ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ, ಈ ತರಕಾರಿಗಳನ್ನು ಸೇವಿಸಿ Weight Loss

weight-loss-vegetables-69143808e89a1
Published on

Weight Loss : ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ನಿಮ್ಮ ಊಟವನ್ನು ಸಮತೋಲನಗೊಳಿಸಲು ಕಷ್ಟ ಪಡುತ್ತಿದ್ದೀರಾ? ನೀವು ಸೇವಿಸುವಾಗ ಕಡಿಮೆ ಕ್ಯಾಲೋರಿ, ಹೆಚ್ಚಿನ ಫೈಬರ್​ ಇರುವಂತಹ ಪದಾರ್ಥಗಳನ್ನು ಸೇರಿಸಿಕೊಳ್ಳುವುದು ಆರೋಗ್ಯಕ್ಕೆ ಬಹಳ ಉಪಯುಕ್ತವಾಗಬಹುದು. ಪೌಷ್ಟಿಕಾಂಶಗಳು ನಿಮ್ಮ ಹೊಟ್ಟೆಯನ್ನು ತುಂಬಿಸುವುದಲ್ಲದೇ, ಅಗತ್ಯವಾದ ಜೀವಸತ್ವಗಳನ್ನು ನೀಡಲು ಸಹಾಯ ಮಾಡುತ್ತದೆ. ಇದು ನೀವು ತೂಕ ಇಳಿಸಿಕೊಳ್ಳಲು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.

ಪೌಷ್ಟಿಕತಜ್ಞೆ ಮತ್ತು ಫಿಟ್ನೆಸ್ ತರಬೇತುದಾರ ಮೋಹಿತಾ ಮಸ್ಕರೇನ್ಹಸ್ ಅವರು ದೇಹನದಲ್ಲಿರುವ ತ್ವರಿತ ಕೊಬ್ಬು ನಷ್ಟಕ್ಕೆ ಒಳ್ಳೆಯ ತರಕಾರಿಗಳನ್ನು ಹಂಚಿಕೊಂಡಿದ್ದಾರೆ. ಅವರು ಇಷ್ಟು ದೊಡ್ಡ ಸಸ್ಯಾಹಾರಿ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ, ಶೇ. 90 ರಷ್ಟು ಜನರು ಈ ರೀತಿಯ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವುದಿಲ್ಲ. ಇದು ವಿಪಯಾರ್ಸ. ಹೆಚ್ಚು ತರಕಾರಿ ತಿನ್ನುವುದು ಹೊಟ್ಟೆಯನ್ನು ತುಂಬಿಸಲು ಬಹಳ ಉಪಯುಕ್ತ ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ಸುಸ್ಥಿರ ತೂಕ ನಷ್ಟದ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ ಪೌಷ್ಟಿಕತಜ್ಞೆ ಕಡಿಮೆ ಕ್ಯಾಲೋರಿ, ಹೆಚ್ಚಿನ ಫೈಬರ್ ಆಹಾರಗಳು ಕೊಬ್ಬನ್ನು ಕಡಿಮೆಗೊಳಿಸಿ, ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಹಾಗೆಯೇ ಚರ್ಮವನ್ನು ತ್ವಚೆಯಿಂದ ಕೂಡಿರುವಂತೆ ಮಾಡುತ್ತದೆ.

ತೂಕ ನಷ್ಟಕ್ಕೆ 30 ಕ್ಯಾಲೊರಿಗಳಿಗಿಂತ ಕಡಿಮೆ ಇರುವ ಅತ್ಯುತ್ತಮ ತರಕಾರಿಗಳು

1. ಸೋರೆಕಾಯಿ

ಮಾರುಕಟ್ಟೆಯಲ್ಲಿ ಸಿಗುವಂತಹ ಸೋರೇಕಾಯಿ, ಕುಂಬಳಕಾಯಿಯಂತಹ ತರಕಾರಿಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿವೆ. ಇದು ಹೆಚ್ಚಿನ ನೀರು ಮತ್ತು ಫೈಬರ್​ನ್ನು ಹೊಂದಿದ್ದು, ಸುಸ್ಥಿರ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಈ ತರಕಾರಿಗಳನ್ನು ಬೇಸಿಗೆಯಲ್ಲಿ ಸೇವಿಸುವುದರಿಂದ ದೇಹವನ್ನು ಹೈಡ್ರೀಕರಿಸುತ್ತದೆ.

2. ಸೊಪ್ಪುಗಳು

ಪಾಲಕ್, ಅಮರಂಥ್​ನಂತಹ ಸೊಪ್ಪುಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿರುತ್ತದೆ. ಇದು ಮಹಿಳೆಯರಿಗೆ ಬಹಳ ಉಪಯುಕ್ತವಾಗಿದ್ದು, ಇವುಗಳ ಸೇವನೆಯು ಆರೋಗ್ಯಕ್ಕೆ ಉತ್ತೇಜನ ನೀಡುತ್ತದೆ. ಇವು ಅಧಿಕ ಕ್ಯಾಲೋರಿ, ಫೈಬರ್ ಮತ್ತು ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದರಿಂದ ಪದೇ ಪದೇ ಆಗುವ ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ.

3. ಕ್ರೂಸಿಫೆರಸ್ ತರಕಾರಿಗಳು

ಕ್ರೂಸಿಫೆರಸ್ ತರಕಾರಿಗಳೆಂದರೆ, ಎಲೆಕೋಸು, ಹೂಕೋಸು, ಕೋಸುಗಡ್ಡೆ, ಬ್ರೊಕೊಲಿ, ಕೇಲ್, ಮೂಲಂಗಿಯಂತಹ ಸೊಪ್ಪುಗಳಿಗೆ ಕರೆಯಲಾಗುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಕಡಿಮೆ ಕ್ಯಾಲರಿ, ಹೆಚ್ಚು ಫೈಬರ್ ಮತ್ತು ನೀರಿನಾಂಶವನ್ನು ಹೊಂದಿರುವುದರಿಂದ ಇದು ದೀರ್ಘಕಾಲ ತೃಪ್ತಿ ನೀಡಿ, ಅತಿಯಾದ ಆಹಾರ ಸೇವನೆಯನ್ನು ಕಡಿಮೆ ಮಾಡುತ್ತವೆ. ಹಾಗೆಯೇ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

4. ಕ್ಯಾಪ್ಸಿಕಮ್​

ಕ್ಯಾಪ್ಸಿಕಮ್​ಗಳು ವಿಟಮಿನ್​​ ಸಿ ಯಿಂದ ಕೂಡಿವೆ. ಇದರ ಸೇವನೆಯು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ಉರಿ ತಿಳಿಸುವಿಕೆಯನ್ನು ನಿಗ್ರಹಿಸಿ, ಕೊಬ್ಬು ಆಕ್ಸಿಡೇಶನ್ ಅನ್ನು ಸುಧಾರಿಸುತ್ತದೆ. ಹಾಗೆಯೇ, ಇದು ಹೊಳೆಯುವ ಚರ್ಮ ಮತ್ತು ಕಣ್ಣಿನ ಆರೋಗ್ಯವನ್ನು ಬೆಂಬಲಿಸುತ್ತದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಈ ತರಕಾರಿ ಸೇವಿಸುವುದು ಉತ್ತಮ.

5. ಬದನೆಕಾಯಿ

ಬದನೆಕಾಯಿ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ಇದು ಮೆದುಳು ಮತ್ತು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಇದರಲ್ಲಿ ಹೆಚ್ಚು ಫೈಬರ್ ಇರುವುದರಿಂದ ಇದು ದೀರ್ಘಕಾಲ ತೃಪ್ತಿ ನೀಡುತ್ತದೆ. ಹಾಗೆಯೇ ಅತಿಯಾದ ಆಹಾರವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಿ, ಕೊಬ್ಬು ಸಂಗ್ರಹಣೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net