಗ್ಯ ಪ್ರಯೋಜನಗಳು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಮುನ್ನಡೆಸಲು ಅರಿಶಿನ ಹಾಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

    ಅರಿಶಿನ ಹಾಲಿನ ಪ್ರಮುಖ ಆರೋಗ್ಯ ಪ್ರಯೋಜನಗಳು ಹೀಗಿವೆ…
    1. ಶೀತ, ಕೆಮ್ಮು, ಗಾಯ ಮತ್ತು ನೋವಿಗೆ ಅರಿಶಿನದ ಹಾಲು ತುಂಬಾ ಪ್ರಯೋಜನಕಾರಿ.
    2. ಅರಿಶಿನ ಹಾಲು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
    3. ಅರಿಶಿನದ ಲನ್ನು ಕುಡಿಯುವುದರಿಂದ ಮೂಳೆಗಳಲ್ಲಿನ ನೋವು ನಿವಾರಣೆಯಾಗುತ್ತದೆ.
    4. ಹೊಟ್ಟೆ ನೋವು ನಿವಾರಣೆಯಾಗುತ್ತದೆ.
    5. ಅರಿಶಿನದ ಹಾಲನ್ನು ಕುಡಿಯುವುದರಿಂದ ದೇಹದಲ್ಲಿನ ಎಲ್ಲಾ ವಿಷಕಾರಿ ಅಂಶಗಳು ನಿವಾರಣೆಯಾಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯೂ ಸುಗಮವಾಗುತ್ತದೆ.
    6. ಪ್ರತಿದಿನ ಅರಿಶಿನದ ಹಾಲನ್ನು ಕುಡಿಯುವುದರಿಂದ ನಿಮ್ಮ ಮುಖ ಕಾಂತಿಯುತವಾಗುತ್ತದೆ.
    7. ಅರಿಶಿನವು ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ತುರಿಕೆ ಮತ್ತು ಮೊಡವೆ ಸಮಸ್ಯೆಗಳನ್ನು ನಿವಾರಿಸುತ್ತದೆ.
    8. ಅರಿಶಿನ ಹಾಲು ಕುಡಿಯುವುದರಿಂದ ಬೊಜ್ಜು ಕಡಿಮೆಯಾಗುತ್ತದೆ.
    9. ಅರಿಶಿನದ ಹಾಲನ್ನು ಕುಡಿಯುವುದರಿಂದ ಒತ್ತಡ ನಿವಾರಣೆಯಾಗುತ್ತದೆ ಮತ್ತು ನಿದ್ರಾಹೀನತೆಯ ಸಮಸ್ಯೆ ದೂರವಾಗುತ್ತದೆ.
    10. ಬಿಸಿ ಅರಿಶಿನ ಹಾಲನ್ನು ಕುಡಿಯುವುದರಿಂದ ಅಸ್ತಮಾ, ಬ್ರಾಂಕೈಟಿಸ್, ಶ್ವಾಸಕೋಶದಲ್ಲಿನ ಕಫ, ಸೈನಸ್ ಮುಂತಾದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
    11. ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ವಿರುದ್ಧ ಹೋರಾಡಲು ಅರಿಶಿನ ಸಹಕಾರಿಯಾಗಿದೆ.

    ಕೊನೆಗೂ ಕೊಟ್ಟ ಮಾತು ಉಳಿಸಿಕೊಂಡ ಡ್ರೋನ್​ ಪ್ರತಾಪ್! ಸಾರ್ಥಕವಾಯಿತು ಎಂದ ನೆಟ್ಟಿಗರು

    ಗೂಗಲ್​ನಲ್ಲಿ ಡ್ರೋನ್​ ಪ್ರತಾಪ್​ ಹೆಸರು ಸರ್ಚ್​ ಮಾಡಿದ್ರೆ ಏನ್​ ಉತ್ತರ ಬರುತ್ತೆ ಗೊತ್ತಾ; ನಿಜಕ್ಕೂ ಆಶ್ಚರ್ಯ ಪಡ್ತೀರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts