ಈ ಸಾಮಾನ್ಯ ಲಕ್ಷಣವನ್ನು ನಿರ್ಲಕ್ಷಿಸುವುದರಿಂದ ನಿಮ್ಮ ಜೀವಕ್ಕೆ ಆಪತ್ತು! Heart burn

heart-burn-
Published on

Heart burn : ಸಾಮಾನ್ಯವಾಗಿ ಮಸಾಲೆಯುಕ್ತ ಅಥವಾ ಎಣ್ಣೆಯುಕ್ತ ಆಹಾರಗಳನ್ನು ಸೇವಿಸಿದಾಗ ಆದಷ್ಟು ಜನರು ಎದೆಯುರಿ ಸಮಸ್ಯೆಯನ್ನು ಅನುಭವಿಸುತ್ತಾರೆ. ಇದು ಸಾಮಾನ್ಯವಾಗಿ ರಾತ್ರಿ ಮಲಗಿದಾಗ ಅಥವಾ ಊಟ ಆದ ನಂತರ ಆಗುವ ಪ್ರಕ್ರಿಯೆ ಆಗಿದೆ. ಇದು ಹೊಟ್ಟೆಯಲ್ಲಿರುವ ಆಮ್ಲವು ಅನ್ನನಾಳಕ್ಕೆ ಹೋದಾಗ ಈ ರೀತಿ ಅನುಭವ ಸಂಭವಿಸುತ್ತದೆ.

ಈ ಸಮಸ್ಯೆಯು ಎದೆಯಲ್ಲಿ ಉರಿಯು ಸಂವೇದನೆ, ಬಾಯಿಯಲ್ಲಿ ಹುಳಿ, ಕಹಿ ರುಚಿ, ನುಂಗಲು ತೊಂದರೆ ಆಗುವುದು. ಮತ್ತೆ ಆ ದ್ರವವನ್ನು ಹೊರಹಾಕುವಂತಹ ಅಹಿತಕರ ಲಕ್ಷಣಗಳನ್ನು ಉಂಟು ಮಾಡುತ್ತದೆ.

ಎದೆಯುರಿ ಎಂಬುದು ಗಂಭೀರ ಸ್ಥಿತಿಯಲ್ಲ. ಆದರೆ, ಇದನ್ನು ನಿಯಂತ್ರಿಸದಿದ್ದರೆ, ಹಲವಾರು ಗಂಭೀರ ತೊಡಕುಗಳಿಗೆ ಕಾರಣವಾಗಬಹುದು. ಗ್ಯಾಸ್ಟ್ರೋಎಂಟರಾಲಜಿಸ್ಟ್, ಕರುಳಿನ ವೈದ್ಯ ಎಂದೇ ಜನಪ್ರಿಯರಾಗಿರುವ ಡಾ. ಸೌರಭ್ ಸೇಥಿ, ದೀರ್ಘಕಾಲದ ಎದೆಯುರಿ ಸಮಸ್ಯೆಗಳು ಹಾಗೂ ಅದರಿಂದ ಆಗುವಂತಹ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ನಾನು ಬಹಳ ದಿನಗಳಿಂದ ಎದೆಯುರಿಯಿಂದ ಬಳಲುತ್ತಿದ್ದ ಒಬ್ಬ ರೋಗಿಗೆ ಚಿಕಿತ್ಸೆ ನೀಡುತ್ತಿದ್ದೆ, ಆತನಿಗೆ ಅನ್ನನಾಳದ ಕ್ಯಾನ್ಸರ್​ ಬಂದಿತ್ತು. ಊಟದ ನಂತರ ಮುಚ್ಚಬೇಕಾದ ಕೆಳ ಅನ್ನನಾಳದ ಸ್ಪಿಂಕ್ಟರ್ ತೆರೆದಿರುವಾಗ ಹೊಟ್ಟೆಯ ಆಮ್ಲ ರಿಫ್ಲಕ್ಸ್ ಅನ್ನನಾಳಕ್ಕೆ ಪ್ರವೇಶಿಸಿ ಎದೆಯುರಿಗೆ ತಲುಪುತ್ತಿತ್ತು. ಇದನ್ನು ಪರೀಕ್ಷೆ ಮಾಡಿದಾಗ ಅನ್ನನಾಳದ ಕ್ಯಾನ್ಸರ್​ ಎಂದು ತಿಳಿದುಬಂದಿದೆ ಎಂದು ತಮ್ಮ ಇನ್​ಸ್ಟಾಗ್ರಾಮ್​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಎದೆಯುರಿಯನ್ನು ನಿರ್ವಹಿಸುವುದು ಹೇಗೆ?

ಯಾವುದೇ ವ್ಯಕ್ತಿಯು ಎದೆಯುರಿಯನ್ನು ಅನುಭವಿಸಲು ಪ್ರಾರಂಭಿಸಿದಾಗ ನೀವು ಎಡಭಾಗದಲ್ಲಿ ಮಲಗಲು ಪ್ರಯತ್ನಿಸಿ. ಮಲಗುವ ಕನಿಷ್ಟ 3-4 ಗಂಟೆಗಳ ಮುನ್ನ ರಾತ್ರಿ ಊಟ ಮಾಡಿ ಸೋಂಪು ಕಾಳುಗಳನ್ನು ಸೇವಿಸಿ ಇದು ಎದೆ ಉರಿಯನ್ನು ಕಡಿಮೆ ಮಾಡಬಹುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನಿತರ ಸಲಹೆಗಳು

1. ಆಹಾರದಲ್ಲಿ ಬದಲಾವಣೆಗಳು

ಪದೇ ಪದೇ ಎದೆಯುರಿಯನ್ನು ಅನುಭವಿಸುವಂತಹ ಮನುಷ್ಯನು ಅತಿಯಾದ ಖಾರವಾದ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ನಿಲ್ಲಿಸಬೇಕು. ಅದರ ಬದಲಿಗೆ ಹಣ್ಣು, ತರಕಾರಿ, ಧಾನ್ಯಗಳನ್ನು ಸೇವಿಸಿ. ಇದು ಎದೆಯುರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಸ್ವಲ್ಪ ಆಹಾರ ಸೇವಿಸಿ

ಯಾರೇ ಆಗಲಿ ಊಟವನ್ನು ಮಾಡಬೇಕಾದಾಗ ಸ್ವಲ್ಪವೇ ಮಾಡಿ, ಹೆಚ್ಚು, ಹೆಚ್ಚು ಸೇವಿಸುವುದರಿಂದ ಇದು ಹೊಟ್ಟೆಯ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಹಾಗಾಗಿ ಸ್ವಲ್ಪ ಊಟ ಮಾಡುವುದರಿಂದ ಇದು ಹಿಮ್ಮುಖ ಹರಿವಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ತಕ್ಷಣವೇ ಮಲಗಬೇಡಿ

ಊಟ ಮಾಡಿದ ನಂತರ ತಕ್ಷಣವೇ ಮಲಗಬೇಡಿ. ಕನಿಷ್ಟ 2-3 ಗಂಟೆಗಳ ಕಾಲ ಏನಾದರೂ ಕೆಲಸ ಮಾಡುತ್ತಿರಿ. ಇದು ಜೀರ್ಣಾಂಗ ವ್ಯವಸ್ಥೆಯು ಕಾರ್ಯವನ್ನು ಮಾಡಲಿ. ಇಲ್ಲದಿದ್ದರೆ, ಸೇವಿಸಿದ ಆಹಾರ ಜೀರ್ಣವಾಗದೇ ಸಮಸ್ಯೆಯನ್ನು ಉಂಟು ಮಾಡುತ್ತದೆ.

4. ತಲೆಯನ್ನು ಮೇಲಕ್ಕೆತ್ತಿ ಮಲಗಿರಿ

ಹಾಸಿಗೆಯ ಮೇಲೆ ಮಲಗಿದಾಗ ಆದಷ್ಟು ತಲೆಯನ್ನು ಮೇಲಕ್ಕೆ ಎತ್ತಿ ಮಲಗಿರಿ. ಈ ವೇಳೆ ದಿಂಬುಗಳ ಸಹಾಯವನ್ನು ಪಡೆಯಿರಿ. ಹೀಗೆ ಮಾಡುವುದರಿಂದ ರಾತ್ರಿಯ ಹಿಮ್ಮುಖ ಹರಿವನ್ನು ತಡೆಯಲು ಸಹಾಯ ಮಾಡುತ್ತದೆ.

5. ಆಲ್ಕೋಹಾಲ್ ಹಾಗೂ ಕೆಫೀನ್​ ನಿಲ್ಲಿಸಿ

ಆಲ್ಕೋಹಾಲ್ ಮತ್ತು ಕೆಫೀನ್ ಎರಡೂ ನಿಮ್ಮ ದೇಹಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಆದರಿಂದ ನಿಮ್ಮ ಆಹಾರ ಪದ್ಧತಿಯಲ್ಲಿ ಇವುಗಳನ್ನು ಕಡಿಮೆ ಮಾಡಿ ಇಲ್ಲದಿದ್ದರೆ, ಆರೋಗ್ಯದಲ್ಲಿ ಗಂಭೀರ ಸಮಸ್ಯೆಯನ್ನು ಅನುಭವಿಸಬಹುದು.

6. ತೂಕವನ್ನು ಕಾಪಾಡಿಕೊಳ್ಳಿ

ದೇಹದಲ್ಲಿರುವ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳುವುದರಿಂದ ಹೊಟ್ಟೆಯ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ. ಇದು ಆರೋಗ್ಯದಲ್ಲಿ ಉಂಟಾಗುವ ಎದೆಯುರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

7. ಧೂಮಪಾನ ಸೇವನೆ ನಿಲ್ಲಿಸಿ

ನೀವು ಅತಿಯಾದ ಧೂಮಪಾನ ವ್ಯಸನಿಗಳಾಗಿದ್ದರೆ, ಹೇಗಾದರೂ ಮಾಡಿ ಆ ಅಭ್ಯಾಸವನ್ನು ನಿಲ್ಲಿಸಿ. ಏಕೆಂದರೆ ಇದು ಅತಿಯಾಗಿ ಎದೆಯುರಿಯುವಂತೆ ಮಾಡಿ, ಆರೋಗ್ಯವನ್ನು ಹದಗೆಡಿಸುತ್ತದೆ.

ವೈದ್ಯರನ್ನು ಭೇಟಿ ಯಾವಾಗ ಮಾಡಬೇಕು?

ನೀವು ನಿರಂತರ ಎದೆಯುರಿ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ನುಂಗಲು ತೊಂದರೆ ಉಂಟಾದರೆ, ಆಹಾರವು ನಿಮ್ಮ ಆಹಾರದ ಕೊಳವೆಯಲ್ಲಿ ಸಿಲುಕಿಕೊಂಡಂತೆ ಭಾಸವಾದಂತಹ ಸಂದರ್ಭದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡಬೇಕು ಎಂದು ಡಾ. ಸೇಥಿ ತಿಳಿಸಿದ್ದಾರೆ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net