ವಿಚಾರಣೆ ಹಾಜರಾಗುವಂತೆ ಮಾಜಿ CM ಜಗನ್ ಮೋಹನ್ ರೆಡ್ಡಿಗೆ ಕೋರ್ಟ್​ ಸೂಚನೆ: ಏನಿದು ಪ್ರಕರಣ?

Bbau - 2025-11-12T125506.637
Published on

ಹೈದರಾಬಾದ್: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ CM ವೈಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ಹೈದರಾಬಾದ್‌ನ ವಿಶೇಷ ಕೇಂದ್ರ ತನಿಖಾ ದಳ (ಸಿಬಿಐ) ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಿಬಿಐ ಬುಧವಾರ ಸೂಚಿಸಿದೆ.

ನವೆಂಬರ್ 21 ರಂದು ಅಥವಾ ಅದಕ್ಕೂ ಮೊದಲು ಕೋರ್ಟ್​ಗೆ ಹಾಜರಾಗಲು ಖಚಿತಪಡಿಸಿಕೊಳ್ಳುವಂತೆ ನ್ಯಾಯಾಲಯ ಹೇಳಿದೆ.

ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಕೋರಿ ಜಗನ್ ಮೋಹನ್ ರೆಡ್ಡಿ ಸಲ್ಲಿಸಿದ್ದ ಮನವಿಯನ್ನು ವಿರೋಧಿಸಿ ಸಿಬಿಐ ಮಂಗಳವಾರ ಪ್ರತಿವಾದ ಸಲ್ಲಿಸಿದ ನಂತರ ಈ ನಿರ್ದೇಶನ ಬಂದಿದೆ. ಈ ಪ್ರಕರಣದಲ್ಲಿ ಪ್ರಸ್ತುತ ಜಾಮೀನಿನ ಮೇಲೆ ಜಗನ್​ ಮೋಹನ್ ರೆಡ್ಡಿ ಹೊರಗಿದ್ದಾರೆ.

2004 ಮತ್ತು 2009ರ ನಡುವೆ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಅವರ ತಂದೆ, ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಅಧಿಕಾರಾವಧಿಯಲ್ಲಿ ನಡೆದಿದ್ದ ಒಪ್ಪಂದಗಳಿಗೆ ಈ ಅಕ್ರಮ ಆಸ್ತಿ ಪ್ರಕರಣವು ಸಂಬಂಧಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net