More

    ಚಂಡೀಗಢ ಮೇಯರ್ ಚುನಾವಣೆ; ಎಎಪಿಯ ಕುಲದೀಪ್​ ಕುಮಾರ್​​ ವಿಜೇತ: ಸುಪ್ರೀಂ ಕೋರ್ಟ್

    ಚಂಡೀಗಢ: ಚಂಡೀಗಢ ಮೇಯರ್​ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಎಪಿ ಸದಸ್ಯ ಕುಲದೀಪ್ ಕುಮಾರ್​ ಅವರನ್ನು ವಿಜೇತ ಎಂದು ಸುಪ್ರೀಂ ಕೋರ್ಟ್​ ಘೋಷಿಸಿದೆ.

    ಚುನಾವಣಾಧಿಕಾರಿ ಅನಿಲ್​ ಮಸಿಹ್ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ನ್ಯಾಯಾಲಯ ಸೂಚಿಸಿದೆ.

    ಮತಪತ್ರ ತಿರುಚಿದ ಆರೋಪದ ಕುರಿತು ಇಂದು(ಮಂಗಳವಾರ) ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಚುನಾವಣಾ ಅಧಿಕಾರಿ ಅಸಿಂಧು ಎಂದು ಘೋಷಿಸಿದ ಮತಗಳನ್ನು ಮಾನ್ಯವೆಂದು ಪರಿಗಣಿಸಬೇಕು ಮತ್ತು ಮರುಎಣಿಕೆ ನಡೆಸಬೇಕು ಎಂದು ಆದೇಶಿಸಿತ್ತು.

    ಇದನ್ನೂ ಓದಿ: ಸಿನಿಮಾ ಗೆದ್ದಿದೆ ಆ ಖುಷಿಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ; ದರ್ಶನ್​ ಹೇಳಿಕೆಗೆ ಉಮಾಪತಿ ಟಾಂಗ್​

    ಜನವರಿ 30 ರಂದು ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಕುಲದೀಪ್ ಕುಮಾರ್ ವಿರುದ್ಧ ಬಿಜೆಪಿ ಗೆಲುವು ಸಾಧಿಸಿತ್ತು. ಚುನಾವಣಾಧಿಕಾರಿಯು ಸಮ್ಮಿಶ್ರ ಪಾಲುದಾರರ ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಿದ್ದರು.

    ನಾನು ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಚಂಡೀಗಢದ ಜನತೆ ಮತ್ತು ಇಂಡಿಯಾ ಮೈತ್ರಿಕೂಟದ ಗೆಲುವಾಗಿದೆ. ಬಿಜೆಪಿಯನ್ನು ಅಜೇಯ ಅಲ್ಲ ಎಂಬುದನ್ನು ಇದು ತೋರಿಸುತ್ತದೆ. ನಾವು ಒಗ್ಗಟ್ಟಾಗಿ ಇದ್ದರೆ ಅವರನ್ನು ಸೋಲಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಕುಲದೀಪ್​ ಕುಮಾರ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts