More

  ಗೂಗಲ್​ನಲ್ಲಿ ಡ್ರೋನ್​ ಪ್ರತಾಪ್​ ಹೆಸರು ಸರ್ಚ್​ ಮಾಡಿದ್ರೆ ಏನ್​ ಉತ್ತರ ಬರುತ್ತೆ ಗೊತ್ತಾ; ನಿಜಕ್ಕೂ ಆಶ್ಚರ್ಯ ಪಡ್ತೀರಾ

  ಬೆಂಗಳೂರು: ಈ ಹಿಂದೆ ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂಥ ಸದ್ದು ಮಾಡಿದ್ದ ಬಿಗ್​ಬಾಸ್​ ರನ್ನರ್​​ ಅಪ್​ ಪ್ರತಾಪ್​ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸೌಂಡ್​ ಮಾಡುತ್ತಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದವರಾದ ಪ್ರತಾಪ್​ ತಾವು ಈ ಹಿಂದೆ ಆಡಿ್ದ ಆ ಒಂದೇ ಒಂದು ಸುಳ್ಳಿನಿಂದ ಕುಖ್ಯಾತಿಗೆ ಒಳಗಾಗಿದ್ದರು.

  ಪ್ರತಾಪ್ 2017ರಲ್ಲಿ ಜಪಾನ್‌ನ ಟೋಕಿಯೋದಲ್ಲಿ ನಡೆದ ಅಂತರಾಷ್ಟ್ರೀಯ ಡ್ರೋನ್ ಪ್ರದರ್ಶನದಲ್ಲಿ ತಾವೇ ತಯಾರಿಸಿರುವ ಡ್ರೋನ್​ ಪ್ರದರ್ಶಿಸಿದ್ದೆ. ನೂರಕ್ಕೂ ಹೆಚ್ಚು ದೇಶಗಳ ಪ್ರತಿಭಾನ್ವಿತರು ಭಾಗವಹಿಸಿದ್ದ ಆ ಸ್ಪರ್ಧೆಯಲ್ಲಿ ನನಗೆ ಗೋಲ್ಡ್ ಮೆಡಲ್ ದೊರಕಿತ್ತು ಎಂದು ಕನ್ನಡಿಗರಿಗೆ ಸುಳ್ಳು ಹೇಳಿರುವ ಆರೋಪವನ್ನು ಎದುರಿಸುತ್ತಿದ್ದಾರೆ.

  Drone

  ಇದನ್ನೂ ಓದಿ: ಶಿಕ್ಷಕರ ಕ್ಷೇತ್ರದ ಉಪಚುನಾವಣೆ; ಕಾಂಗ್ರೆಸ್​ನ ಪುಟ್ಟಣ್ಣಗೆ ಗೆಲುವು

  ಇದೀಗ ಡ್ರೋನ್​ ಪ್ರತಾಪ್​ ಅವರ ಹೆಸರನ್ನು ಗೂಗಲ್​ನಲ್ಲಿ ನಮೂದಿಸಿದರೆ ಬೇರೆಯದ್ದೆ ತೋರಿಸುತ್ತಿದ್ದು, ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಗೂಗಲ್​ನಲ್ಲಿ ಡ್ರೋನ್​ ಪ್ರತಾಪ್​ ಎಂದು ನಮೂದಿಸಿದರೆ ಯುಟ್ಯೂಬರ್​ ಎಂದು ತೋರಿಸಲಾಗುತ್ತಿದ್ದು, ಹಲವರು ಇದಕ್ಕೆ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಯಾವ ಆಧಾರದ ಮೇಲೆ ಯುಟ್ಯೂಬರ್​ ಎಂದು ನಮೂದಿಸಲಾಗಿದೆ ಎಂದು ಈವರೆಗೆ ಸ್ಪಷ್ಟವಾಗಿಲ್ಲ.

  ಡ್ರೋನ್ ಪ್ರತಾಪ್​, ಬಿಗ್​ಬಾಸ್​ಗೆ ಹೋಗುವ ಮುನ್ನ ಟ್ರೋಲ್​ಗೆ ಗುರಿಯಾಗಿದ್ದರು. ಡ್ರೋನ್​ ನಿರ್ಮಿಸಿರುವ ಬಗ್ಗೆ ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡಿದ್ದರು. ಬಿಗ್​ಬಾಸ್ ಮನೆಗೆ ಹೋದಾಗಲೂ ಸಹ ಸ್ಪರ್ಧಿಗಳಿಂದ ತೀವ್ರ ಟೀಕೆಗಳನ್ನು ಎದುರಿಸಿದರು. ಆದರೆ ವಾರಗಳು ಕಳೆದಂತೆ ಪ್ರತಾಪ್ ಆಟ, ವ್ಯಕ್ತಿತ್ವ ಪ್ರೇಕ್ಷಕರಿಗೆ ಇಷ್ಟವಾಗುತ್ತಾ ಹೋಯ್ತು. ಗೆಲ್ಲುವ ಫೇವರೇಟ್​ಗಳಾಗಿದ್ದ ಹಲವರನ್ನು ಹಿಂದೆ ಹಾಕಿ ಪ್ರತಾಪ್ ಫಿನಾಲೆ ತಲುಪಿದರು. ಆದರೆ ಫಿನಾಲೆಯಲ್ಲಿ ಕಾರ್ತಿಕ್ ಮಹೇಶ್ ವಿಜೇತರಾದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts